Site icon Vistara News

KEA Recruitment 2023 : ನಿಗಮ ಮಂಡಳಿಗಳಲ್ಲಿನ 670 ಹುದ್ದೆಗಳಿಗೆ ನೇಮಕ; ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

kea recruitment 2023

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿವಿಧ ನಿಗಮ, ಮಂಡಳಿಗಳಲ್ಲಿ ಖಾಲಿ ಇರುವ 670 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಿದ್ದು (KEA Recruitment 2023), ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ಅವಧಿಯನ್ನು ವಿಸ್ತರಿಸಿದೆ.

ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದಲ್ಲಿನ ಒಟ್ಟು 386 ‌ಹುದ್ದೆ, ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ 72, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 186, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ 26 ಹುದ್ದೆ ಒಟ್ಟು 670 ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕ ಪ್ರಕ್ರಿಯೆ ನಡೆಸುತ್ತಿದೆ.

ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 22 ಕೊನೆಯ ದಿನವೆಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿತ್ತು. ಆದರೆ ಈ ಅವಧಿಯನ್ನು ಜುಲೈ 31 ರವರೆಗೆ ವಿಸ್ತರಿಸಲಾಗಿದೆ ಎಂದು ಕೆಇಎ ಸೋಮವಾರ ಪ್ರಕಟಿಸಿದೆ.

ಅಧಿಸೂಚನೆ ಪ್ರಕಟವಾದ ಒಂದು ವಾರದ ನಂತರ ಅರ್ಜಿ ಶುಲ್ಕವನ್ನು ಕಡಿತ ಮಾಡಿ, ತಿದ್ದುಪಡಿ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಸ್ತರಿಸುವ ತೀರ್ಮಾನವನ್ನು ಕೆಇಎ ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಅರ್ಜಿ ಸಲ್ಲಿಕೆಯ ಅವಿಧಿಯನ್ನು ವಿಸ್ತರಿಸಿರುವುದನ್ನು ಬಿಟ್ಟರೆ ನೇಮಕಾತಿಯಲ್ಲಿ ಬೇರೆ ಯಾವ ಬದಲಾವಣೆಯನ್ನೂ ಮಾಡಲಾಗಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಈಗ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆಗಸ್ಟ್‌ 03ರ ಮಧ್ಯಾಹ್ನ 3.30ರ ವರೆಗೂ ಪಾವತಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500, ಹಿಂದುಳಿದ ವರ್ಗಗಳು- 2ಎ,2ಬಿ, 3ಎ,3ಬಿ ಅಭ್ಯರ್ಥಿಗಳಿಗೆ 300 ರೂ. ಎಸ್‌ಸಿ, ಎಸ್‌ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 200 ರೂ. ಹಾಗೂ ವಿಕಲಚೇತನರು/ ಮಾಜಿ ಸೈನಿಕರಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

ಕೆಇಎ ಪ್ರಕಟಣೆಯನ್ನು ನೋಡಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-07-2023 ಸಂಜೆ 5.30ರ ವರೆಗೆ
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 03-08-2023 ಮಧ್ಯಾಹ್ನ 3.30ರ ವರೆಗೆ
ಸಹಾಯವಾಣಿ ಸಂಖ್ಯೆ: 080-23460460
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ: https://cetonline.karnataka.gov.in/kea/

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ Microsoft edge ಬ್ರೊಸರ್‌ ಬಳಸುವಂತೆ ಕೆಇಎಯು ಸೂಚಿಸಿದೆ.

ಯಾವೆಲ್ಲಾ ಹುದ್ದೆಗಳಿಗೆ ನೇಮಕ?

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು

  1. ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ)- ಗ್ರೂಪ್‌ ಬಿ – 4 (ಉಳಿಕೆ ಮೂಲ ವೃಂದ-1, ಕಲ್ಯಾಣ ಕರ್ನಾಟಕ-1, ಬ್ಯಾಕ್ಲಾಗ್-2)
  2. ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ)-ಗ್ರೂಪ್‌ ಬಿ – 2 (ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್‌-1)
  3. ಆಪ್ತ ಕಾರ್ಯದರ್ಶಿ – ಗ್ರೂಪ್ ಸಿ – 1 (ಉಳಿಕೆ ಮೂಲ ವೃಂದ-1)
  4. ಹಿರಿಯ ಸಹಾಯಕರು (ತಾಂತ್ರಿಕ) ಗ್ರೂಪ್‌ ಸಿ – 4 (ಉಳಿಕೆ ಮೂಲ ವೃಂದ-1, ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್‌-2)
  5. ಹಿರಿಯ ಸಹಾಯಕರು (ತಾಂತ್ರಿಕೇತರ) ಗ್ರೂಪ್ ಸಿ – 3 ( ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್‌-2)
  6. ಸಹಾಯಕರು (ತಾಂತ್ರಿಕ) ಗ್ರೂಪ್‌ ಸಿ- 6 (ಉಳಿಕೆ ಮೂಲ ವೃಂದ-4, ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್‌-1)
  7. ಸಹಾಯಕರು (ತಾಂತ್ರಕೇತರ) ಗ್ರೂಪ್ ಸಿ -6 (ಉಳಿಕೆ ಮೂಲ ವೃಂದ-4, ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್‌-1)

ನೇಮಕಾತಿ ಅಧಿಸೂಚನೆಯನ್ನು ನೋಡಲು ಇಲ್ಲಿ ಕ್ಲಿಕ್‌ (Click Here ) ಮಾಡಿ.

ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ

  1. ಕಲ್ಯಾಣ ಅಧಿಕಾರಿ (ಗ್ರೂಪ್‌ ಸಿ) -12 (ಉಳಿಕೆ ಮೂಲ ವೃಂದ-9 ಕಲ್ಯಾಣ ಕರ್ನಾಟಕ-3)
  2. ಕ್ಷೇತ್ರ ನಿರೀಕ್ಷಕರು (ಗ್ರೂಪ್‌ ಸಿ) – 60 (ಉಳಿಕೆ ಮೂಲ ವೃಂದ-45 ಕಲ್ಯಾಣ ಕರ್ನಾಟಕ-15)
  3. ಪ್ರಥಮ ದರ್ಜೆ ಸಹಾಯಕರು (ಗ್ರೂಪ್‌ ಸಿ) -12 (ಉಳಿಕೆ ಮೂಲ ವೃಂದ-8 ಕಲ್ಯಾಣ ಕರ್ನಾಟಕ-4)
  4. ಆಪ್ತ ಸಹಾಯಕರು(ಗ್ರೂಪ್‌ ಸಿ)- 02 (ಉಳಿಕೆ ಮೂಲ ವೃಂದ-2)
  5. ದ್ವಿತೀಯ ದರ್ಜೆ ಸಹಾಯಕರು (ಗ್ರೂಪ್‌ ಸಿ) -100 (ಉಳಿಕೆ ಮೂಲ ವೃಂದ-64 ಕಲ್ಯಾಣ ಕರ್ನಾಟಕ-36)

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಮೈಸೂರು ಸೇಲ್ಸ್‌ಇಂಟರ್‌ನ್ಯಾಷನಲ್ ಲಿಮಿಟೆಡ್

  1. ಸಹಾಯಕ ವ್ಯವಸ್ಥಾಪಕರು – 23 (ಉಳಿಕೆ ಮೂಲ ವೃಂದ-20, ಕಲ್ಯಾಣ ಕರ್ನಾಟಕ-3)
  2. ಮೇಲ್ವಿಚಾರಕರು – 23 (ಉಳಿಕೆ ಮೂಲ ವೃಂದ-20, ಕಲ್ಯಾಣ ಕರ್ನಾಟಕ-3)
  3. ಪದವೀಧರ ಗುಮಾಸ್ತರು – 6 (ಉಳಿಕೆ ಮೂಲ ವೃಂದ-5, ಕಲ್ಯಾಣ ಕರ್ನಾಟಕ-1)
  4. ಗುಮಾಸ್ತರು – 13 (ಉಳಿಕೆ ಮೂಲ ವೃಂದ-12, ಕಲ್ಯಾಣ ಕರ್ನಾಟಕ-1)
  5. ಮಾರಾಟ ಪ್ರತಿನಿಧಿ / ಪ್ರೋಗ್ರಾಮರ್‌ – 6 (ಕಲ್ಯಾಣ ಕರ್ನಾಟಕ-6)

ಇದನ್ನೂ ಓದಿ: IBPS Clerk Recruitment 2023 : ಬ್ಯಾಂಕುಗಳಲ್ಲಿನ ಕ್ಲರ್ಕ್‌ ಹುದ್ದೆ; ಜುಲೈ 1 ರಿಂದ ಅರ್ಜಿ ಸಲ್ಲಿಕೆ ಶುರು

Exit mobile version