Site icon Vistara News

Job News: 10 ಸಾವಿರ ಮಂದಿಗೆ ಉದ್ಯೋಗದ ಆಫರ್ ನೀಡಿದ ಟಿಸಿಎಸ್!

Tata Consultancy Services

ನವದೆಹಲಿ: ಭಾರತದ (india) ಅತೀ ದೊಡ್ಡ ಐಟಿ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (Tata Consultancy Services-TCS) ನೇಮಕಾತಿ ಡ್ರೈವ್ ನಲ್ಲಿ (recruitment drive) ಈ ಬಾರಿ ಸುಪ್ರಸಿದ್ದ ಎಂಜಿನಿಯರಿಂಗ್ (engineering) ಕಾಲೇಜುಗಳಿಂದ (colleges) ಅತೀ ಹೆಚ್ಚಿನ ಸಂಖ್ಯೆಯಲ್ಲಿ (Job News) ಹೊಸಬರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿರುವುದಾಗಿ ಅನೇಕ ಕಾಲೇಜುಗಳು ದೃಢಪಡಿಸಿವೆ.

ಕಳೆದ ತಿಂಗಳು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅಭ್ಯರ್ಥಿಗಳ ಅರಿವಿನ ಸಾಮರ್ಥ್ಯ ಮತ್ತು ಕೌಶಲ್ಯ ಪರಿಣತಿಯನ್ನು ಪರೀಕ್ಷಿಸಲು ಟಿಸಿಎಸ್ ಅಯಾನ್ ವಿನ್ಯಾಸಗೊಳಿಸಿದ ಮೌಲ್ಯಮಾಪನ ವೇದಿಕೆಯಾದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NQT) ಮೂಲಕ ಹೊಸದಾಗಿ ನೇಮಕಾತಿಯನ್ನು ಪ್ರಾರಂಭಿಸಿತ್ತು. TCS ಮತ್ತು ಟೈಟಾನ್‌ನಂತಹ ಟಾಟಾ ಗ್ರೂಪ್ ಕಂಪೆನಿಗಳನ್ನು ಹೊರತುಪಡಿಸಿ, ಹ್ಯಾಪಿಯೆಸ್ಟ್ ಮೈಂಡ್ಸ್‌ನಂತಹ ಸಂಸ್ಥೆಗಳು ನೇಮಕಾತಿಗಾಗಿ NQT ಅನ್ನು ಬಳಸುತ್ತವೆ.

ಏಪ್ರಿಲ್ 26ರಂದು ಪರೀಕ್ಷೆ

ನೇಮಕಾತಿ ಅಭಿಯಾನಕ್ಕೆ ಏಪ್ರಿಲ್ 10ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಏಪ್ರಿಲ್ 26 ರಂದು ಪರೀಕ್ಷೆಗಳು ನಡೆಯಲಿದೆ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಈಗಾಗಲೇ ಘೋಷಿಸಿದೆ.

ಇದನ್ನೂ ಓದಿ: Job Alert: ವಿವಿಧ ಇಲಾಖಾ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಿದ ಕರ್ನಾಟಕ ಲೋಕಸೇವಾ ಆಯೋಗ; ಟೈಮ್‌ ಟೇಬಲ್‌ ಇಲ್ಲಿ ವೀಕ್ಷಿಸಿ

ಏಪ್ರಿಲ್ 26ರಂದು ಮೊದಲ ಹಂತದ ನೇಮಕಾತಿ ಆದ್ಯತಾ ಕಾಲೇಜುಗಳಾಗಿದ್ದರೆ, ಎರಡನೇ ಹಂತದಲ್ಲಿ ಉಳಿದವುಗಳಿಗೆ ನಡೆಯಲಿದೆ. NQT ಮತ್ತು ಕ್ಯಾಂಪಸ್ ಪ್ಲೇಸ್‌ಮೆಂಟ್‌ಗಳು ಒಂದೇ ಎಂದು ಪ್ಲೇಸ್‌ಮೆಂಟ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬಯಿ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸಂಸ್ಥೆಯು ನಿಂಜಾ, ಡಿಜಿಟಲ್, ಪ್ರೈಮ್ ಎಂಬ ಮೂರು ವರ್ಗಗಳಿಗೆ ನೇಮಕ ಮಾಡಿಕೊಳ್ಳುತ್ತಿದೆ. ನಿಂಜಾ ವರ್ಗವು ವರ್ಷಕ್ಕೆ 3.36 ಲಕ್ಷ ರೂಪಾಯಿಗಳ ಪ್ಯಾಕೇಜ್ ಅನ್ನು ನೀಡುತ್ತದೆ. ಡಿಜಿಟಲ್ ಮತ್ತು ಪ್ರೈಮ್ ವಿಭಾಗಗಳು 7 ರಿಂದ 9- 11.5 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜ್ ಅನ್ನು ನೀಡುತ್ತವೆ.

ಡಿಜಿಟಲ್ ಮತ್ತು ಪ್ರೈಮ್ ಪ್ರೊಫೈಲ್‌ಗಳನ್ನು ಸ್ವೀಕರಿಸುವ ವಿದ್ಯಾರ್ಥಿಗಳನ್ನು ಅಭಿವೃದ್ಧಿ ಹುದ್ದೆಗಳಿಗಾಗಿ ಹಾಗೂ ನಿಂಜಾ ಪ್ರೊಫೈಲ್‌ನಲ್ಲಿರುವ ವಿದ್ಯಾರ್ಥಿಗಳನ್ನು ಸಹಕಾರ ಹುದ್ದೆಗಳಿಗಾಗಿ ಪರಿಗಣಿಸಲಾಗುತ್ತದೆ.

ಹಲವು ವಿದ್ಯಾರ್ಥಿಗಳಿಗೆ ಆಫರ್

ವಿಐಟಿ ವಿದ್ಯಾರ್ಥಿಗಳು ಒಟ್ಟು 963 ಆಫರ್ ಲೆಟರ್‌ಗಳನ್ನು ಸ್ವೀಕರಿಸಿದ್ದು, ಅದರಲ್ಲಿ 103 ಪ್ರಧಾನ ವರ್ಗಕ್ಕೆ ಸೇರಿದ್ದವು ಎಂದು ವೆಲ್ಲೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವೃತ್ತಿ ಅಭಿವೃದ್ಧಿ ಕೇಂದ್ರದ ನಿರ್ದೇಶಕ ವಿ ಸ್ಯಾಮ್ಯುಯೆಲ್ ರಾಜ್‌ಕುಮಾರ್ ತಿಳಿಸಿದ್ದಾರೆ.

ಶಾಸ್ತ್ರ ವಿಶ್ವವಿದ್ಯಾಲಯದ ಉಪಕುಲಪತಿ ಎಸ್. ವೈದ್ಯಸುಬ್ರಮಣ್ಯಂ ಮಾತನಾಡಿ, ಕಾಲೇಜಿನ 1,300 ವಿದ್ಯಾರ್ಥಿಗಳಿಗೆ 2,000 ಆಫರ್ ಲೆಟರ್‌ಗಳನ್ನು ಹಸ್ತಾಂತರಿಸಲಾಗಿದೆ. ಒಬ್ಬ ವಿದ್ಯಾರ್ಥಿಯು ಸರಾಸರಿ ಒಂದಕ್ಕಿಂತ ಹೆಚ್ಚು ಆಫರ್‌ಗಳನ್ನು ಪಡೆದಿರುವುದನ್ನು ಇದು ಸೂಚಿಸುತ್ತದೆ. ಆದರೂ TCS ನಿಂದ ನೇಮಕಗೊಂಡ ವಿದ್ಯಾರ್ಥಿಗಳಿಗೆ ಕಾಲೇಜುಗಳಿಂದ ಬ್ರೇಕಪ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.


ಟಿಸಿಎಸ್ ನೇಮಕಾತಿಯು ದೊಡ್ಡ ರೀತಿಯಲ್ಲಿ ಬಂದಿದೆ ಎಂದು ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಕೆರಿಯರ್ ಸೆಂಟರ್‌ನ ನಿರ್ದೇಶಕ ವೆಂಕಟ ನರಸಿಂಹದೇವರ ತಿಳಿಸಿದ್ದಾರೆ.

ಅನೇಕ ಸವಾಲು

ಕಾಲೇಜು ಕ್ಯಾಂಪಸ್‌ಗಳ ಬದಲಿಗೆ ಪರೀಕ್ಷೆಗಳನ್ನು ನಡೆಸಲು TCS ದೇಶಾದ್ಯಂತ ಹರಡಿರುವ ತನ್ನ iON ಕೇಂದ್ರಗಳನ್ನು ಬಳಸುತ್ತಿದೆ. ಆದರೂ ವಿಶ್ವಾಸಾರ್ಹ ಪಾಲುದಾರ ಕಾಲೇಜುಗಳ ವಿದ್ಯಾರ್ಥಿಗಳನ್ನು ಕ್ಯಾಂಪಸ್‌ಗಳಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಕೇಳಲಾಗಿದೆ. TCS ಸಾಮಾನ್ಯವಾಗಿ ಪ್ರತೀ ವರ್ಷ ಆಗಸ್ಟ್- ಸೆಪ್ಟೆಂಬರ್‌ನಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ನಡೆಸುತ್ತದೆ. ಈ ವರ್ಷ ನೇಮಕಾತಿಯಲ್ಲಿನ ವಿಳಂಬದಿಂದಾಗಿ ಅನೇಕ ಸವಾಲು ಮತ್ತು ಅವಕಾಶಗಳನ್ನು ಎದುರಿಸುತ್ತಿದೆ ಎಂದು ಪ್ಲೇಸ್‌ಮೆಂಟ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

TCS ಕೋಡಿಂಗ್‌ನಲ್ಲಿ ಉತ್ತಮ ಸಾಧನೆ ಮಾಡುವ ಅಭ್ಯರ್ಥಿಗಳನ್ನು ಹುಡುಕುತ್ತಿದೆ. ಆದರೆ ವ್ಯಾಪಾರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸೃಜನಶೀಲತೆ ಮತ್ತು ಪ್ರಾವೀಣ್ಯತೆಯನ್ನು ತೋರುವವರೂ ಬೇಕಾಗಿದೆ. ಹೆಚ್ಚಿನ ತರಬೇತಿಯ ಅಗತ್ಯವಿಲ್ಲದ ಅಭ್ಯರ್ಥಿಗಳನ್ನು ನೇಮಿಸಿಕೊಲ್ಲಲಾಗುತ್ತಿದೆ ಎಂದು ನೇಮಕಾತಿ ಅಧಿಕಾರಿಯೊಬ್ಬರು ಹೇಳಿದರು.

ನೇಮಕ ಪ್ರಕ್ರಿಯೆ ಹಿಂದೆ ಎಷ್ಟಿತ್ತು ?

TCS 2024 ರಲ್ಲಿ 40,000 ಹೊಸಬರ ನೇಮಕಾತಿಗೆ ಯೋಜನೆ ರೂಪಿಸಿದೆ ಎಂದು ಹೇಳಿತ್ತು. 2023ರಲ್ಲಿ ಕಂಪೆನಿಯು 22,600 ಮಂದಿಯ ನೇಮಕ ಮಾಡಿತ್ತು. 2022ರಲ್ಲಿ 1.03 ಲಕ್ಷ ಉದ್ಯೋಗಿಗಳ ನೇಮಕ ಮಾಡಿದೆ. ಅದಕ್ಕೆ ಹೋಲಿಸಿದರೆ ಈ ಬಾರಿ ನೇಮಕಾತಿಯಲ್ಲಿ ಗಮನಾರ್ಹ ಇಳಿಕೆಯಾಗಿದೆ.

ಪ್ರಸ್ತುತ ಐಟಿ ಕಂಪೆನಿಗಳು ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಹಂತಕ್ಕೆ ತಲುಪಿದೆ. ಇದೊಂದು ಉತ್ತಮ ಅವಕಾಶ. ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಾಗಬಹುದು ಎಂದು ಕ್ವೆಸ್ ಕಾರ್ಪ್‌ನ ಐಟಿ ಸಿಬ್ಬಂದಿ ವ್ಯವಹಾರದ ಡೆಪ್ಯೂಟಿ ಸಿಇಒ ಕಪಿಲ್ ಜೋಶಿ ತಿಳಿಸಿದ್ದಾರೆ.

Exit mobile version