Site icon Vistara News

Job Alert: ಎಸ್‌ವಿಸಿ ಕೋ-ಆಪರೇಟಿವ್‌ ಬ್ಯಾಂಕ್‌ನಲ್ಲಿದೆ 113 ಹುದ್ದೆ; ಏ. 9ರೊಳಗೆ ಅರ್ಜಿ ಸಲ್ಲಿಸಿ

Job Alert

ಬೆಂಗಳೂರು: ಬ್ಯಾಂಕ್‌ ಉದ್ಯೋಗಿಯಾಗಬೇಕು ಎಂದುಕೊಂಡಿದ್ದೀರಾ? ಹಾಗಾದರೆ ಇಲ್ಲಿದೆ ಸುವರ್ಣಾವಕಾಶ. ಎಸ್‌ವಿಸಿ ಕೋ-ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ (SVC Co-operative Bank) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಬ್ರ್ಯಾಂಚ್‌ ಮ್ಯಾನೇಜರ್‌, ಅಸಿಸ್ಟಂಟ್‌ ಮ್ಯಾನೇಜರ್‌ ಸೇರಿ ಸುಮಾರು 113 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ (SVC Co-operative Bank Recruitment 2024). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಏಪ್ರಿಲ್‌ 9 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಚೀಫ್ ಮ್ಯಾನೇಜರ್ – 2 ಹುದ್ದೆ, ವಿದ್ಯಾರ್ಹತೆ: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಪದವಿ, ಎಂಬಿಎ
ಕ್ಲಸ್ಟರ್ ಮ್ಯಾನೇಜರ್ – 6 ಹುದ್ದೆ, ವಿದ್ಯಾರ್ಹತೆ: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಪದವಿ
ಬ್ರ್ಯಾಂಚ್‌ ಮ್ಯಾನೇಜರ್ – 10 ಹುದ್ದೆ, ವಿದ್ಯಾರ್ಹತೆ: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಎಂಬಿಎ
ರೀಜನಲ್ ಮ್ಯಾನೇಜರ್ – 3 ಹುದ್ದೆ, ವಿದ್ಯಾರ್ಹತೆ: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಎಂಬಿಎ
ಸೇಲ್ಸ್ ಮ್ಯಾನೇಜರ್ – 15 ಹುದ್ದೆ, ವಿದ್ಯಾರ್ಹತೆ: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಎಂಬಿಎ
ಮ್ಯಾನೇಜರ್ / ಅಸಿಸ್ಟೆಂಟ್ ಮ್ಯಾನೇಜರ್ ಇನ್‌ಸ್ಟಿಟ್ಯೂಷನಲ್‌ ಸೇಲ್ಸ್‌ – 7 ಹುದ್ದೆ, ವಿದ್ಯಾರ್ಹತೆ: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಎಂಬಿಎ
ಅಸಿಸ್ಟೆಂಟ್ ಮ್ಯಾನೇಜರ್ – 20 ಹುದ್ದೆ, ವಿದ್ಯಾರ್ಹತೆ: ಸಿಎ ಅಥವಾ ಐಸಿಡಬ್ಲ್ಯುಎ, ಸಿಎಫ್‌ಎ, ಡಿಪ್ಲೋಮಾ, ಪದವಿ, ಎಂಬಿಎ, ಬಿ.ಆರ್ಕ್‌.
ಗ್ರಾಹಕ ಸೇವಾ ಅಧಿಕಾರಿ – 50 ಹುದ್ದೆ, ವಿದ್ಯಾರ್ಹತೆ: ಪದವಿ, ಎಂಬಿಎ

ಉದ್ಯೋಗ ಸ್ಥಳ ಮತ್ತು ಅರ್ಜಿ ಶುಲ್ಕ

ಆಯ್ಕೆಯಾದವರಿಗೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶ, ಹೊಸದಿಲ್ಲಿ, ತಮಿಳುನಾಡುಗಳಲ್ಲಿ ಪೋಸ್ಟಿಂಗ್‌ ನೀಡಲಾಗುತ್ತದೆ. ಯಾವ ಅಭ್ಯರ್ಥಿಗೂ ಅರ್ಜಿ ಶುಲ್ಕವಿಲ್ಲ.

ಆಯ್ಕೆ ವಿಧಾನ ಮತ್ತು ವಯೋಮಿತಿ

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಹುದ್ದೆಗೆ ಅನುಗುಣವಾಗಿ ಗರಿಷ್ಠ ವಯೋಮಿತಿ 27ರಿಂದ 55 ವರ್ಷ.

SVC Co-operative Bank Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಹೆಚ್ಚಿನ ವಿವರಗಳಿಗಾಗಿ ಬ್ಯಾಂಕ್‌ನ ವೆಬ್‌ಸೈಟ್‌ ವೀಕ್ಷಿಸಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತರು ತಮ್ಮ ರೆಸ್ಯೂಮ್‌ ಅನ್ನು ಬ್ಯಾಂಕ್‌ನ ಅಧಿಕೃತ ಇಮೇಲ್‌ careers@svcbank.comಗೆ ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬಹುದು. ರೆಸ್ಯೂಮ್‌ ಕಳುಹಿಸುವಾಗ ಗಮನಿಸಬೇಕಾದ ಅಂಶಗಳು: ಸಬ್ಜೆಕ್ಟ್‌ನಲ್ಲಿ ನೀವು ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದೀರಿ ಎನ್ನುವುದನ್ನು ದಾಖಲಿಸಿ. ಮೊಬೈಲ್‌ ನಂಬರ್‌, ಇಮೇಲ್‌ ವಿಳಾಸಗಳನ್ನು ಸರಿಯಾಗಿ ನಮೂದಿಸಿ. ಮುಂದೆ ನಿಮ್ಮೊಂದಿಗೆ ಸಂವಹನ ನಡೆಸಲು ಇದು ಬೇಕಾಗುತ್ತದೆ. ರೆಸ್ಯೂಮ್‌ ಅನ್ನು ಇಮೇಲ್‌ ಮೂಲಕ ಮಾತ್ರವೇ ಕಳುಹಿಸಬೇಕು. ಬೇರೆ ವಿಧಾನಗಳಲ್ಲಿ ಕಳುಹಿಸಿದ ರೆಸ್ಯೂಮ್‌ಗಳನ್ನು ಸ್ವೀಕರಿಸುವುದಿಲ್ಲ. ಎವಿಸಿ ಬ್ಯಾಂಕ್ ಉದ್ಯೋಗಿಗಳ ನೇಮಕಾತಿಗಾಗಿ ಯಾವುದೇ ಏಜೆಂಟ್‌ / ಏಜೆನ್ಸಿಯನ್ನು ನೇಮಿಸಿಕೊಂಡಿಲ್ಲ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Job Alert: ಬಿಎಂಟಿಸಿ 2,500 ಕಂಡಕ್ಟರ್ ಹುದ್ದೆಯ ಪರಿಷ್ಕೃತ ಅಧಿಸೂಚನೆ ಪ್ರಕಟ; ಇಲ್ಲಿ ಪರಿಶೀಲಿಸಿ

Exit mobile version