ನವ ದೆಹಲಿ: ಕಳೆದ ವರ್ಷದ ಜೂನ್ ತಿಂಗಳಲ್ಲಿ ವಿವಿಧ ಇಲಾಖೆಗಳ ಪರಿಶೀಲನಾ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು (Jobs News) ಸೂಚಿಸಿದ್ದರು. ಹೀಗಾಗಿ ಕಳೆದ ಅಕ್ಟೋಬರ್‌ನಿಂದ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ, ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನದ ಮೂಲಕ ನೇಮಕಗೊಂಡವರಿಗೆ ಆಗಾಗ ʻರಾಷ್ಟ್ರೀಯ ರೋಜ್ಗಾರ್ ಮೇಳʼ (Rashtriya Rozgar Mela) ನಡೆಸಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ನೇಮಕಾತಿ ಪತ್ರಗಳನ್ನು ವಿತರಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ 39 ಇಲಾಖೆ/ಸಚಿವಾಲಯಗಳಲ್ಲಿ ಗ್ರೂಪ್ ʻಎʼ, ಗ್ರೂಪ್ ʻಬಿʼ(ಗೆಜೆಟೆಡ್), ಗ್ರೂಪ್ ʻಬಿʼ (ನಾನ್ ಗೆಜೆಟೆಡ್) ಮತ್ತು ಗೂಪ್ರ್ ʻಸಿʼ ಕೆಟಗರಿಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಮುಖ್ಯವಾಗಿ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್‌ಸಿ) ಮತ್ತು ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಮೂಲಕ ನೇಮಕ ನಡೆಯುತ್ತದೆ.
ಇದನ್ನೂ ಓದಿ : ವಿಸ್ತಾರ Job Tips | 10 ಲಕ್ಷ ಸರ್ಕಾರಿ ಹುದ್ದೆಗಳಿಗೆ ನೇಮಕ; ಅರ್ಜಿ ಸಲ್ಲಿಸಲು ನೀವು ಸಿದ್ಧರಿದ್ದೀರಾ?
ಈ ಎರಡು ನೇಮಕಾತಿ ಪ್ರಾಧಿಕಾರಗಳು ಮುಂದೆ ಯಾವೆಲ್ಲಾ ಪರೀಕ್ಷೆ ನಡೆಸಲಿವೆ, ಅಧಿಸೂಚನೆಯಾವಾಗ ಪ್ರಕಟವಾಗಲಿದೆ ಎಂಬ ಮಾಹಿತಿ ಇಲ್ಲಿದೆ. ಕೇಂದ್ರ ಸರ್ಕಾರಿ ಉದ್ಯೋಗಿಯಾಗಬೇಕೆಂದು ಕನಸು ಹೊತ್ತಿರುವ ಅಭ್ಯರ್ಥಿಗಳು ಈ ವೇಳಾಪಟ್ಟಿಯನ್ನು ನೋಡಿಕೊಂಡು ಸೂಕ್ತವಾದ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬಹುದಾಗಿದೆ.
ಯುಪಿಎಸ್‌ಸಿಯ ವೇಳಾಪಟ್ಟಿ ಇಲ್ಲಿದೆ;
ಎಸ್‌ಎಸ್‌ಸಿಯ ವೇಳಾಪಟ್ಟಿ ಇಲ್ಲಿದೆ;
ಇದನ್ನೂ ಓದಿ: Job News | ಕೇಂದ್ರ ಸರ್ಕಾರಿ ನೌಕರಿಗೆ SSC ಪರೀಕ್ಷೆ ಬರೆಯಿರಿ
ಯುಪಿಎಸ್‌ಸಿಯು ಮುಂದಿನ ವರ್ಷ ಅಂದರೆ 2024ರಲ್ಲಿ ಒಟ್ಟು 24 ವಿವಿಧ ಪರೀಕ್ಷೆಗಳನ್ನು ನಡೆಸಲಿದೆ. ಅದೇ ರೀತಿಯ ಎಸ್‌ಎಸ್‌ಸಿಯು 2023-24 ನೇ ಸಾಲಿನಲ್ಲಿ ಒಟ್ಟು 21 ಪರೀಕ್ಷೆಗಳನ್ನು ನಡೆಸುವುದಾಗಿ ಪ್ರಕಟಿಸಿದೆ. ಯಾವ ಹುದ್ದೆಗಳ ನೇಮಕಕ್ಕೆ ಯಾವ ಪರೀಕ್ಷೆ ನಡೆಸಲಾಗುತ್ತದೆ?, ವಿದ್ಯಾರ್ಹತೆ ಏನಿರುತ್ತದೆ?, ಸ್ಪರ್ಧಾತ್ಮಕ ಪರೀಕ್ಷೆಗಳು ಹೇಗಿರುತ್ತವೆ? ದೈಹಿಕ ಅರ್ಹತೆಗಳನ್ನೇನಾದರೂ ನಿಗದಿಪಡಿಸಲಾಗಿದೆಯೇ ಎಂಬುದನ್ನು ನೋಡಿಕೊಂಡೇ ಸೂಕ್ತ ಪರೀಕ್ಷೆಯನ್ನು ಆಯ್ಕೆ ಮಾಡಿಕೊಂಡು ಸಿದ್ಧತೆ ನಡೆಸಿ.
ಯುಪಿಎಸ್‌ಸಿ ವೆಬ್‌ಸೈಟ್ ವಿಳಾಸ ಇಂತಿದೆ; https://www.upsc.gov.in
ಎಸ್‌ಎಸ್‌ಸಿಯ ವೆಬ್‌ಸೈಟ್ ವಿಳಾಸ ಇಂತಿದೆ: https://ssc.nic.in
ವಂಚಕರ ಬಗ್ಗೆ ಎಚ್ಚರಿಕೆ ಇರಲಿ!
ಕೇಂದ್ರ ಸರ್ಕಾರದ ಯಾವುದೇ ಕಾಯಂ ಹುದ್ದೆಗೆ ನೇರವಾಗಿ ಯಾರನ್ನೂ ನೇಮಕ ಮಾಡಿಕೊಳ್ಳಲಾಗುವುದಿಲ್ಲ. ನೇಮಕಾತಿ ಪ್ರಾಧಿಕಾರಗಳು ಅಧಿಸೂಚನೆ ಹೊರಡಿಸಿ, ನೇಮಕ ಪ್ರಕ್ರಿಯೆಗಳನ್ನು ಅಂದರೆ, ಸ್ಪರ್ಧಾತ್ಮಕ ಪರೀಕ್ಷೆ, ಕೌಶಲ ಪರೀಕ್ಷೆ, ಸಂದರ್ಶನ ಇತ್ಯಾದಿಗಳನ್ನು ನಡೆಸಿಯೇ ನೇಮಕ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಯಾರಾದರೂ ಕೇಂದ್ರ ಸರ್ಕಾರಿ ಉದ್ಯೋಗ ಕೊಡಿಸುತ್ತೇನೆ ಎಂದು ಹೇಳಿ ಹಣವನ್ನು ಕೇಳಿದರೆ ಕೊಡಲು ಹೋಗಬೇಡಿ.
ಯಾರಾದರೂ ಹೀಗೆ ಕೆಲಸ ಕೊಡಿಸುವುದಾಗಿ ಹೇಳಿದರೆ ಅವರ ಬಗ್ಗೆ ನೀವು ಪೊಲೀಸರಿಗೆ ದೂರು ಸಹ ನೀಡಬಹುದು. ಸರ್ಕಾರಿ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದಂತೆ ನಿಯಮಗಳಿದ್ದು, ಅದನ್ನು ಅನುಸರಿಸಿ ನೇಮಕಗೊಂಡವರು ಮಾತ್ರ ಸರ್ಕಾರಿ ಉದ್ಯೋಗಿ ಎನಿಸಿಕೊಳ್ಳುತ್ತಾರೆ. ಇದು ನಿಮ್ಮ ಗಮನದಲ್ಲಿದ್ದರೆ ವಂಚನೆಗಳು ತಪ್ಪುತ್ತವೆ.
ಇದನ್ನೂ ಓದಿ: Job News | ಸರ್ಕಾರದ ಯಾವ ಇಲಾಖೆಗಳಲ್ಲಿ ಎಷ್ಟು ಹುದ್ದೆ ಖಾಲಿ ಇವೆ?; ಇಲ್ಲಿದೆ ಸಂಪೂರ್ಣ ಮಾಹಿತಿ