Site icon Vistara News

Job News: ಕೆಪಿಎಸ್‌ಸಿಯ 1 ಹುದ್ದೆಗೆ ಸರಾಸರಿ 508 ಅರ್ಜಿ ಸಲ್ಲಿಕೆ; ಒಟ್ಟು 1.95 ಲಕ್ಷ ಅಭ್ಯರ್ಥಿಗಳಿಂದ ಅಪ್ಲಿಕೇಷನ್‌

Job News

Job News

ಬೆಂಗಳೂರು: ಸರ್ಕಾರಿ ಉದ್ಯೋಗಕ್ಕೆ ಯಾವಾಗಲೂ ಭರ್ಜರಿ ಬೇಡಿಕೆ ಇರುತ್ತದೆ. ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದಾಗಿನಿಂದ ಅಭ್ಯರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕರ್ನಾಟಕ ಲೋಕಸೇವಾ ಆಯೋಗ (KPSC)ದ 384 ಗೆಜೆಟೆಡ್ ಪ್ರೊಬೆಷನರ್ (KAS) ಹುದ್ದೆಗಳಿಗೆ ಸುಮಾರು 1.95 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ (Job News).

ಕರ್ನಾಟಕ ಲೋಕಸೇವಾ ಆಯೋಗ ಆರು ವರ್ಷಗಳ ಬಳಿಕ ನಡೆಸುತ್ತಿರುವ ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳ ನೇಮಕಾತಿ ಇದಾಗಿದ್ದು, ನಿರೀಕ್ಷೆಯಂತೆಯೇ ಅಭ್ಯರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಪಿಎಸ್‌ಸಿ ಫೆಬ್ರವರಿಯಲ್ಲಿ 384 ಕೆಎಎಸ್‌ – ಗೆಜೆಟೆಡ್‌ ಪ್ರೊಬೇಷನರಿ ಗ್ರೂಪ್‌ ಎ ಮತ್ತು ಗ್ರೂಪ್ ಬಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿತ್ತು.

ಹೈದರಾಬಾದ್‌ ಕರ್ನಾಟಕ ಹಾಗೂ ಉಳಿಕೆ ವೃಂದಗಳಲ್ಲಿ ಈ ನೇಮಕಾತಿ ನಡೆಯಲಿದೆ. 2024ರ ಮಾರ್ಚ್‌ 4ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಉಳಿಕೆ ಮೂಲ ವೃಂದದಲ್ಲಿ 310 ಹಾಗೂ ಕಲ್ಯಾಣ ಕರ್ನಾಟಕಕ್ಕೆ 74 ಹುದ್ದೆಗಳಿದ್ದು, ಇದರ ನೇಮಕಾತಿಗೆ ಅರ್ಜಿ ಸಲ್ಲಿಸಲು ಏ. 15 ಕಡೆ ದಿನವಾಗಿತ್ತು. ಈ ಅವಧಿಯಲ್ಲಿ 1.95 ಲಕ್ಷ ಅರ್ಜಿ ಸಲ್ಲಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಪೂರ್ವಭಾವಿ ಪರೀಕ್ಷೆ ಜುಲೈ 7ರಂದು ನಡೆಯಲಿದೆ. ಆರಂಭದಲ್ಲಿ ಮೇ 5ರಂದು ಪೂರ್ವಭಾವಿ ಪರೀಕ್ಷೆ ನಡೆಸುವುದಾಗಿ ತಿಳಿಸಲಾಗಿತ್ತು. ಬಳಿಕ ಅಧಿಸೂಚನೆಯಲ್ಲಿ ತಿದ್ದುಪಡಿ ತಂದು ಜುಲೈ 7ಕ್ಕೆ ಮುಂದೂಡಲಾಗಿತ್ತು.

ಒಂದು ಹುದ್ದೆಗೆ 508 ಅರ್ಜಿ!

ಈ ಲೆಕ್ಕಾಚಾರದಲ್ಲಿ ಒಂದು ಹುದ್ದೆಗೆ ಸರಾಸರಿ 508 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದಂತಾಗಿದೆ ಎಂದು ಮೂಲಗಳು ತಿಳಿಸಿವೆ. ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಕರ್ನಾಟಕ ಗೆಜೆಟೆಡ್‌ ಪ್ರಬೇಷನರ್ಸ್‌ ನಿಯಮದ ಪ್ರಕಾರ ಮುಖ್ಯ ಪರೀಕ್ಷೆಯು ಕಡ್ಡಾಯ ಕನ್ನಡ ಮತ್ತು ಕಡ್ಡಾಯ ಇಂಗ್ಲಿಷ್‌ ಎಂಬ ಎರಡು ಪ್ರತಿಯನ್ನು ಒಳಗೊಂಡಿದೆ. ಆಯೋಗವು ಈ ಹಿಂದೆ ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಎಲ್ಲ ಅಭ್ಯರ್ಥಿಗಳು ಈ ಪತ್ರಿಕೆಯನ್ನು ಕಡ್ಡಾಯವಾಗಿ ಬರೆಯಲೇಬೇಕು ಎಂದೂ ಸೂಚಿಸಲಾಗಿದೆ.

ಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಯೊಂದಿಗೆ ಸಲ್ಲಿಸುವ ಲಗತ್ತುಗಳನ್ನು ಅವಶ್ಯಕ ಸಂದರ್ಭಗಳಲ್ಲಿ ಆಯೋಗವು ಪರಿಶೀಲನೆಗೆ ಒಳಪಡಿಸಬಹುದಾಗಿರುತ್ತದೆ. ಮೂಲ ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಈಗಾಗಲೇ ಆನ್‌ಲೈನ್ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಿರುವ ಪ್ರಮಾಣ ಪತ್ರಗಳ ಮೂಲ ಪ್ರತಿಗಳನ್ನು ತಪ್ಪದೇ ಹಾಜರುಪಡಿಸಬೇಕಾಗುತ್ತದೆ ಎಂದು ಕೆಪಿಎಸ್‌ಸಿ ಹೇಳಿದೆ.

247 ಪಿಡಿಒ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್‌ ಸಿ ವೃಂದದ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ಅರ್ಜಿ ಸಲ್ಲಿಕೆಯ ಲಿಂಕ್‌ ಅನ್ನು ಬಿಡುಗಡೆ ಮಾಡಲಾಗಿದೆ. ಆಸಕ್ತರು ಈ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಮೇ 15.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಬಳಿಕ ತೆರೆದುಕೊಳ್ಳುವ ಪುಟದ ಕೆಳಭಾಗದಲ್ಲಿರುವ Apply Online for various notifications ಆಯ್ಕೆಯನ್ನು ಕ್ಲಿಕ್‌ ಮಾಡಿ. ಬಳಿಕ Panchayat Development Officer ಆಪ್ಶನ್‌ ಸೆಲೆಕ್ಟ್‌ ಮಾಡಿ. ಹೆಸರು ನೋಂದಾಯಿಸಿದ ಬಳಿಕ ಅರ್ಜಿ ಭರ್ತಿ ಮಾಡಿ.

ಇದನ್ನೂ ಓದಿ: Job Alert: ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲಿದೆ ಗುಡ್‌ನ್ಯೂಸ್‌; ಏರ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸ್ ಹುದ್ದೆಯ ಸಂದರ್ಶನಕ್ಕೆ ನೇರ ಹಾಜರಾಗಿ

Exit mobile version