Site icon Vistara News

Job News: ಸಿಆರ್‌ಪಿಎಫ್ ಆಸ್ಪತ್ರೆಗಳಲ್ಲಿ ವೈದ್ಯರಾಗಬೇಕೇ? ವಾಕ್ ಇನ್ ಇಂಟರ್‌ವ್ಯೂ ಅಟೆಂಡ್ ಮಾಡಿ

neet axam

ನವದೆಹಲಿ: ವೈದ್ಯರ ನೇಮಕಕ್ಕೆ (Medical Officers) ಮುಂದಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆ(CRPF) ವಾಕ್ ಇನ್ ಇಂಟರ್‌ವ್ಯೂ (Walk-in-Interview) ನಡೆಸಲಿದೆ. ಆಯ್ಕೆಯಾದ ಅಭ್ಯರ್ಥಿಗಳು ಸಿಆರ್‍‌ಪಿಎಫ್‌ನ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಎಂಬಿಬಿಎಸ್‌ (MBBS) ಅರ್ಹತೆ ಹೊಂದಿರುವ, 70 ವರ್ಷ ಮೀರದ ಪುರುಷ ಹಾಗೂ ಮಹಿಳಾ ವೈದ್ಯರು ಸಂದರ್ಶನಕ್ಕೆ ಹಾಜರಾಗಬಹುದು. ಜತೆಗೆ, ಅಗತ್ಯ ಇಂಟರ್ನಶಿಫ್‌ ಅನುಭವವಿರಬೇಕು. ಡಿಸೆಂಬರ್ 4ರಂದು ಬೆಳಗ್ಗೆ 9 ಗಂಟೆಯಿಂದ ಈ ಸಂದರ್ಶನ ನಡೆಯಲಿದೆ.

ಗುವಾಹಟಿ, ನಾಗ್ಪುರ, ಭುವನೇಶ್ವರ ಮತ್ತು ಶ್ರೀನಗರದ ಗುಂಪು ಕೇಂದ್ರಗಳ ಆಸ್ಪತ್ರೆಗಳಲ್ಲಿ ಸಂದರ್ಶನ ನಡೆಯಲಿದೆ. ಛತ್ತೀಸ್‌ಗಢ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಈ ಉದ್ಯೋಗಾವಕಾಶಗಳು ಲಭ್ಯವಿದ್ದರೂ, ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ಭಾಗದಲ್ಲಿ ಸೇವೆ ಸಲ್ಲಿಸಬೇಕಾಗಬಹುದು.

ಈ ನೇಮಕಾತಿಯೂ ಗುತ್ತಿಗೆದಾರದ ನೇಮಕಾತಿಯಾಗಿದ್ದು, 75 ಸಾವಿರ ರೂ. ಸಂಬಳವಿರುತ್ತದೆ. ಸಿಆರ್‌ಪಿಎಫ್‌ನೊಂದಿಗೆ ಒಪ್ಪಂದದ/ನೇಮಕಾತಿ ಆಧಾರದ ಈ ಅವಧಿಯಲ್ಲಿ ಯಾವುದೇ ಟಿಎ ಆಗಲಿ, ಡಿಎ ಆಗಲಿ ನೀಡಲಾಗುವುದಿಲ್ಲ.

ಈ ಸುದ್ದಿಯನ್ನೂ ಓದಿ: ಡ್ಯೂಟಿಗೆ ಚಕ್ಕರ್‌ ಹಾಕಿ ಏರ್‌ ಇಂಡಿಯಾ ಇಂಟರ್‌ವ್ಯೂಗೆ ಹೋದ ಇಂಡಿಗೋ ಸಿಬ್ಬಂದಿ! ಪ್ರಯಾಣಿಕರ ಪರದಾಟ

ವಾಕ್ ಇನ್ ಸಂದರ್ಶನದ ವೇಳೆ ಅಭ್ಯರ್ಥಿಗಳು ಕಡ್ಡಾಯವಾಗಿ ಎಲ್ಲ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಮೂಲ ದಾಖಲೆಗಳು ಮತ್ತು ಫೋಟೋ ಕಾಪಿಗಳನ್ನು ಹೊದಿರಬೇಕಾಗುತ್ತದೆ. ಪದವಿ ಪ್ರಮಾಣ ಪತ್ರಗಳು, ವಯಸ್ಸು ದೃಢೀಕರಣ, ಅನುಭವದ ಸರ್ಟಿಫಿಕೇಟ್ ಹಾಗೂ ಇನ್ನಿತರ ದಾಖಲೆಗಳನ್ನು ನೀಡಬೇಕಾಗುತ್ತದೆ. ಹೆಚ್ಚುವರಿಯಾಗಿ, ಅರ್ಜಿಯ ಜತೆಗೆ ಐದು ಪಾಸ್‌ಪೋರ್ಟ್ ಸೈಜ್ ಫೋಟೋಗಳನ್ನು ನೀಡಬೇಕಾಗುತ್ತದೆ. ಸಂದರ್ಶನದ ಬಳಿಕ ವೈದ್ಯಕೀಯ ತಪಾಸಣೆ ಕೂಡ ಇರುತ್ತದೆ ಎಂದು ಸಿಆರ್‌ಪಿಎಫ್ ಹೇಳಿದೆ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ ಸಿಆರ್‌ಪಿಎಫ್‌ನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version