ಬೆಂಗಳೂರು: ದಿನ ನಿತ್ಯ ನಾವೆಲ್ಲರೂ ಸೇವಿಸಿರುವ “ನಂದಿನಿʼ ಹಾಲನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿರುವ, ದೇಶದ ಹಾಲು ಉತ್ಪಾದಕರ ಮಹಾಮಂಡಳಗಳ ಪೈಕಿ ಮುಂಚೂಣಿಯಲ್ಲಿರುವ “ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ನಿಯಮಿತ ʼʼ (ಕೆಎಂಎಫ್) ಖಾಲಿ ಇರುವ ವಿವಿಧ ವೃಂದದ ಒಟ್ಟು 488 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು (KMF recruitment 2022) ಅರ್ಜಿ ಆಹ್ವಾನಿಸಿದೆ.
ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು 19-11-2022 (ರಾತ್ರಿ ೧೧ :45) ಕೊನೆಯ ದಿನವಾಗಿರುತ್ತದೆ. ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದ್ದು, ಇದಕ್ಕೂ 19-11-2022 (ರಾತ್ರಿ ೧೧ :45) ಕೊನೆಯ ದಿನವಾಗಿರುತ್ತದೆ. ಖುದ್ದಾಗಿ ಅಥವಾ ಅಂಚೆ ಮೂಲಕ, ಕೊರಿಯರ್ ಮೂಲಕ ಸಲ್ಲಿಸಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಲಿಂಕ್: https://recruitapp.in/kmf2022/instruction
ಯಾವೆಲ್ಲಾ ಹುದ್ದೆಗಳಿಗೆ ನೇಮಕ?
ಜಂಟಿ ನಿದೇಶಕರು(ವಿತ್ತ):1, ಹಿರಿಯ ಉಪ ನಿರ್ದೇಶಕ (ವಿವಿಧ ವಿಭಾಗ): 03, ಉಪ ನಿರ್ದೇಶಕ (ವಿವಿಧ ವಿಭಾಗ): 16, ವೈದ್ಯಾಧಿಕಾರಿ: 01, ಬಯೋ ಸೆಕ್ಯೂರಿಟಿ ಆಫೀಸರ್: 01, ಸಹಾಯಕ ನಿರ್ದೇಶಕರು (ವಿವಿಧ ವಿಭಾಗ): 39, ವಿಜಿಲೆನ್ಸ್ ಆಫೀಸರ್ : 01, ಸುರಕ್ಷತಾ ಅಧಿಕಾರಿ: 01, ಕಾರ್ಮಿಕ ಕಲ್ಯಾಣ / ಕಾನೂನು ಅಧಿಕಾರಿ:01, ಅಧೀಕ್ಷಕ (ಖರೀದಿ/ಉಗ್ರಾಣ) (ವಿವಿಧ ವಿಭಾಗ):20, ಹಿರಿಯ ಕೆಮಿಸ್ಟ್(ವಿವಿಧ ವಿಭಾಗ): 6, ಲೆಕ್ಕ ಸಹಾಯಕ ದರ್ಜೆ-1: 13, ಡೈರಿ ಮೇಲ್ವಿಚಾರಕ ದರ್ಜೆ-2 : 01, ಆಡಳಿತ ಸಹಾಯಕ ದರ್ಜೆ-2: 40, ಲೆಕ್ಕ ಸಹಾಯಕ ದರ್ಜೆ-2: 30 ಮಾರುಕಟ್ಟೆ ಸಹಾಯಕ ದರ್ಜೆ-2: 23, ಲ್ಯಾಬ್ ಸಹಾಯಕ ದರ್ಜೆ-2(ವಿವಿಧ ವಿಭಾಗ): 30, ಹಿರಿಯ ತಾಂತ್ರಿಕ: 10, ಶೀಘ್ರಲಿಪಿಗಾರ ದರ್ಜೆ-02: 01, ಕಿರಿಯ ಸಿಸ್ಟಂ ಆಪರೇಟರ್: 14, ಹಿರಿಯ ಕೋ-ಆರ್ಡಿನೇಟರ್: 06, ಕಿರಿಯ ತಾಂತ್ರಿಕ (ವಿವಿಧ ಟ್ರೇಡ್): 200 ಕೋ-ಆರ್ಡಿನೇಟರ್: 10 ಮತ್ತು ಸಹಾಯಕ-15.
ವಿದ್ಯಾರ್ಹತೆ ಏನೇನು?
ಒಟ್ಟು 60 ರೀತಿಯ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಎಸ್‌ಎಸ್‌ಎಲ್‌ಸಿಯಿಂದ ಎಂಬಿಬಿಎಸ್ ಮಾಡಿರುವವರೆಗೆ ವಿವಿಧ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಅವಕಾಶವಿದೆ.
ಕನ್ನಡ ಭಾಷೆಯಲ್ಲಿ ಮಾತನಾಡಲು ಮತ್ತು ಬರೆಯಲು ಬರುವವರು ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ವಿದ್ಯಾರ್ಹತೆ ಕುರಿತ ಮಾಹಿತಿ ಇಲ್ಲಿದೆ:
ವಯೋಮಿತಿ ಎಷ್ಟು?
ಸಮಾನ್ಯ ವರ್ಗದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿ ಸಬಹುದಾಗಿರುತ್ತದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿರುತ್ತದೆ.
ಅರ್ಜಿ ಶುಲ್ಕ ಎಷ್ಟು?
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.500. (ಬ್ಯಾಂಕ್ ಶುಲ್ಕ ಪ್ರತ್ಯೇಕ)
ಇತರೆ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಶುಲ್ಕ ರೂ.1000. (ಬ್ಯಾಂಕ್ ಶುಲ್ಕ ಪ್ರತ್ಯೇಕ)
ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ, ಪ್ರತ್ಯೇಕವಾಗಿ ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ. ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಆನ್‌ಲೈನ್ ಮೂಲಕ ನಿಗದಿತ ಶುಲ್ಕ ಮತ್ತು ಅನ್ವಯಿಸುವ ಬ್ಯಾಂಕ್ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿ ಮಾಡಬೇಕೆಂದು ಸೂಚಿಸಲಾಗಿದೆ.
ನೇಮಕ ಹೇಗೆ?
ಪದವಿ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ ಮತ್ತು ಪದವಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ ಪ್ರತ್ಯೇಕವಾಗಿ ಲಿಖಿತ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:5 ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ. ಮೌಖಿಕ ಪರೀಕ್ಷೆಯಲ್ಲಿ ಪಡೆದ ಅಂಕ ಮತ್ತು ಮೌಖಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಒಗ್ಗೂಡಿಸಿ ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗೆ ಕೆಎಂಎಫ್ ವೆಬ್‌ಸೈಟ್|https://www.kmfnandini.coop/
ಇದನ್ನೂ ಓದಿ | KPSC Recruitment 2022 | ಸಹಾಯಕ ಸಾಂಖ್ಯಿಕ ಅಧಿಕಾರಿ ನೇಮಕಕ್ಕೆ ಇಂದಿನಿಂದ ಅರ್ಜಿ ಸಲ್ಲಿಕೆ ಶುರು