Site icon Vistara News

Karnataka Postal Recruitment 2023 : ನಿಮ್ಮೂರಲ್ಲೇ ಖಾಲಿ ಇರಬಹುದು ಜಿಡಿಎಸ್‌ ಹುದ್ದೆ; ನೋಡುವುದು ಹೇಗೆ ಗೊತ್ತೇ?

Karnataka Postal Recruitment 2023

Karnataka Postal Recruitment 2023

ಭಾರತೀಯ ಅಂಚೆ ಇಲಾಖೆಯು ದೇಶದಾದ್ಯಂತ ಖಾಲಿ ಇರುವ 40,889 ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ಭರ್ತಿಗೆ (India Post GDS Recruitment 2023) ಅರ್ಜಿ ಆಹ್ವಾನಿಸಿದೆ. ಕರ್ನಾಟಕದಲ್ಲಿ (karnataka postal circle recruitment 2023) 3,036 ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತಿದೆ.

ಗ್ರಾಮೀಣ ಡಾಕ್ ಸೇವಕ್ ಹುದ್ದೆಯನ್ನು ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್ (BPM), ಅಸಿಸ್ಟೆಂಟ್‌ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್‌, ಡಾಕ್‌ ಸೇವಕ್‌ ಎಂದೂ ವರ್ಗೀಕರಿಸಲಾಗಿರುತ್ತದೆ. ಬ್ರ್ಯಾಂಚ್ ಪೋಸ್ಟ್‌ ಮಾಸ್ಟರ್ ಹುದ್ದೆಗೆಂದು ನೇಮಕಗೊಂಡರೆ 12,000 ರಿಂದ 29,380 ರೂ. ವೇತನ ನೀಡಲಾಗುತ್ತದೆ. ಅಸಿಸ್ಟೆಂಟ್‌ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್‌, ಡಾಕ್‌ ಸೇವಕ್‌ (ABPM/Dak Sevak) ಹುದ್ದೆಗಳಿಗಾದರೆ 10,000 ರಿಂದ 24,470 ರೂ.ಗಳವರೆಗೆ ವೇತನ ನಿಗಿದಿಯಾಗಿರುತ್ತದೆ.

ರಾಜ್ಯದಲ್ಲಿ ಖಾಲಿ ಇರುವ 3,036 ಹುದ್ದೆಗಳನ್ನು ಮೀಸಲಾತಿಯನ್ವಯ ಹಂಚಿಕೆ ಮಾಡಲಾಗಿದೆ. ಯಾವ ಜಿಲ್ಲೆಯ ಯಾವೆಲ್ಲಾ ಅಂಚೆಕಚೇರಿಗಳಲ್ಲಿ ಈ ಹುದ್ದೆಗಳು ಖಾಲಿ ಇವೆ? ಖಾಲಿ ಇರುವ ಹುದ್ದೆ ಯಾರಿಗೆ ಮೀಸಲಾಗಿದೆ ಎಂಬ ಮಾಹಿತಿಯನ್ನು ಈಗಾಗಲೇ ಅಂಚೆ ಇಲಾಖೆಯು ಅಧಿಸೂಚನೆಯಲ್ಲಿ ತಿಳಿಸಿದೆ.

ಎಲ್ಲೆಲ್ಲಿ ಹುದ್ದೆಗಳು ಖಾಲಿ ಇವೆ ಎಂಬುದನ್ನು ನೋಡಲು ಇಲ್ಲಿ (Click Here) ಕ್ಲಿಕ್‌ ಮಾಡಿ
ನೀವು ಇಲ್ಲಿ ಕ್ಲಿಕ್‌ ಮಾಡಿದ ಕೂಡಲೇ ಓಪನ್ ಆದ ಪೇಜ್‌ನಲ್ಲಿ ‘Select Division’ ಎಂಬಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿ. ನಂತರ ಬಲಭಾಗದಲ್ಲಿರುವ “View Post” ಎಂಬುದನ್ನು ಕ್ಲಿಕ್ ಮಾಡಿ. ನಿಮ್ಮ ಜಿಲ್ಲೆಯಲ್ಲಿ ಎಲ್ಲೆಲ್ಲಿ ಅಂಚೆ ಕಚೇರಿಗಳಿವೆ, ಎಷ್ಟು ಹುದ್ದೆಗಳಿವೆ ಎಂಬೆಲ್ಲ ಮಾಹಿತಿಯು ಓಪನ್‌ ಆಗುತ್ತದೆ. ಇದರಲ್ಲಿ ಯಾವ ಅಂಚೆ ಕಚೇರಿ, ಯಾವ ಹುದ್ದೆ, ಯಾರಿಗೆ ಮೀಸಲಾಗಿದೆ ಎಂಬ ಮಾಹಿತಿಯನ್ನು ನೋಡಬಹುದು.

ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16.02.2023
ಅರ್ಜಿಯಲ್ಲಿ ತಪ್ಪುಗಳಾಗಿದ್ದರೆ ತಿದ್ದಲು ಅವಕಾಶ: 17.02.2023 to 19.02.2023
ಸಹಾಯವಾಣಿ ಸಂಖ್ಯೆ: 080-22850002
ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: https://indiapostgdsonline.cept.gov.in/

ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆ?

ಬಾಗಲಕೋಟೆ- 55, ಬಳ್ಳಾರಿ- 103, ಬೆಂಗಳೂರು ಜಿಪಿಒ- 6, ಬೆಳಗಾಗವಿ- 98, ಬೆಂಗಳೂರು ಪೂರ್ವ- 90, ಬೆಂಗಳೂರು ದಕ್ಷಿಣ-120, ಬೆಂಗಳೂರು ಪಶ್ಚಿಮ-53, ಬೀದರ್‌-40, ಚನ್ನಪಟ್ಟಣ-119, ಚಿಕ್ಕಮಗಳೂರು- 116, ಚಿಕ್ಕೋಡಿ-59, ಚಿತ್ರದುರ್ಗ-84, ದಾವಣಗೆಗೆ ವಿಭಾಗೀಯ ಕಚೇರಿ-67, ಧಾರವಾಡ-67, ಗದಗ್‌-115, ಗೋಕಾಕ್‌-34, ಹಾಸನ- 100, ಹಾವೇರಿ-89, ಕಲಬುರಗಿ-74, ಕಾರವಾರ-74, ಕೊಡಗು- 73, ಕೋಲಾರ- 165, ಮಂಡ್ಯ-40, ಮಂಗಳೂರು-95, ಮೈಸೂರು-73, ನಂಜನಗೂಡು-76, ಪುತ್ತೂರು-113, ರಾಯಚೂರು-74, ಆರ್‌ಎಂಎಸ್‌ ಎಚ್‌ಬಿ-1, ಆರ್‌ಎಂಎಸ್‌ ಕ್ಯೂ-10, ಶಿವಮೊಗ್ಗ-147, ಶಿರಸಿ-78, ತುಮಕೂರು-171, ಉಡುಪಿ-68, ವಿಜಯಪುರ-89, ಯಾದಗಿರಿ-38.

ಎಸ್‌ಎಸ್‌ಎಲ್‌ಸಿಯಲ್ಲಿ (10 ನೇ ತರಗತಿಯಲ್ಲಿ) ಉತ್ತೀರ್ಣರಾಗಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗೆ ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ತಿಳಿದಿರಬೇಕು. ಜತೆಗೆ ಕಂಪ್ಯೂಟರ್ ಕಾರ್ಯನಿರ್ವಹಿಸಲು ತಿಳಿದಿರಬೇಕು. ಸೈಕಲ್‌ ಹೊಡೆಯಲು ಬರುತ್ತಿರಬೇಕು. ಅರ್ಜಿ ಸಲ್ಲಿಸಲು ನಿಗದಿ ಪಡಿಸಿದ ಕೊನೆ ದಿನಾಂಕಕ್ಕೆ ಸರಿಯಾಗಿ ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 40 ವರ್ಷ ಮೀರಿರಬಾರದು.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಇದನ್ನೂ ಓದಿ: India Post GDS Recruitment 2023 : ಅಂಚೆ ಇಲಾಖೆಯಲ್ಲಿ 40,889 ಹುದ್ದೆಗಳಿಗೆ ನೇಮಕ; ರಾಜ್ಯದಲ್ಲಿದೆ 3,036 ಹುದ್ದೆ

Exit mobile version