Site icon Vistara News

Job Alert: ಆಯಿಲ್ ಇಂಡಿಯಾ ಕಂಪನಿಯಲ್ಲಿ 421 ಹುದ್ದೆ ಭರ್ತಿ, 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

olil india

olil india

ಬೆಂಗಳೂರು: ಎಸ್ಸೆಸ್ಸೆಲ್ಸಿ, ಐಟಿಐ ಮತ್ತು ಡಿಪ್ಲೊಮಾ ಪಾಸಾದವರಿಗೆ ಗುಡ್‌ನ್ಯೂಸ್‌. ಆಯಿಲ್ ಇಂಡಿಯಾ ಲಿಮಿಟೆಡ್ (Oil India Limited) ಖಾಲಿ ಇರುವ ಸುಮಾರು 421 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (Oil India Limited Recruitment 2023). ವರ್ಕ್‌ ಪರ್ಸನ್‌ ಹುದ್ದೆ ಇದಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜನವರಿ 30 (Job Alert).

ವಿದ್ಯಾರ್ಹತೆ ಮತ್ತು ಆಯ್ಕೆ ವಿಧಾನ

10ನೇ ತರಗತಿ, ಐಟಿಐ ಮತ್ತು ಡಿಪ್ಲೋಮಾ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು. ಪರೀಕ್ಷೆ (ಕಂಪ್ಯೂಟರ್‌ ಬೇಸ್ಡ್‌ ಟೆಸ್ಟ್‌-CBT) ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಒಟ್ಟು 100 ಅಂಕಗಳಿಗೆ ಈ ಕಂಪ್ಯೂಟರ್‌ ಆಧಾರಿತ ಪರೀಕ್ಷೆ ನಡೆಯಲಿದೆ. ಹುದ್ದೆಗೆ ಸಂಬಂಧಿತ ವಿದ್ಯಾರ್ಹತೆ ಮತ್ತು ಟೆಕ್ನಿಕಲ್ ಅರಿವಿನ ಬಗ್ಗೆ 60 ಅಂಕ, ರೀಸನಿಂಗ್, ಅರಿಥ್ಮೆಟಿಕ್‌, ಮೆಂಟಲ್ ಎಬಿಲಿಟಿ ಕುರಿತು 20 ಅಂಕ, ಇಂಗ್ಲಿಷ್ ಭಾಷೆ ಮತ್ತು ಸಾಮಾನ್ಯ ಜ್ಞಾನ ಕುರಿತು ಪ್ರಶ್ನೆಗಳಿಗೆ 20 ಅಂಕಗಳಿರುತ್ತವೆ. ಈ ಪರೀಕ್ಷೆಯಲ್ಲಿ ಶಾರ್ಟ್‌ ಲಿಸ್ಟ್‌ ಆದವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಅಂತಿಮವಾಗಿ ಮೆಡಿಕಲ್ ಟೆಸ್ಟ್‌ ನಡೆಸಿ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ವೇತನ ವಿವರ

ಎಸ್‌ಸಿ / ಎಸ್‌ಟಿ, ವಿಶೇಷ ಚೇತನ ಅಭ್ಯರ್ಥಿಗಳಿಗೆ ಶೇ. 40 ಮತ್ತು ಉಳಿದ ಅಭ್ಯರ್ಥಿಗಳಿಗೆ ಶೇ. 50ರಷ್ಟು ಅಂಕ ನಿಗದಿ ಪಡಿಸಲಾಗಿದೆ. ಆಯ್ಕೆಯಾದವರಿಗೆ 20,000 ರೂ.-35,000 ಮಾಸಿಕ ವೇತನವಿದೆ. ಅಭ್ಯರ್ಥಿಗಳ ಮೊದಲ 12 ತಿಂಗಳನ್ನು ಪ್ರೊಬೆಷನರಿ ಅವಧಿ ಎಂದು ಪರಿಗಣಿಸಲಾಗುತ್ತದೆ. ಪ್ರೊಬೆಷನರಿ ಅವಧಿ ಮುಗಿದ ಬಳಿಕ ಅಭ್ಯರ್ಥಿಗಳ ಕಾರ್ಯನಿರ್ವಹಣೆ ಗಮನಿಸಿ ಅವರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಶುಲ್ಕ ಮತ್ತು ವಯೋಮಿತಿ

ಎಸ್‌ಸಿ / ಎಸ್‌ಟಿ / ಇಡಬ್ಲ್ಯುಎಸ್‌ / ಪಿಡಬ್ಲ್ಯುಡಿ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 200 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸುವುದು ಕಡ್ಡಾಯ. ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ. ಗರಿಷ್ಠ ವಯಸ್ಸು 33 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ಇದೆ.

ಆಯಿಲ್ ಇಂಡಿಯಾ ಲಿಮಿಟೆಡ್‌ನ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಇದನ್ನೂ ಓದಿ: Job Alert: ಎನ್‌ಐಸಿಎಲ್‌ನ ಆಫೀಸರ್‌ ಹುದ್ದೆಗಳಿಗೆ ಪದವೀಧರರು ಅರ್ಜಿ ಸಲ್ಲಿಸಿ

Exit mobile version