Site icon Vistara News

Job News | ವೀ ಟೆಕ್ನಾಲಜೀಸ್‌ನಿಂದ ಮುಂದಿನ ಒಂದು ವರ್ಷದಲ್ಲಿ 3 ಸಾವಿರ ಫ್ರೆಶರ್‌ ನೇಮಕ

Job news

karnataka government jobs

ಬೆಂಗಳೂರು: ಐಟಿ ಕಂಪನಿಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಫ್ರೆಶರ್‌ಗಳಿಗೆ ಸಿಹಿ ಸುದ್ದಿ ಇಲ್ಲಿದೆ. ನ್ಯೂಯಾರ್ಕ್‌ ಮೂಲದ ಐಟಿ ಸೇವಾ ಕಂಪನಿ ವೀ ಟೆಕ್ನಾಲಜೀಸ್‌ ಮುಂದಿನ ಒಂದು ವರ್ಷದ ಅವಧಿಯಲ್ಲಿ ಸುಮಾರು 3 ಸಾವಿರ ಫ್ರೆಶರ್‌ ಅನ್ನು ನೇಮಕ ಮಾಡಿಕೊಳ್ಳುವುದಾಗಿ (Job News) ಪ್ರಕಟಿಸಿದೆ.

ಬೆಂಗಳೂರಿನಲ್ಲಿ ತನ್ನ ಘಟಕ ಹೊಂದಿರುವ ಕಂಪನಿಯು ತನ್ನ 200 ಕೋಟಿ ರೂ. ವ್ಯವಹಾರವನ್ನು ವಿಸ್ತರಿಸಿಕೊಳ್ಳುವ ಸಲುವಾಗಿ ಮೊದಲಿಗೆ 1,200 ಬಯೋಟೆಕ್‌, ಸೈನ್ಸ್‌ ಮತ್ತು ಆರ್ಟ್ಸ್‌ ಪದವೀಧರರನ್ನು ನೇಮಿಸಿಕೊಳ್ಳಲಿದೆ.

ಆರೋಗ್ಯ ಸೇವಾ ಕ್ಷೇತ್ರ ಮತ್ತು ಎಂಜಿನಿಯರಿಂಗ್‌ ಸಂಬಂಧಿಸಿದ ಸಾಫ್ಟ್‌ವೇರ್‌ಗಳನ್ನು ರೂಪಿಸುವ ಕೆಲಸ ಮಾಡುತ್ತಿರುವ ವೀ ಟೆಕ್ನಾಲಜೀಸ್‌ ಕರ್ನಾಟಕ, ತಮಿಳು ನಾಡು ಮತ್ತು ತೆಲಂಗಾಣದಲ್ಲಿ ವಿತರಣಾ ಕೇಂದ್ರಗಳನ್ನು ಹೊಂದಿದೆ. ಒಟ್ಟಾರೆ ಒಂದು ವರ್ಷದಲ್ಲಿ ಮೂರು ಸಾವಿರ ಹೊಸಬರ ನೇಮಕ ನಡೆಯಲಿದ್ದು, ನೇಮಕಗೊಂಡವರು ಬೆಂಗಳೂರು, ಚೆನ್ನೈ, ಸೇಲಂ, ಹೈದರಾಬಾದ್‌ ಮತ್ತು ತಿರುಚಿಯಲ್ಲಿ ಕಾರ್ಯನಿರ್ವಹಿಸಬೇಕಿರುತ್ತದೆ.

ತಮಿಳುನಾಡಿನಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಹತ್ತು ಸಾವಿರ ಮಂದಿಗೆ ಕಂಪನಿಯು ಉದ್ಯೋಗ ನೀಡುವ ಗುರಿ ಹೊಂದಿದೆ ಎಂದು ಕಂಪನಿಯ ಸಿಇಒ ಚೋಕೋ ವಲ್ಲಿಯಪ್ಪಾ ತಿಳಿಸಿದ್ದಾರೆ.

ಇದನ್ನೂ ಓದಿ| Job News | ಸ್ಯಾಮ್‌ಸಂಗ್‌ನಿಂದ ಒಂದು ಸಾವಿರ ಎಂಜಿನಿಯರ್‌ಗಳ ನೇಮಕ

Exit mobile version