ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿವಿಧ ನಿಗಮ, ಮಂಡಳಿಗಳಲ್ಲಿ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕ ಪ್ರಕ್ರಿಯೆ (KEA Recruitment 2023) ನಡೆಸುವುದು ಖಚಿತ ಪಟ್ಟಿದೆ. ಒಟ್ಟು 757 ಹುದ್ದೆಗಳಿಗೆ ನೇಮಕ ನಡೆಯಲಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ನೇಮಕ ಪ್ರಕ್ರಿಯೆ ಆರಂಭವಾಗುವ ಕುರಿತು ಅಭ್ಯರ್ಥಿಗಳಲ್ಲಿ ಗೊಂದಲ ಉಂಟಾಗಿತ್ತು. ಆದರೆ ಈ ನೇಮಕಕ್ಕೆ ಸಂಬಂಧಿಸಿದಂತೆ ಮಾ.15 ರಂದೇ ಪ್ರಕಟಣೆ ಹೊರಡಿಸಿ, ಮಾ.24 ರಂದು ವಿವರವಾದ ಅಧಿಸೂಚನೆ ಪ್ರಕಟಿಸಿರುವ ಹಿನ್ನೆಲೆಯಲ್ಲಿ ನಿಗದಿಯಂತೆ ನೇಮಕ ಪ್ರಕ್ರಿಯೆ ನಡೆಸಲಾಗುವುದು ಎಂದು ಕೆಇಎ ಸ್ಪಷ್ಟಪಡಿಸಿದೆ.
ಅಲ್ಲದೆ, ಈ ನೇಮಕಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಮತ್ತೊಂದು ವಿವರವಾದ ಅಧಿಸೂಚನೆಯನ್ನು ಏಪ್ರಿಲ್ 15 ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ ಎಂದು ಕೂಡ ತಿಳಿಸಿದೆ. ಏಪ್ರಿಲ್ 17 ರಿಂದ ಅರ್ಜಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಮೇ.17 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಇ-ಅಂಚೆ ಕಚೇರಿಗಳಲ್ಲಿ ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಮೇ.20 ಕೊನೆಯ ದಿನವಾಗಿರುತ್ತದೆ.
ಈ ನೇಮಕಾತಿಗೆ ಸಂಬಂಧಿಸಿದ ಅಧಿಸೂಚನೆ ನೋಡಲು ಇಲ್ಲಿ ಕ್ಲಿಕ್ (Click Here ) ಮಾಡಿ.
ಯಾವೆಲ್ಲಾ ಹುದ್ದೆಗಳಿಗೆ ನೇಮಕ?
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
1. ಕಲ್ಯಾಣ ಅಧಿಕಾರಿ -12 (ಉಳಿಕೆ ಮೂಲ ವೃಂದ-9 ಕಲ್ಯಾಣ ಕರ್ನಾಟಕ-3)
2. ಕ್ಷೇತ್ರ ನಿರೀಕ್ಷಕರು – 60 (ಉಳಿಕೆ ಮೂಲ ವೃಂದ-45 ಕಲ್ಯಾಣ ಕರ್ನಾಟಕ-15)
3. ಪ್ರಥಮ ದರ್ಜೆ ಸಹಾಯಕರು -12 (ಉಳಿಕೆ ಮೂಲ ವೃಂದ-8 ಕಲ್ಯಾಣ ಕರ್ನಾಟಕ-4)
4. ಆಪ್ತ ಸಹಾಯಕರು- 02 (ಉಳಿಕೆ ಮೂಲ ವೃಂದ-2)
5. ದ್ವಿತೀಯ ದರ್ಜೆ ಸಹಾಯಕರು -100 (ಉಳಿಕೆ ಮೂಲ ವೃಂದ-64 ಕಲ್ಯಾಣ ಕರ್ನಾಟಕ-36)
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ
1. ಸಹಾಯಕ ವ್ಯವಸ್ಥಾಪಕರು -10 (ಉಳಿಕೆ ಮೂಲ ವೃಂದ-8 ಕಲ್ಯಾಣ ಕರ್ನಾಟಕ-2)
2. ಗುಣಮಟ್ಟ ನಿರೀಕ್ಷಕರು – 23 (ಉಳಿಕೆ ಮೂಲ ವೃಂದ-18 ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್ -3)
3. ಹಿರಿಯ ಸಹಾಯಕರು (ಲೆಕ್ಕ)- 33 (ಉಳಿಕೆ ಮೂಲ ವೃಂದ-26 ಕಲ್ಯಾಣ ಕರ್ನಾಟಕ-5, ಬ್ಯಾಕ್‌ಲಾಗ್ -2)
4. ಹಿರಿಯ ಸಹಾಯಕರು -57 (ಉಳಿಕೆ ಮೂಲ ವೃಂದ-49 ಕಲ್ಯಾಣ ಕರ್ನಾಟಕ-08)
5. ಕಿರಿಯ ಸಹಾಯಕರು – 263 (ಉಳಿಕೆ ಮೂಲ ವೃಂದ-244 ಕಲ್ಯಾಣ ಕರ್ನಾಟಕ-19)
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ,
1. ಜೂನಿಯರ್ ಪ್ರೋಗ್ರಾಮರ್ (ಗ್ರೂಪ್-ಬಿ)- 10 (ಉಳಿಕೆ ಮೂಲ ವೃಂದ-9 ಕಲ್ಯಾಣ ಕರ್ನಾಟಕ-1)
2. ಸಹಾಯಕ ಎಂಜಿನಿಯರ್ (ಸಿವಿಲ್) (ಗ್ರೂಪ್-ಬಿ)- 1 (ಉಳಿಕೆ ಮೂಲ ವೃಂದ-1)
3. ಸಹಾಯಕ ಗ್ರಂಥಾಪಾಲಕ (ಗ್ರೂಪ್-ಸಿ) – 1 (ಉಳಿಕೆ ಮೂಲ ವೃಂದ-1)
4. ಸಹಾಯಕ (ಗ್ರೂಪ್-ಸಿ) – 27 (ಉಳಿಕೆ ಮೂಲ ವೃಂದ-25 ಕಲ್ಯಾಣ ಕರ್ನಾಟಕ-2)
5. ಕಿರಿಯ ಸಹಾಯಕ (ಗ್ರೂಪ್-ಸಿ) -49 (ಉಳಿಕೆ ಮೂಲ ವೃಂದ-45 ಕಲ್ಯಾಣ ಕರ್ನಾಟಕ-04)
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ
1. ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ)- ಗ್ರೂಪ್ ಬಿ – 4 (ಉಳಿಕೆ ಮೂಲ ವೃಂದ-1, ಕಲ್ಯಾಣ ಕರ್ನಾಟಕ-1, ಬ್ಯಾಕ್ಲಾಗ್-2)
2. ಸಹಾಯಕ ವ್ಯವಸ್ಥಾಪಕರು (ತಾಂತ್ರಿಕೇತರ)-ಗ್ರೂಪ್ ಬಿ – 2 (ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-1)
3. ಆಪ್ತ ಕಾರ್ಯದರ್ಶಿ – ಗ್ರೂಪ್ ಸಿ – 1 (ಉಳಿಕೆ ಮೂಲ ವೃಂದ-1)
4. ಹಿರಿಯ ಸಹಾಯಕರು (ತಾಂತ್ರಿಕ) ಗ್ರೂಪ್ ಸಿ – 4 (ಉಳಿಕೆ ಮೂಲ ವೃಂದ-1, ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-2)
5. ಹಿರಿಯ ಸಹಾಯಕರು (ತಾಂತ್ರಿಕೇತರ) ಗ್ರೂಪ್ ಸಿ – 3 ( ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-2)
6. ಸಹಾಯಕರು (ತಾಂತ್ರಿಕ) ಗ್ರೂಪ್ ಸಿ- 6 (ಉಳಿಕೆ ಮೂಲ ವೃಂದ-4, ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-1)
7. ಸಹಾಯಕರು (ತಾಂತ್ರಕೇತರ) ಗ್ರೂಪ್ ಸಿ -6 (ಉಳಿಕೆ ಮೂಲ ವೃಂದ-4, ಕಲ್ಯಾಣ ಕರ್ನಾಟಕ-1, ಬ್ಯಾಕ್‌ಲಾಗ್-1)
ಮೈಸೂರು ಸೇಲ್ಸ್‌ಇಂಟರ್‌ನ್ಯಾಷನಲ್ ಲಿಮಿಟೆಡ್
1. ಸಹಾಯಕ ವ್ಯವಸ್ಥಾಪಕರು – 23 (ಉಳಿಕೆ ಮೂಲ ವೃಂದ-20, ಕಲ್ಯಾಣ ಕರ್ನಾಟಕ-3)
2. ಮೇಲ್ವಿಚಾರಕರು – 23 (ಉಳಿಕೆ ಮೂಲ ವೃಂದ-20, ಕಲ್ಯಾಣ ಕರ್ನಾಟಕ-3)
3. ಪದವೀಧರ ಗುಮಾಸ್ತರು – 6 (ಉಳಿಕೆ ಮೂಲ ವೃಂದ-5, ಕಲ್ಯಾಣ ಕರ್ನಾಟಕ-1)
4. ಗುಮಾಸ್ತರು – 13 (ಉಳಿಕೆ ಮೂಲ ವೃಂದ-12, ಕಲ್ಯಾಣ ಕರ್ನಾಟಕ-1)
5. ಮಾರಾಟ ಪ್ರತಿನಿಧಿ / ಪ್ರೋಗ್ರಾಮರ್ – 6 (ಕಲ್ಯಾಣ ಕರ್ನಾಟಕ-6)
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
ಕಲ್ಯಾಣ ಕರ್ನಾಟಕಕ್ಕೆ ಮೀಸಲಾದ ಹುದ್ದೆಗಳಿಗೆ ಸರ್ಕಾರದ ಆದೇಶದಂತೆ ಪ್ರತ್ಯೇಕವಾಗಿ ಅಧಿಸೂಚನೆ ಪ್ರಕಟಿಸಲಾಗುತ್ತದೆ. ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.
ಈ ನೇಮಕದ ಕುರಿತ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ: https://cetonline.karnataka.gov.in/kea
ಇದನ್ನೂ ಓದಿ : KPSC Recruitment 2023 : ಕೆಪಿಎಸ್‌ಸಿಯಿಂದ ಸದ್ಯವೇ ನಾಲ್ಕು ಅಧಿಸೂಚನೆ; ಅರ್ಜಿ ಸಲ್ಲಿಸಲು ಅರ್ಹತೆಗಳೇನು?