Site icon Vistara News

Job Alert: ಯುಪಿಎಸ್‌ಸಿಯಿಂದ 1,056 ಹುದ್ದೆಗಳ ಭರ್ತಿ; ಮಾ. 5ರೊಳಗೆ ಅರ್ಜಿ ಸಲ್ಲಿಸಿ

online

online

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (UPSC) ಪ್ರತಿ ವರ್ಷದಂತೆ ಈ ವರ್ಷವೂ ಭಾರತ ಸರ್ಕಾರದ ಇಲಾಖೆ, ಸಚಿವಾಲಯ, ಸಂಸ್ಥೆಗಳ ಗ್ರೂಪ್ ಎ ನಾಗರೀಕ ಸೇವೆ ಹುದ್ದೆಗಳ ಭರ್ತಿಗೆ ಪರೀಕ್ಷೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ(UPSC CSE Notification 2024). ಒಟ್ಟು 1,056 ಸಿವಿಲ್ ಸೇವೆಗಳಿಗೆ ಈ ಬಾರಿಯ ನೇಮಕ ಪ್ರಕ್ರಿಯೆ ನಡೆಸಲಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್‌ 5 (Job Alert).

ವಿದ್ಯಾರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ

ಯಾವುದೇ ಅಂಗೀಕೃತ ವಿಶ್ವವಿದ್ಯಾಲಯ / ಶಿಕ್ಷಣ ಸಂಸ್ಥೆಗಳಿಂದ ಯಾವುದೇ ವಿಷಯ / ವಿಭಾಗದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯಲಿದೆ. ಪ್ರಿಲಿಮ್ಸ್ ಪರೀಕ್ಷೆ, ಮೇನ್‌ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.

ಪರೀಕ್ಷೆ ಯಾವಾಗ?

UPSC CSE 2024 ಪ್ರಿಲಿಮ್ಸ್ ಪರೀಕ್ಷೆಯ ಮೇ 26ರಂದು ನಡೆಯಲಿದೆ. ಇದರಲ್ಲಿ ತೇರ್ಗಡೆಯಾದವರು ಮುಂದಿನ ಹಂತವಾದ ಮೇನ್‌ ಪರೀಕ್ಷೆ ಬರೆಯಲು ಅರ್ಹತೆ ಪಡೆಯುತ್ತಾರೆ. ಇದನ್ನು ಅಕ್ಟೋಬರ್‌ 19ರಂದು ಆಯೋಜಿಸಲಾಗುತ್ತದೆ. ಸಂದರ್ಶನದ ದಿನಾಂಕವನ್ನು ಬಳಿಕ ತಿಳಿಸಲಾಗುತ್ತದೆ.

ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ ವಯಸ್ಸು 32 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 3 ವರ್ಷಗಳ ಸಡಿಲಿಕೆ ಇದೆ.

ಅರ್ಜಿ ಶುಲ್ಕ

ಎಸ್‌ಸಿ / ಎಸ್‌ಟಿ / ವಿಶೇಷ ಚೇತನ ಅಭ್ಯರ್ಥಿಗಳು ಪರೀಕ್ಷಾ ಶುಲ್ಕ ಪಾವತಿಸಬೇಕಾಗಿಲ್ಲ. ಇತರ ಅಭ್ಯರ್ಥಿಗಳು ಪರೀಕ್ಷಾ ಶುಲ್ಕವಾಗಿ 100 ರೂ. ಪಾವತಿಸಬೇಕು. ಎಸ್‌ಬಿಐಯ ಯಾವುದೇ ಶಾಖೆಯಲ್ಲಿ ಈ ಹಣವನ್ನು ಪಾವತಿಸಬಹುದು ಇಲ್ಲವಾದಲ್ಲಿ ಯಾವುದೇ ಬ್ಯಾಂಕ್‌ನ ನೆಟ್‌ ಬ್ಯಾಂಕಿಂಗ್‌ ಸೇವೆ ಅಥವಾ ಕ್ರೆಡಿಟ್‌, ಡೆಬಿಟ್‌, ವೀಸಾ, ರುಪೇ ಕಾರ್ಡ್‌ ಈಲ್ಲವೇ ಯುಪಿಐ ವಿಧಾನದ ಮೂಲಕ ಇದನ್ನು ಪಾವತಿಸಬಹುದು.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

ಇದನ್ನೂ ಓದಿ: Job Alert: ಗುಡ್‌ನ್ಯೂಸ್; 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಮಾರ್ಚ್‌ 4ರಿಂದ ಅರ್ಜಿ ಸಲ್ಲಿಸಿ

Exit mobile version