Site icon Vistara News

Job Alert: ನ್ಯಾಷನಲ್‌ ಹೈಡ್ರೋಎಲೆಕ್ಟ್ರಿಕ್‌ ಪವರ್‌ ಕಾರ್ಪೋರೇಷನ್‌ನ 269 ಹುದ್ದೆಗಳಿಗೆ ಅರ್ಜಿ ಆಹ್ವಾನ

nhpc

nhpc

ಬೆಂಗಳೂರು: ನ್ಯಾಷನಲ್‌ ಹೈಡ್ರೋಎಲೆಕ್ಟ್ರಿಕ್‌ ಪವರ್‌ ಕಾರ್ಪೋರೇಷನ್‌ (National Hydroelectric Power Corporation) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. 269 ಟ್ರೈನಿ ಎಂಜಿನಿಯರ್‌ಗಳು ಮತ್ತು ಟ್ರೈನಿ ಆಫೀಸರ್‌ ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು (NHPC Ltd Trainee Officer & Trainee Engineer Recruitment 2024). ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಮಾರ್ಚ್‌ 26 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಟ್ರೈನಿ ಎಂಜಿನಿಯರ್ (ಸಿವಿಲ್): 91 ಹುದ್ದೆ, ವಿದ್ಯಾರ್ಹತೆ: ಬಿ.ಇ (ಸಿವಿಲ್ ಎಂಜಿನಿಯರಿಂಗ್‌)
ಟ್ರೈನಿ ಎಂಜಿನಿಯರ್ (ಮೆಕ್ಯಾನಿಕಲ್): 74 ಹುದ್ದೆ, ವಿದ್ಯಾರ್ಹತೆ: ಬಿ.ಇ (ಮೆಕ್ಯಾನಿಕಲ್ ಎಂಜಿನಿಯರಿಂಗ್‌)
ಟ್ರೈನಿ ಎಂಜಿನಿಯರ್ (ಎಲೆಕ್ಟ್ರಿಕಲ್): 72 ಹುದ್ದೆ, ವಿದ್ಯಾರ್ಹತೆ: ಬಿ.ಇ (ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌)
ಟ್ರೈನಿ ಎಂಜಿನಿಯರ್ (ಇ ಮತ್ತು ಸಿ): 4 ಹುದ್ದೆ, ವಿದ್ಯಾರ್ಹತೆ: ಬಿ.ಇ (ಎಲೆಕ್ಟ್ರಾನಿಕ್ಸ್‌ & ಕಮ್ಯುನಿಕೇಷನ್‌ ಎಂಜಿನಿಯರಿಂಗ್‌)
ಟ್ರೈನಿ ಎಂಜಿನಿಯರ್ / ಆಫೀಸರ್ (ಐಟಿ): 20 ಹುದ್ದೆ, ವಿದ್ಯಾರ್ಹತೆ: ಬಿ.ಇ (ಐಟಿ), ಸ್ನಾತಕೋತ್ತರ ಪದವಿ (ಕಂಪ್ಯೂಟರ್‌ ಅಪ್ಲಿಕೇಷನ್‌)
ಟ್ರೈನಿ ಆಫೀಸರ್ (ಜಿಯಾಲಜಿ): 3 ಹುದ್ದೆ, ವಿದ್ಯಾರ್ಹತೆ: ಎಂ.ಎಸ್‌ಸಿ. (ಜಿಯೋಲಜಿ)
ಟ್ರೈನಿ ಎಂಜಿನಿಯರ್ / ಆಫೀಸರ್ (ಪರಿಸರ): 6 ಹುದ್ದೆ, ವಿದ್ಯಾರ್ಹತೆ: ಬಿ.ಇ. / ಬಿ.ಟೆಕ್‌ (ಪರಿಸರ ಎಂಜಿನಿಯರಿಂಗ್‌) / ಎಂ.ಎಸ್‌ಸಿ. (ಪರಿಸರ ವಿಜ್ಞಾನ)

ವಯೋಮಿತಿ

ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯಸ್ಸಿನ ಸಡಿಲಿಕೆ ಇದೆ. ಒಬಿಸಿ ವರ್ಗದವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ವರ್ಗದವರಿಗೆ 5 ವರ್ಷಗಳ ವಿನಾಯಿತಿ ಲಭ್ಯ ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಸಾಮಾನ್ಯ / ಇಡಬ್ಲ್ಯುಎಸ್‌ / ಒಬಿಸಿ ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 600 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ಪಾವತಿ ವಿಧಾನ ಬಳಸಬೇಕು. ಇನ್ನು ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಬಿಡಿ / ಮಾಜಿ ಯೋಧರು / ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಗೇಟ್‌ 2023 (GATE 2023)ರ ಅಂಕ, ಗ್ರೂಪ್‌ ಡಿಸ್ಕಷನ್‌ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

NHPC Ltd Trainee Officer & Trainee Engineer Recruitment 2024ರ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಇದನ್ನೂ ಓದಿ: Job Alert: ಎಚ್‌ಎಎಲ್‌ನಲ್ಲಿದೆ 160 ಹುದ್ದೆ; ಡಿಪ್ಲೋಮಾ ಓದಿದವರು ಇಂದೇ ಅರ್ಜಿ ಸಲ್ಲಿಸಿ

Exit mobile version