ಮೈಸೂರು (mysuru) ಮಹಾನಗರ ಪಾಲಿಕೆಯಲ್ಲಿ (Mysuru City Corporation) ಖಾಲಿ ಇರುವ ಒಟ್ಟು 252 ಪೌರಕಾರ್ಮಿಕ ಗ್ರೂಪ್ ಡಿ (Group D) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ (Job Recruitment) ಆಹ್ವಾನಿಸಲಾಗಿದ್ದು, ಆಸಕ್ತರು 2024ರ ಜುಲೈ 18ರೊಳಗೆ ಅರ್ಜಿ ಸಲ್ಲಿಸಬಹುದು. ಅಂಚೆ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹುದ್ದೆಯ ವಿವರ
ರಾಜ್ಯ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 252 ಪೌರಕಾರ್ಮಿಕ ಗ್ರೂಪ್ ಡಿ ನೌಕರರ ಹುದ್ದೆ ಖಾಲಿ ಇದ್ದು, ಅರ್ಹರು ಅರ್ಜಿ ಸಲ್ಲಿಸಬಹುದು. ಗ್ರೂಪ್ ಡಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 17,000- 28,950 ರೂ. ಸಂಬಳ ನೀಡಲಾಗುತ್ತದೆ.
ಅರ್ಹತೆ ಏನು?
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೇರ ಪಾವತಿ/ ಕಲ್ಯಾಣ/ ದಿನಗೂಲಿ ಆಧಾರದ ಮೇಲೆ ಪೌರಕಾರ್ಮಿಕರಾಗಿ ಕನಿಷ್ಠ 2 ವರ್ಷ ಕೆಲಸ ಮಾಡಿದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕನ್ನಡ ಮಾತನಾಡಲು ಬಲ್ಲ ಯಾವುದೇ ಶೈಕ್ಷಣಿಕ ಅರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳ ವಯಸ್ಸು 2024ರ ಜೂನ್ 13ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 55 ವರ್ಷ ಮೀರಿರಬಾರದು. ಮೀಸಲಾತಿ ಪ್ರಕಾರ ವಯೋಮಿತಿ ಸಡಿಲಿಕೆ ಇದೆ.
ಇದನ್ನೂ ಓದಿ: Job Recruitment: ಬ್ಯಾಂಕ್ ಆಫ್ ಬರೋಡಾದಲ್ಲಿ 627 ಹುದ್ದೆಗಳಿಗೆ ಅರ್ಜಿ ಆಹ್ವಾನ; 55 ಲಕ್ಷದವರೆಗೆ ಸಂಬಳ!
ಅರ್ಜಿ ಪ್ರಕ್ರಿಯೆ
ಆಸಕ್ತ ಅಭ್ಯರ್ಥಿಗಳು ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಮೈಸೂರು ಮಹಾನಗರ ಕಾರ್ಪೊರೇಷನ್ ಪ್ರಧಾನ ಕಚೇರಿಯಿಂದ ಅರ್ಜಿಯನ್ನು ಪಡೆದು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಅಧ್ಯಕ್ಷರು, ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರು, ಮೈಸೂರು ಇವರಿಗೆ ಸಲ್ಲಿಸಬೇಕು.