Site icon Vistara News

Job Alert: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 2,700 ಅಪ್ರೆಂಟಿಸ್ ಶಿಪ್ ಹುದ್ದೆ; ಆಯ್ಕೆಯಾಗಲು ಏನು ಮಾಡಬೇಕು? ವಿಸ್ತೃತ ಮಾಹಿತಿ

-ಆರ್ ಕೆ ಬಾಲಚಂದ್ರ, ಬ್ಯಾಂಕಿಂಗ್ ಹಾಗೂ ಸಾಪ್ಟ್ ಸ್ಕಿಲ್ ತರಬೇತುದಾರರು ಮತ್ತು ವೃತ್ತಿ ಮಾರ್ಗದರ್ಶಕರು. ಬೆಂಗಳೂರು
ಅಪ್ರೆಂಟಿಸ್‌ಗಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು (Job Alert) ಆಹ್ವಾನಿಸಲಾಗಿದೆ. ಏಪ್ರಿಲ್ 12, 1895ರಲ್ಲಿ ಸ್ಥಾಪನೆಯಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ 103,144 ಕ್ಕೂ ಹೆಚ್ಚು ಉದ್ಯೋಗಿಗಳ ಬಲವಿದ್ದು. ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿದೆ. ಡಿಸೆಂಬರ್ 2023 ರ ಅಂತ್ಯದ ವೇಳೆಗೆ ದೇಶಾದ್ಯಂತ ಒಟ್ಟು 52,331 ಶಾಖೆಯ ವಿತರಣಾ ಜಾಲ‌ಗಳನ್ನು ಹೊಂದಿದ್ದು. 10,108 ಕ್ಕೂ ಮಿಕ್ಕಿ ದೇಶೀಯ ಶಾಖೆಗಳು, 2 ಅಂತಾರಾಷ್ಟ್ರೀಯ ಶಾಖೆಗಳು, 12,455 ಎಟಿಎಮ್‌ಗಳು ಹಾಗೂ 29,768 ವ್ಯಾಪಾರ ಕರೊಸ್ಪಾಂಡೆಂಟ್ ಗಳನ್ನು ಹೊಂದಿವೆ. ಬ್ಯಾಂಕಿನ ಸುದೀರ್ಘ ಇತಿಹಾಸದಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ನೊಂದಿಗೆ 9 ಬ್ಯಾಂಕುಗಳನ್ನು ವಿಲೀನಗೊಳಿಸಲಾಗಿದೆ. ₹ 22,90,742 ಕೋಟಿ ರೂ.ಗಿಂತ ಹೆಚ್ಚಿನ ಒಟ್ಟು ವ್ಯವಹಾರದೊಂದಿಗೆ ಅಗ್ರಗಣ್ಯ ಬ್ಯಾಂಕ್ ಎಂದು ಗುರುತಿಸಲ್ಪಟ್ಟಿದೆ. ಭವಿಷ್ಯದ ಬ್ಯಾಂಕ್ ಉದ್ಯೋಗಿಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಹಲವು ಬ್ಯಾಂಕ್‌ಗಳು ಅಪ್ರೆಂಟಿಸ್ ಶಿಪ್ ತರಬೇತಿ ನೀಡುತ್ತಿವೆ. ತರಬೇತಿ ಎನ್ನುವುದು ಕಾಯಂ ಹುದ್ದೆ ಅಲ್ಲದಿದ್ದರೂ, ಕೌಶಲ ಕಲಿಕೆಗೆ ಮತ್ತು ಭವಿಷ್ಯದಲ್ಲಿ ಬ್ಯಾಂಕ್ ಉದ್ಯೋಗಿಯಾಗಲು ಪೂರಕವಾಗುವ ನಿಟ್ಟಿನಲ್ಲಿ ಅಭ್ಯರ್ಥಿಗಳು ಸಿದ್ದರಾಗಲು ಇದು ನೆರವಾಗುತ್ತದೆ. ಇದೇ ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಿಗೆ ಅಪ್ರೆಂಟಿಸ್ ಷಿಪ್ ನೀಡಲು ಪಿ ಎನ್ ಬಿ ಬ್ಯಾಂಕ್ ಮುಂದಾಗಿದ್ದು,ಕರ್ನಾಟಕ ಸೇರಿದಂತೆ ದೇಶಾದ್ಯಂತ ಒಟ್ಟು 2,700 ಅಭ್ಯರ್ಥಿಗಳಿಗೆ ಉದ್ಯೋಗ ತರಬೇತಿ ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯದ ಸಹಭಾಗಿತ್ವದಲ್ಲಿ ಬ್ಯಾಂಕ್ ಈ ಅಪ್ರೆಂಟಿಸ್‌ ಷಿಪ್ ನೀಡುತ್ತಿದೆ. 1961ರ ಅಪ್ರೆಂಟಿಸ್‌ ಷಿಪ್ ಆಕ್ಟ್ ಪ್ರಕಾರವೇ ಈ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದ್ದು, 2024-25ನೇ ಸಾಲಿನಲ್ಲಿ ದೇಶಾದ್ಯಂತ ಒಟ್ಟು 2,700 ಅಭ್ಯರ್ಥಿಗಳಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಕರ್ನಾಟಕದ ಅಭ್ಯರ್ಥಿಗಳಿಗೆ 32 ಸ್ಥಾನಗಳನ್ನು ಮೀಸಲಿಡಲಾಗಿದೆ. ಆಸಕ್ತರು ಜುಲೈ 14 ರೊಳಗೆ ಆನ್‌ಲೈನ್ ಮೂಲಕ ಅರ್ಜಿಸಲ್ಲಿಸಬಹುದು. ಆನ್‌ಲೈನ್ ಪರೀಕ್ಷೆ ಮೂಲಕ ಕರ್ನಾಟಕ ಸೇರಿದಂತೆ ದೇಶದಾದ್ಯಂತವಿರುವ ಶಾಖೆಗಳಲ್ಲಿ ಈ ತರಬೇತಿಗೆ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಮತ್ತು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಅರ್ಹತೆಗಳೇನು?

ಕಲೆ, ವಿಜ್ಞಾನ, ವಾಣಿಜ್ಯ ಸೇರಿದಂತೆ ಯಾವುದೇ ವಿಷಯಗಳಲ್ಲಿ ಪದವಿ ಪಡೆದಿದ್ದರೂ ಅರ್ಜಿ ಸಲ್ಲಿಸುವ ಅವಕಾಶವಿದೆ. ಆದರೆ, ಅಭ್ಯರ್ಥಿಗಳು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ 2024ರ ಜೂನ್ 30ರೊಳಗೆ ಅಭ್ಯರ್ಥಿಗಳು ನಿಗದಿಪಡಿಸಿದ ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ಹೊಂದಿರಬೇಕು.

ವಯೋಮಿತಿ ಏಷ್ಟು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 30.06.2024 ಕ್ಕೆ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷದವರಾಗಿರಬೇಕು. 1996 ರ ಜುಲೈ 1 ಮತ್ತು 2004 ರ ಜೂನ್ 30 ರ ನಡುವೆ ಜನಿಸಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ನಿಯಮಾನು ಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕವೆಷ್ಟು?

ಎಲ್ಲಾ ವರ್ಗದ ಅಭ್ಯರ್ಥಿಗಳು ಶುಲ್ಕದ ಮೇಲೆ ಶೇ. 18 ರಷ್ಟು ಜಿಎಸ್‌ಟಿ ಪಾವತಿಸಬೇಕು. ಈ ಉದ್ಯೋಗ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 800 ರೂ.( Rs.800/-+GST@18% = Rs.944/-)ಎಸ್‌ಸಿ/ಎಸ್‌ಟಿ, ಮಹಿಳಾ ಅಭ್ಯರ್ಥಿಗಳು ಹಾಗೂ ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳು 600 ರೂ. ಶುಲ್ಕ(ರೂ. 600/-+GST @18%= ರೂ.708/-) ಹಾಗೂ ವಿಶೇಷ ಚೇತನ ಅಭ್ಯರ್ಥಿಗಳು 400 ರೂ. ಶುಲ್ಕ (ರೂ.400/-+GST@18%= ರೂ.472/-) ಶುಲ್ಕ ಪಾವತಿಸಬೇಕು.

ನೆನಪಿಡಿ

ದೇಶಾದ್ಯಂತ 2700 ಅಭ್ಯರ್ಥಿಗಳಿಗೆ ಅವಕಾಶ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 17.
ಪದವೀಧರರಿಗೆ ಅವಕಾಶ
ಕರ್ನಾಟಕಕ್ಕೆ ಮೀಸಲಿಟ್ಟ ಸ್ಥಾನಗಳು: 32
ಪರೀಕ್ಷಾ ದಿನಾಂಕ ಜುಲೈ 28

ವಿವರಗಳಿಗೆ: www.pnbindia.in
https://www.pnbindia.in/Recruitments.aspx. or http://bfsissc.com

ಆಯ್ಕೆ ಹೇಗೆ?

ಆನ್‌ಲೈನ್ ಲಿಖಿತ ಪರೀಕ್ಷೆ ಮೂಲಕ ಆಯ್ಕೆ ನಡೆಯಲಿದೆ.

ಪರೀಕ್ಷೆಯ ವಿಷಯಗಳೇನು?

ಕ್ರ.ಸಂಪರೀಕ್ಷೆಯ ಹೆಸರುಪ್ರಶ್ನೆಗಳ ಸಂಖ್ಯೆಗರಿಷ್ಠ ಅಂಕಒಟ್ಟು ಸಮಯಪರೀಕ್ಷಾ ಮಾಧ್ಯಮ
1ಸಾಮಾನ್ಯ/ಹಣಕಾಸು ಅರಿವು2525      60 ನಿಮಿಷಗಳು        ಇಂಗ್ಲೀಷ್ / ಹಿಂದಿ  
2ಸಾಮಾನ್ಯ ಇಂಗ್ಲೀಷ್2525
3ಕ್ವಾಂಟಿಟೇಟಿವ್ & ರೀಸನಿಂಗ್ ಅಪ್ಟಿಟ್ಯೂಡ್2525
4ಕಂಪ್ಯೂಟರ್ ಜ್ಞಾನ2525
 ಒಟ್ಟು100100 

ನೆನಪಿಡಿ

ಅಭ್ಯರ್ಥಿಗಳು ಬ್ಯಾಂಕ್ ನಿರ್ಧರಿಸಿದಂತೆ ಒಟ್ಟಾರೆಯಾಗಿ ಕನಿಷ್ಠ ಶೇಕಡಾವಾರು ಅಂಕವನ್ನು ಗಳಿಸುವ ಅಗತ್ಯವಿದೆ. ಬ್ಯಾಂಕ್ SC/ST/OBC/PwBD ಅಭ್ಯರ್ಥಿಗಳಿಗೆ ಸಾಮಾನ್ಯ ಅಭ್ಯರ್ಥಿಗಳು ಒಟ್ಟಾರೆ ಗಳಿಸುವ ಅಂಕಗಳಿಗಿಂತ 5% ವಿನಾಯತಿ ನೀಡಿದೆ. ಪ್ರತಿ ವಿಷಯಕ್ಕೆ ಕನಿಷ್ಠ ಅರ್ಹತಾ ಅಂಕಗಳನ್ನು ನಿಗದಿಪಡಿಸಿಲ್ಲ.ಹಾಗೂ ಪರೀಕ್ಷೆ ಒಂದು ಗಂಟೆಯ ಅವಧಿಯದಾಗಿದ್ದು ಗರಿಷ್ಠ 100 ಅಂಕಗಳು ಹಾಗೂ ಪರೀಕ್ಷೆ ಹಿಂದಿ ಅಥವಾ ಇಂಗ್ಲೀಷ್ ಭಾಷೆಯಲ್ಲಿ ಇರುತ್ತದೆ.

ಒಂದಿಷ್ಟು ಗಮನಿಸಿ

● ಸ್ವಂತ ಖರ್ಚಿನಲ್ಲಿಯೇ ಅಭ್ಯರ್ಥಿಗಳು ನೇಮಕ ಪ್ರಕ್ರಿಯೆಗಳಿಗೆ ಹಾಜರಾಗಬೇಕು.
● ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಕಡ್ಡಾಯ.
● ಅಂತಿಮವಾಗಿ ದಾಖಲಾತಿ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
● ಅಭ್ಯರ್ಥಿಗಳು ಸ್ಥಳೀಯ ಭಾಷೆಗಳಲ್ಲಿ ಹಿಡಿತ ಹೊಂದಿರಬೇಕು.
● 10 ಅಥವಾ ದ್ವಿತೀಯ ಪಿಯುಸಿ ಅಥವಾ ಪದವಿಯಲ್ಲಿ ಅಭ್ಯರ್ಥಿಗಳು ಸ್ಥಳೀಯ ಭಾಷೆಯನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು.
ಅಪ್ರೆಂಟಿಸ್‌ಷಿಪ್ ಒಂದು ಉದ್ಯೋಗ ತರಬೇತಿಯೇ ಹೊರತು ಬ್ಯಾಂಕ್‌ನಿಂದ ನಡೆಯುವ ನೇಮಕಾತಿ ಆಗಿರುವುದಿಲ್ಲ.
● ಅಪ್ರೆಂಟಿಸ್‌ಶಿಪ್ ಆಯ್ಕೆ ಪ್ರಕ್ರಿಯೆ ಮುಗಿಯುವ ತನಕ ಅಭ್ಯರ್ಥಿಗಳು ತಮ್ಮ ಬಾವಚಿತ್ರವನ್ನು ಬದಲಾಯಿಸಿ ಕೊಳ್ಳದಂತೆ ಸೂಚಿಸಲಾಗಿದೆ. ಆನ್‌ಲೈನ್ ಪರೀಕ್ಷೆಯ ಸಮಯದಲ್ಲಿ ಅದೇ ಬಾವಚಿತ್ರವನ್ನು ತೋರಿಸಲು ವಿಫಲವಾದರೆ ಅನರ್ಹತೆಗೆ ಕಾರಣವಾಗಬಹುದು. ಅಭ್ಯರ್ಥಿಯು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅವನು/ಅವಳು ಮಾಡಿದ ಸಹಿಯನ್ನು ಮುಂದೆಯೂ ಖಚಿತ ಪಡಿಸಿ ಕೊಳ್ಳಬೇಕು.ಅಂದರೆ ಅವನ/ಅವಳ ಕರೆ ಪತ್ರ, ಹಾಜರಾತಿ ಪತ್ರ ಇತ್ಯಾದಿಗಳಲ್ಲಿ ಮತ್ತು ಭವಿಷ್ಯದಲ್ಲಿ ಬ್ಯಾಂಕಿನೊಂದಿಗಿನ ಎಲ್ಲಾ ಪತ್ರ ವ್ಯವಹಾರಗಳಲ್ಲಿ ಸಹಿ ಒಂದೇ ಆಗಿರಬೇಕು ಮತ್ತು ಯಾವುದೇ ರೀತಿಯ ವ್ಯತ್ಯಾಸ ಇರಬಾರದು.

ಅರ್ಜಿ ಸಲ್ಲಿಸುವುದು ಹೇಗೆ?

ಎಲ್ಲಾ ಅರ್ಹ ಅರ್ಜಿದಾರರು ಅಪ್ರೆಂಟಿಸ್‌ಶಿಪ್ ಪ್ರವೇಶಕ್ಕಾಗಿ ನೋಂದಾಯಿಸಿಕೊಳ್ಳಲು ಎರಡು ವೆಬ್ ಸೈಟ್ ನ ವಿಳಾಸ ನೀಡಲಾಗಿದೆ. www.bfsissc.comನ “ವೃತ್ತಿ ಅವಕಾಶಗಳು” ವಿಭಾಗಕ್ಕೆ ಭೇಟಿ ನೀಡುವ ಮೂಲಕ ಪರೀಕ್ಷೆ ಎಂದು ಹೇಳಲಾದ ಲಿಂಕ್ ಮೇಲೆ ಕ್ಲಿಕ್ಕಿಸಿ ಅನ್ವಯವಾಗುವ ಪರೀಕ್ಷಾ ಶುಲ್ಕದ ಪಾವತಿ ಮಾಡಬೇಕು. ಅದರ ನಂತರ ಅರ್ಜಿದಾರನು ನೋಂದಾಯಿಸಿಕೊಳ್ಳಬೇಕು ಮತ್ತು ಅವನ /ಅವಳ ಪ್ರೊಫೈಲ್ ಅನ್ನು ಅಪ್ಲೋಡ್ ಮಾಡಬೇಕು. ಮೊದಲ ಬಾರಿಗೆ ನೊಂದಾಯಿಸುವವರು ಎರಡು ವಿಭಿನ್ನ ಸರ್ಕಾರಿ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗಳಲ್ಲಿ ಪ್ರತ್ಯೇಕವಾಗಿ ನೊಂದಾಯಿಸಿಕೊಳ್ಳಬೇಕು.

ಎಲ್ಲಾ ಅರ್ಜಿದಾರರು, ಆಯಾ ಅಪ್ರೆಂಟಿಸ್‌ಶಿಪ್ ಪೋರ್ಟಲ್‌ಗಳಲ್ಲಿ NAPS ಮತ್ತು/ಅಥವಾ NATS ಯಶಸ್ವಿಯಾಗಿ ನೋಂದಾಯಿಸಿದ ನಂತರ, ನಿಮ್ಮ NAPS ಅಪ್ರೆಂಟಿಸ್‌ ಶಿಪ್ಗಾಗಿ BFSISSC ಯಿಂದ ಕೋಡ್ ಸಂಖ್ಯೆ ಮತ್ತು/ಅಥವಾ NATS ದಾಖಲಾತಿ ಸಂಖ್ಯೆ ಇಮೇಲ್ ಮೂಲಕ ಬರುತ್ತದೆ. ಒಬ್ಬ ಅಭ್ಯರ್ಥಿ ಒಂದು ವಲಯಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ. ಈಗಾಗಲೇ ಅಪ್ರೆಂಟಿಸ್‌ಷಿಪ್ ಪಡೆದಿರುವವರು ಮತ್ತು ಪಡೆಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಮಾತ್ರವಲ್ಲ, ಈಗಾಗಲೇ ಉದ್ಯೋಗಕ್ಕೆ ಸೇರಿ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸೇವಾನುಭವವುಳ್ಳ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Job Interview: ಉದ್ಯೋಗ ಸಂದರ್ಶನವನ್ನು ಹೇಗೆ ಎದುರಿಸಬೇಕು? ಈ ಟಿಪ್ಸ್‌ ಫಾಲೋ ಮಾಡಿ

ಪೋರ್ಟಲ್‌ನಲ್ಲಿ ನೋಂದಾಯಿಸುವ ಮೊದಲು ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

1.ಆಧಾರ್ ಕಾರ್ಡ್
2.ವೈಯಕ್ತಿಕ ಇಮೇಲ್ ಐಡಿ (ಖಾತೆಯನ್ನು ಸಕ್ರಿಯಗೊಳಿಸಲು ಮತ್ತು ಲಾಗಿನ್ ಮಾಡಲು ಅಗತ್ಯವಿದೆ)
3.ಮೊಬೈಲ್ ಸಂಖ್ಯೆ
4.ಪಾಸ್‌ಪೋರ್ಟ್ ಸೈಜಿನ ಬಾವಚಿತ್ರ ಜೆಪಿಇಜಿ ಫಾರ್ಮೆಟ್ ನಲ್ಲಿದ್ದು, ಗಾತ್ರ: 1 MB ಗಿಂತ ಕಡಿಮೆಯಿರಬೇಕು.
5.ಪದವಿ/ತಾತ್ಕಾಲಿಕ ಪ್ರಮಾಣಪತ್ರ, ಪಿಡಿಎಪ್ ಫಾರ್ಮೆಟ್ ನಲ್ಲಿದ್ದು, 1 MB ಕ್ಕಿಂತ ಕಡಿಮೆಯಿರಬೇಕು.

ಪರೀಕ್ಷೆಯ ದಿನಾಂಕ ಯಾವುದು?

ಆನ್ ಲೈನ್ ನಲ್ಲಿ ಪರೀಕ್ಷೆ ಜುಲೈ 28, 2024 ರಂದು. (ಬದಲಾಗಬಹುದು,ವೆಬ್ ಸೈಟ್ ಗಮನಿಸುತ್ತೀರಿ)

ವಲಯವಾರು ಹುದ್ದೆಗಳೆಷ್ಟು?

ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿ ವಲಯಗಳಲ್ಲಿ ಹುದ್ದೆಗಳ ಇರುವುದರಿಂದ ಅಭ್ಯರ್ಥಿಗಳು ಅವರಿಗೆ ಅನುಕೂಲವಾಗುವ ವಲಯವನ್ನು ಆಯ್ಕೆ ಮಾಡಿಕೊಳ್ಳಬಹುದು.

State/UTCircleTotal Seats*SCSTOBCEWSUR
KarnatakaBANGALORE2232629
HUBLI1020215
Sub Total32528314

ಭಾಷಾವಾರು ನೇಮಕಾತಿ

ರಾಜ್ಯದ ಪಾಲಿನ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಥಳೀಯ ಭಾಷೆಯಲ್ಲಿ ಓದುವುದು, ಬರೆಯುವದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವುದರಲ್ಲಿ ಪ್ರವೀಣ ರಾಗಿರಬೇಕು.

ಶಾರೀರಿಕ/ ವೈದ್ಯಕೀಯ ಫಿಟ್ನೆಸ್

ಅಪ್ರೆಂಟಿಸ್‌ಗಳ ಅಂತಿಮ ಆಯ್ಕೆಯು ಅವನು/ಅವಳು ವೈದ್ಯಕೀಯವಾಗಿ ಫಿಟ್‌ ಎಂದು ಘೋಷಿಸಲ್ಪಡುವುದಕ್ಕೆ ಒಳಪಟ್ಟಿರುತ್ತದೆ.

ತರಬೇತಿಯ ಅವಧಿ ಮತ್ತು ಸ್ಟೈಪೆಂಡ್

ತರಬೇತಿಯ ಒಟ್ಟು ಅವಧಿಯು ಒಪ್ಪಂದದ ದಿನಾಂಕದಿಂದ ಒಂದು ವರ್ಷವಾಗಿರುತ್ತದೆ. ಒಂದು ವರ್ಷದ ತರಬೇತಿಯು 2 ವಾರಗಳ ಮೂಲಭೂತ ತರಬೇತಿ ಮತ್ತು 50 ವಾರಗಳ ಉದ್ಯೋಗ ತರಬೇತಿಯನ್ನು ಒಳಗೊಂಡಿರುತ್ತದೆ. ಒಂದು ವರ್ಷ ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ತಿಂಗಳಿಗೆ ಗ್ರಾಮೀಣ/ಅರೆ-ನಗರ (ರೂರಲ್/ಸೆಮಿಅರ್ಬನ್) ಪ್ರದೇಶದ ಅಭ್ಯರ್ಥಿಗಳಿಗೆ ₹10,000 ರೂ, ನಗರ(ಅರ್ಬನ್) ಪ್ರದೇಶದ ಅಭ್ಯರ್ಥಿಗಳಿಗೆ ₹12,000 ರೂ. ಹಾಗೂ ಮೆಟ್ರೊ ನಗರದ ಅಭ್ಯರ್ಥಿಗಳಿಗೆ ₹15,000 ರೂ. ತಿಂಗಳ ಸ್ಟೈಪೆಂಡ್ ನೀಡಲಾಗುತ್ತದೆ. ಇದರ ಹೊರತಾಗಿ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ.

ಇದನ್ನೂ ಓದಿ: Job Alert: ಇಂಡಿಯನ್‌ ಹೈವೇ ಮ್ಯಾನೇಜ್‌ಮೆಂಟ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ಪಡೆದವರು ಇಂದೇ ಅಪ್ಲೈ ಮಾಡಿ

ಅಪ್ರೆಂಟಿಸ್‌ಶಿಪ್‌ ಅನುಕೂಲಗಳು

ಅಪ್ರೆಂಟಿಸ್‌ಗಳಾಗಿ ನೇಮಕ ಗೊಂಡರೆ ಅದು ಬ್ಯಾಂಕ್‌ನಲ್ಲಿ ಉದ್ಯೋಗ ನೀಡಿದೆ ಎಂದರ್ಥವಲ್ಲ. ಇದೊಂದು ತರಬೇತಿಯಾಗಿದ್ದು, ಭವಿಷ್ಯದಲ್ಲಿ ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಸಹಾಯವಾಗುತ್ತದೆ. ಬ್ಯಾಂಕಿಂಗ್ ನೇಮಕಾತಿಯ ನೀತಿ ನಿಯಮಗಳನ್ನು ಕಾಲಕಾಲಕ್ಕೆ ಮಾಡಿದ ತಿದ್ದುಪಡಿಯಂತೆ, ಜೂನಿಯರ್ ಅಸೋಸಿಯೇಟ್‌ಗಳ ನೇಮಕಾತಿಯಲ್ಲಿ ಅಪ್ರೆಂಟಿಸ್‌ಗಳಿಗೆ ಹೆಚ್ಚಿನ ಮಾನ್ಯತೆ ಅಥವಾ ಆದ್ಯತೆ (weightage) ನೀಡಲಾಗುತ್ತದೆ.
ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಮತ್ತು ತರಬೇತಿ ಅವಧಿಯಲ್ಲಿ ಸಂಪೂರ್ಣವಾಗಿ ತೃಪ್ತಿದಾಯಕ ನಡವಳಿಕೆಗೆ ಒಳಪಟ್ಟಿರುವ ಅಪ್ರೆಂಟಿಸ್‌ಗಳಿಗೆ ಜೂನಿಯರ್ ಅಸೋಸಿಯೇಟ್‌ಗಳ ನೇಮಕಾತಿಯಲ್ಲಿ ಕೆಲವೊಂದು ನಿಯಮ ಸಡಿಲಿಕೆ ಮಾಡಲಾಗಿರುತ್ತದೆ.

Exit mobile version