ಬೆಂಗಳೂರು: ಕರ್ಣಾಟಕ ಬ್ಯಾಂಕ್ ತನ್ನ ಶಾಖೆಗಳಲ್ಲಿ ಖಾಲಿ ಇರುವ ಗುಮಾಸ್ತ ( ಕ್ಲರ್ಕ್ ) ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಮೇ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮೇ 21 ಕೊನೆ ದಿನ. ಆನ್‌ಲೈನ್ ಮೂಲಕ ಅರ್ಜಿ ನೋಂದಣಿ ಮಾಡಿ, ಅರ್ಜಿ ಶುಲ್ಕ ಪಾವತಿಸಬೇಕು .
ವಿದ್ಯಾರ್ಹತೆ: ಯಾವುದೇ ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 60% ಅಂಕಗಳೊಂದಿಗೆ (ಪ್ರಥಮ ದರ್ಜೆ) / ತತ್ಸಮಾನ ದರ್ಜೆಯ ಯಾವುದೇ ವಿಷಯದಲ್ಲಿ ಪದವೀಧರರಾಗಿರಬೇಕು.
ವಯೋಮಿತಿ : ಮೇ 1 , 2022ಕ್ಕೆ ಗರಿಷ್ಠ 26 ವರ್ಷ.
ಅರ್ಜಿ ಶುಲ್ಕ ( ಮರುಪಾವತಿಸಲಾಗುವುದಿಲ್ಲ ) : ಸಾಮಾನ್ಯ ವರ್ಗಕ್ಕೆ ₹ 700 , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ₹ 600.
ಆಯ್ಕೆ ವಿಧಾನ: ಆನ್‌ಲೈನ್ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ . ಜೂನ್ ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಕೇಂದ್ರಗಳು: ಬೆಂಗಳೂರು , ಧಾರವಾಡ ಹುಬ್ಬಳ್ಳಿ ಮಂಗಳೂರು , ಮುಂಬೈ , ಮೈಸೂರು , ನವದೆಹಲಿ ಮತ್ತು ಶಿವಮೊಗ್ಗ .
ಆನ್ ಲೈನ್ ಪರೀಕ್ಷೆಯ ಮಾದರಿ ಈ ಕೆಳಗಿನಂತಿರುತ್ತದೆ.
ಕ್ರ. ಸಂಖ್ಯೆ | ಪರಿಕ್ಷೆಯ ಹೆಸರು (ವಿಷಯ) | ಪರಿಕ್ಷೆಗಳ ಸಂಖ್ಯೆ | ಗರಿಷ್ಟ ಅಂಕಗಳು | ಅವಧಿ (ನಿಮಿಷಗಳಲ್ಲಿ) |
1 | ತಾರ್ಕಿಕತೆ ಸಾಮರ್ಥ್ಯ | 40 | 40 | 30 |
2 | ಆಂಗ್ಲ ಭಾಷೆ | 40 | 40 | 30 |
3 | ಸಾಂಖ್ಯಿಕ ಸಾಮರ್ಥ್ಯ | 40 | 40 | 30 |
4 | ಸಾಮಾನ್ಯ ಅರಿವು (ಬ್ಯಾಂಕಿಂಗ್ ಉದ್ಯಮದ ವಿಶೇಷ ಉಲ್ಲೆಖದೊಂದಿಗೆ) | 40 | 40 | 25 |
5 | ಕಂಪ್ಯೂಟರ್ ಜ್ಞಾನ | 40 | 40 | 20 |
200 | 200 | 135 |
ಅಧಿಸೂಚನೆ:
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ