ಬೆಂಗಳೂರು: ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆ ನೈವೇಲಿ ಲಿಗ್ನೈಟ್ ಕಾರ್ಪೋರೇಷನ್ ಲಿಮಿಟೆಡ್ (Neyveli Lignite Corporation Limited) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (NLC Recruitment 2024). ಸುಮಾರು 36 ಎಕ್ಸಿಕ್ಯೂಟಿವ್ ಹುದ್ದೆಗಳಿದ್ದು, ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಇಂದು (ಮೇ 20) (Job Alert). ಗಮನಿಸಿ ಸಂಜೆ 5 ಗಂಟೆಯೊಳಗೆ ನಿಮ್ಮ ಅರ್ಜಿ ಸಲ್ಲಿಕೆಯಾಗಬೇಕು.
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಎಕ್ಸಿಕ್ಯೂಟಿವ್-ಆಪರೇಷನ್: 24 ಮತ್ತು ಎಕ್ಸಿಕ್ಯೂಟಿವ್-ಮೈಂಟೆನೆನ್ಸ್: 12 ಹುದ್ದೆಗಳಿವೆ.
ಎಕ್ಸಿಕ್ಯೂಟಿವ್-ಆಪರೇಷನ್ ಹುದ್ದೆಗೆ ಕೆಮಿಕಲ್/ ಸಿ&ಐ/ ಇ&ಐ/ ಇಸಿಇ/ ಎಲೆಕ್ಟ್ರಿಕಲ್/ ಇಇಇ/ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ಎಕ್ಸಿಕ್ಯೂಟಿವ್-ಮೈಂಟೆನೆನ್ಸ್ ಹುದ್ದೆಗೆ ಸಿವಿಲ್/ ಕೆಮಿಕಲ್/ ಸಿ&ಐ/ ಇ&ಐ/ ಇಸಿಇ/ ಎಲೆಕ್ಟ್ರಿಕಲ್/ ಇಇಇ/ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಹರು.
ವಯೋಮಿತಿ ಮತ್ತು ಅರ್ಜಿ ಶುಲ್ಕ
Neyveli Lignite Corporation Limited recruitment ಅಧಿಸೂಚನೆ ಪ್ರಕಾರ ಗರಿಷ್ಠ ವಯೋಮಿತಿ 63 ವರ್ಷ. ಅರ್ಜಿ ಶುಲ್ಕವಾಗಿ ಮಾಜಿ ಯೋಧರು / ಎಸ್‌ಸಿ / ಎಸ್‌ಟಿ ವರ್ಗಕ್ಕೆ ಸೇರಿದವರು 354 ರೂ. ಮತ್ತು ಸಾಮಾನ್ಯ / ಇಡಬ್ಲ್ಯುಎಸ್ / ಒಬಿಸಿ ವಿಭಾಗದವರು 854 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್ ಪಾವತಿ ಮಾರ್ಗ ಅನುಸರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 70,000-1,00,000 ರೂ. ಮಾಸಿಕ ವೇತನ ದೊರೆಯಲಿದೆ. ಒಂದು ವರ್ಷದ ಅವಧಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ.
ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
- ಹೆಸರು ನೊಂದಾಯಿಸಿ.
- NLC Executive Apply Online ಆಯ್ಕೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
- ಅಗತ್ಯ ಡಾಕ್ಯುಮೆಂಟ್, ಫೋಟೊಗಳನ್ನು ಸೂಚಿಸಿದ ಗಾತ್ರದಲ್ಲಿ ಅಪ್‌ಲೋಡ್ ಮಾಡಿ.
- ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸರಿಯಾಗಿದ್ದರೆ ಅರ್ಜಿ ಸಲ್ಲಿಸಿ. ಅಪ್ಲಿಕೇಷನ್ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ನೋಟ್ ಮಾಡಿಟ್ಟುಕೊಳ್ಳಿ.
ಅಪ್‌ಲೋಡ್ ಮಾಡಬೇಕಾದ ದಾಖಲೆಗಳು
- ಫೋಟೊ ಹೈ ಕ್ವಾಲಿಟಿಯಲ್ಲಿದ್ದು, 2023ರ ಅಕ್ಟೋಬರ್ 1ರ ಬಳಿಕ ತೆಗೆದಿರಬೇಕು.
- ಅತ್ಯುತ್ತಮ ಕ್ಲಾಲಿಟಿಯ ಅಭ್ಯರ್ಥಿಯ ಸಹಿಯ ಫೋಟೊ.
- ಹುಟ್ಟಿದ ದಿನಾಂಕವನ್ನು ಖಾತರಿಪಡಿಸುವ ದಾಖಲೆ.
- ಎಸ್ಸೆಸ್ಸೆಲ್ಸಿ / ಶೈಕ್ಷಣಿಕ ಪ್ರಮಾಣ ಪತ್ರ.
- ಆಧಾರ್ ಕಾರ್ಡ್ನ ಪ್ರತಿ.
- ಜಾತಿ ಸರ್ಟಿಫಿಕೆಟ್.
- ಮಾಜಿ ಯೋಧರಾಗಿದ್ದರೆ ಅದರ ದಾಖಲೆ.
- ಫೋಟೊ ಮತ್ತು ಸಹಿಯ ಫೋಟೊ JPEG ಫಾರ್ಮಾಟ್ನಲ್ಲಿರಬೇಕು.
- ದಾಖಲೆಗಳು, ಡಾಕ್ಯುಮೆಂಟ್ JPEG ಅಥವಾ PDF ಫಾರ್ಮಾಟ್ನಲ್ಲಿರುವುದು ಕಡ್ಡಾಯ.
ಇದನ್ನೂ ಓದಿ: Job Alert: ಬಂಧನ್ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ದ್ವಿತೀಯು ಪಿಯು ಪಾಸಾದವರೂ ಅಪ್ಲೈ ಮಾಡಿ