ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಟ್ಟ, ʼಮಿನಿ ರತ್ನʼ ಖ್ಯಾತಿಯ ನಮ್ಮ ರಾಜ್ಯದಲ್ಲಿರುವ ಉದ್ಯಮ, “ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ʼʼ ಪದವೀಧರ ಎಂಜಿನಿಯರ್ ಟ್ರೈನಿಗಳ ನೇಮಕಕ್ಕೆ (KIOCL Recruitment 2022) ಅರ್ಜಿ ಆಹ್ವಾನಿಸಿದೆ. ಒಟ್ಟು 35 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ರಾಜ್ಯದಲ್ಲಿಯೇ ಕಾರ್ಯನಿರ್ವಹಿಸುವ ಅವಕಾಶವಿರುತ್ತದೆ.
ಹುದ್ದೆಗಳ ವಿವರ: ಮೆಕ್ಯಾನಿಕಲ್-11, ಮೆಟಲರ್ಜಿ-03, ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕಲ್&ಎಲೆಕ್ಟ್ರಾನಿಕ್ಸ್ -11, ಇನ್‌ಸ್ಟ್ರುಮೆಂಟೇಷನ್ & ಕಂಟ್ರೋಲ್/ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್-4, ಸಿವಿಲ್-2, ಮೈನಿಂಗ್- 02 ಮತ್ತು ಕಂಪ್ಯೂಟರ್ ಸೈನ್ಸ್ -2
2021/22 ರ ಗೇಟ್ ಸ್ಕೋರ್ ಆಧಾರದಲ್ಲಿ ಈ ನೇಮಕ ನಡೆಯಲಿದ್ದು, ಅಭ್ಯರ್ಥಿಗಳು 2017ರಿಂದ 2021ರ ನಡುವೆ ಎಂಜಿನಿಯರಿಂಗ್ ಪದವಿ ಪಡೆದಿರಬೇಕು. ಸಾಮಾನ್ಯ ಮತ್ತು ಇಡಬ್ಲ್ಯುಎಸ್ ಅಭ್ಯರ್ಥಿಗಳು ಶೇ.75, ಎಸ್‌ಸಿ/ಎಸ್‌ಟಿ ಮತ್ತು ಒಬಿಸಿ ಅಭ್ಯರ್ಥಿಗಳು ಶೇ.65 ರಷ್ಟು ಅಂಕ ಪಡೆದು, ಪದವಿ ಪಡೆದಿರಬೇಕಾದದು ಕಡ್ಡಾಯ.
ಆನ್‌ಲೈನ್ ಮತ್ತು ಆಫ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಸೆಪ್ಟೆಂಬರ್ 24 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಕೆಐಒಸಿಎಲ್‌ನ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದ್ದು, ಅರ್ಜಿ ಸಲ್ಲಿಸಲು ಸಲಹೆ-ಸೂಚನೆಗಳನ್ನು ವೆಬ್‌ಸೈಟ್‌ನಲ್ಲಿಯೇ ಒದಗಿಸಲಾಗಿದೆ. ಇದನ್ನು ಓದಿಕೊಂಡು ಅರ್ಜಿ ಸಲ್ಲಿಸಬೇಕೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಂಡು ಅದನ್ನು ಸ್ವಯಂ ದೃಢೀಕರಿಸಿ, ಕಂಪನಿಯ ಬೆಂಗಳೂರು ಕಚೇರಿಗೆ ಕಳುಹಿಸಿಕೊಡಬೇಕಿರುತ್ತದೆ. ಸೆಪ್ಟೆಂಬರ್ 30ರ ಒಳಗೆ ತಲುಪುವ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿಯ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಬೇಕಿರುತ್ತದೆ. ಇದು ನೇಮಕಾತಿಯ ಮುಂದಿನ ಹಂತಗಳಲ್ಲಿ ಅವಶ್ಯವಾಗಿರುತ್ತದೆ.
ಅರ್ಜಿ ಸಲ್ಲಿಸಲು ಲಿಂಕ್ ಇಲ್ಲಿದೆ: https://kioclltd.in/table.php?id=299
ವಯೋಮಿತಿ ಎಷ್ಟು?
ಅಭ್ಯರ್ಥಿಗಳು 27 ವರ್ಷದೊಳಗಿನವರಾಗಿರಬೇಕು. ಸರ್ಕಾರದ ನಿಯಮದ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿರುತ್ತದೆ.
ಅಭ್ಯರ್ಥಿಗಳು ಗೇಟ್ ಪರೀಕ್ಷೆಗೆ ಸಲ್ಲಿಸಿರುವ ಅರ್ಜಿಯ ಕುರಿತೂ ಅರ್ಜಿಯಲ್ಲಿ ಮಾಹಿತಿ ನೀಡಬೇಕಾಗಿರುತ್ತದೆ. ಗೇಟ್ ಸ್ಕೋರ್ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 1:6ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ೪೦ ಸಾವಿರ ಬೇಸಿಕ್ ವೇತನದ ಜತೆಗೆ ಇನ್ನಿತರ ಭತ್ಯೆಗಳನ್ನು ನೀಡಲಾಗುತ್ತದೆ.
ನೇಮಕದ ಕುರಿತ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ : https://kioclltd.in/data.php?id=164