Site icon Vistara News

KMF SHIMUL Recruitment 2023 : ಹಾಲು ಒಕ್ಕೂಟದಲ್ಲಿ 194 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

KMF SHIMUL Recruitment 2023

KMF SHIMUL Recruitment 2023

ಬೆಂಗಳೂರು: ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಶಿಮುಲ್) (KMF SHIMUL Recruitment 2023) ವಿವಿಧ 194 ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ.

ಒಟ್ಟು 17 ಪದನಾಮಗಳಲ್ಲಿ 194 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಮಾರ್ಚ್‌ 03 ಕೊನೆಯ ದಿನವಾಗಿರುತ್ತದೆ. ಖುದ್ದಾಗಿ, ಅಂಚೆ, ಕೋರಿಯರ್‌ ಮೂಲಕ ಸಲ್ಲಿಸಲಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಶಿಮುಲ್‌ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 01-02-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-03-2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 03-03-2023
ಸಹಾಯವಾಣಿ ಸಂಖ್ಯೆ: 7022918413
ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ಸಲ್ಲಿಸಲು ವೆಬ್‌ ವಿಳಾಸ:
https://www.shimul.coop/

ಯಾವೆಲ್ಲಾ ಹುದ್ದೆಗಳಿಗೆ ನೇಮಕ?

ಸಹಾಯಕ ವ್ಯವಸ್ಥಾಪಕರು -21 ಹುದ್ದೆಗಳು, ಎಂಐಎಸ್‌/ಸಿಸ್ಟಂ ಆಫೀಸರ್‌-1, ಮಾರುಕಟ್ಟೆ ಅಧಿಕಾರಿ-02, ತಾಂತ್ರಿಕ ಅಧಿಕಾರಿ -೧೮, ಕೆಮಿಸ್ಟ್‌ -32, ವಿಸ್ತರಣಾಧಿಕಾರಿ-17, ಆಡಳಿತ ಸಹಾಯಕ -17, ಲೆಕ್ಕ ಸಹಾಯಕ-12, ಮಾರುಕಟ್ಟೆ ಸಹಾಯಕ-10, ಕಿರಿಯ ಸಿಸ್ಟಂ ಆಪರೇಟರ್‌-13, ಶೀಘ್ರಲಿಪಿಗಾರರು-01 ಮತ್ತು ಕಿರಿಯ ತಾಂತ್ರಿಕ-50 ಹುದ್ದೆಗಳಿಗೆ ನೇಮಕ ನಡೆಯಲಿದೆ.

ವಿದ್ಯಾರ್ಹತೆ ಏನು?

ಸಹಾಯಕ ವ್ಯವಸ್ಥಾಪಕರು
ಎಎಚ್‌/ಎಐ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ವಿಷಯದಲ್ಲಿ (ಬಿ.ವಿ.ಎಸ್ಸಿ ಅಂಡ್‌ ಎಹೆಚ್‌) ಪದವಿಯನ್ನು ಹೊಂದಿರಬೇಕು.
ಆಡಳಿತ ಸಹಾಯಕ ವ್ಯವಸ್ಥಾಪಕರ ಹುದ್ದೆಗಳಿಗೆ ಮಾನವ ಸಂಪನ್ಮೂಲ ವಿಷಯದಲ್ಲಿ 02 ವರ್ಷಗಳ ಪೂರ್ಣಾವಧಿ ಎಂಬಿಎ ಜೊತೆಗೆ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಆಡಳಿತ ನಿರ್ವಹಣೆಯಲ್ಲಿ 03 ವರ್ಷಗಳ ಸೇವಾನುಭವ ಹಾಗೂ ಕಂಪ್ಯೂಟರ್‌ ನಿರ್ವಹಣೆ ಜ್ಞಾನ ಹೊಂದಿರಬೇಕು.
ಎಫ್‌ ಅಂಡ್‌ ಎಫ್‌ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ (ಅಗ್ರಿ) ಪದವಿಯೊಂದಿಗೆ ಕರ್ನಾಟಕ ಹಾಲು ಮಹಾಮಂಡಳಿ/ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಪಶು ಆಹಾರ ಮತ್ತು ಮೇವು ಅಭಿವೃದ್ಧಿ ಕೆಲಸಗಳ ನಿರ್ವಹಣೆಯಲ್ಲಿ ಕನಿಷ್ಟ 05 ವರ್ಷಗಳ ಸೇವಾನುಭವ ಹೊಂದಿರಬೇಕು.
ವೇತನ ಶ್ರೇಣಿ ರೂ. 52,650-97,100

ಎಂಐಎಸ್‌/ಸಿಸ್ಟಂ ಆಫೀಸರ್‌
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ ಕಂಪ್ಯೂಟರ್‌ ಸೈನ್ಸ್‌ / ಇನ್‌ಫಾರ್ಮೆಷನ್‌ ಸೈನ್ಸ್‌ ಪದವಿಯನ್ನು ಪಡೆದಿರಬೇಕು.
ವೇತನ ಶ್ರೇಣಿ : ರೂ. 43,100-83,900.

ಮಾರುಕಟ್ಟೆ ಅಧಿಕಾರಿ
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ/ ಬಿ.ಎಸ್ಸಿ / ಬಿಬಿಎಂ ಪದವಿ ಜೊತೆಗೆ ಹೆಸರಾಂತ ಸಂಸ್ಥೆಗಳಲ್ಲಿ ಮಾರುಕಟ್ಟೆಯಲ್ಲಿ 03 ವರ್ಷಗಳ ಅನುಭವದೊಂದಿಗೆ ಕಂಪ್ಯೂಟರ್‌ ನಿರ್ವಹಣೆ ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ : ರೂ. 43,100-83,900

ತಾಂತ್ರಿಕ ಅಧಿಕಾರಿ
ಅಭಿಯಂತರ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ (ಮೆಕಾನಿಕಲ್‌) ಪದವಿ ಹೊಂದಿರಬೇಕು. ಗುಣನಿಯಂತ್ರಣ ಅಧಿಕಾರಿ ಹುದ್ದೆಗೆ ನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ (ಎಲೆಕ್ಟ್ರಿಕಲ್‌) ಪದವಿ ಹೊಂದಿರಬೇಕು. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಎಸ್ಸಿ (ಕೆಮಿಸ್ಟ್ರಿ) ಸ್ನಾತಕೋತ್ತರ ಪದವಿ, ಎಂಎಸ್ಸಿ (ಮೈಕ್ರೊಬಯಾಲಜಿ) ಸ್ನಾತಕೋತ್ತರ ಪದವಿ ಪಡೆದು ಕಂಪ್ಯೂಟರ್‌ ನಿರ್ವಹಣೆ ಜ್ಞಾನ ಹೊಂದಿದವರು ಅರ್ಜಿ ಸಲ್ಲಿಸಬಹುದು.
ಡಿಟಿ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಟೆಕ್‌ (ಡೈರಿ ಟೆಕ್ನಾಲಜಿ) ಪದವಿಯೊಂದಿಗೆ ಕಂಪ್ಯೂಟರ್‌ ನಿರ್ವಹಣೆ ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ : ರೂ. 43,100-83,900

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಕೆಮಿಸ್ಟ್‌ ದರ್ಜೆ-1
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ/ ಮೈಕ್ರೊಬಯಾಲಜಿ ವಿಷಯವನ್ನು ವ್ಯಾಸಂಗ ಮಾಡಿರಬೇಕು. ಕಂಪ್ಯೂಟರ್‌ ನಿರ್ವಹಣೆ ಜ್ಞಾನ ಹೊಂದಿರಬೇಕು ಹಾಗೂ ಡೇರಿ/ಆಹಾರ ಸಂಸ್ಕರಣಾ ಘಟಕಗಳಲ್ಲಿ ಕನಿಷ್ಟ 02 ವರ್ಷಗಳ ಅನುಭವ ಹೊಂದಿರಬೇಕು.
ವೇತನ ಶ್ರೇಣಿ : ರೂ. 33,450-62,600

ವಿಸ್ತರಣಾಧಿಕಾರಿ ದರ್ಜೆ-3
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ ಜೊತೆಗೆ ಕಂಪ್ಯೂಟರ್‌ ನಿರ್ವಹಣೆ ಜ್ಞಾನದೊಂದಿಗೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಯ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕನಿಷ್ಟ 05 ವರ್ಷಗಳ ಸೇವೆ ಸಲ್ಲಿಸಿರಬೇಕು. ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ.
ಇನ್ನು 12 ವಿಸ್ತರಣಾಧಿಕಾರಿ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯೊಂದಿಗೆ ಕಂಪ್ಯೂಟರ್‌ ನಿರ್ವಹಣೆ ಜ್ಞಾನ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.
ವೇತನ ಶ್ರೇಣಿ: ರೂ. 33,450-62,600

ಆಡಳಿತ ಸಹಾಯಕ ದರ್ಜೆ-2
ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯೊಂದಿಗೆ ಕಂಪ್ಯೂಟರ್‌ ನಿರ್ವಹಣೆ ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ: ರೂ. 27,650-52,650

ಲೆಕ್ಕ ಸಹಾಯಕ ದರ್ಜೆ-2
ಭಾರತದಲ್ಲಿ ಕಾನೂನು ರೀತ್ಯ ಸ್ಥಾಪಿತವಾದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿಯೊಂದಿಗೆ ಟ್ಯಾಲಿ ಸರ್ಟಿಫಿಕೇಟ್‌ ಅಥವಾ ಕಂಪ್ಯೂಟರ್‌ ನಿರ್ವಹಣೆ ಜ್ಞಾನ ಹೊಂದಿರಬೇಕು.
೨ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಬಿ.ಎಂ ಪದವಿಯೊಂದಿಗೆ ಟ್ಯಾಲಿ ಸರ್ಟಿಫಿಕೇಟ್‌ ಅಥವಾ ಕಂಪ್ಯೂಟರ್‌ ನಿರ್ವಹಣೆ ಜ್ಞಾನ ಹೊಂದಿದವರೂ ಅರ್ಜಿ ಸಲ್ಲಿಸಬಹುದು.
ವೇತನ ಶ್ರೇಣಿ: ರೂ. 27,650-52,650

ಮಾರುಕಟ್ಟೆ ಸಹಾಯಕ ದರ್ಜೆ-2
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಬಿಎಂ/ ಬಿ.ಎಸ್ಸಿ/ ಬಿ.ಕಾಂ ಪದವಿಯೊಂದಿಗೆ ಕಂಪ್ಯೂಟರ್‌ ನಿರ್ವಹಣೆ ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ ರೂ. 27,650-52,650

ಕೆಮಿಸ್ಟ್‌ ದರ್ಜೆ-2
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ / ಮೈಕ್ರೊಬಯಾಲಜಿ ಒಂದು ವಿಷಯವನ್ನಾಗಿ ವ್ಯಾಸಂಗ ಮಾಡಿರುವುದರ ಜೊತೆಗೆ ಕಂಪ್ಯೂಟರ್‌ ನಿರ್ವಹಣೆ ಜ್ಞಾನ ಹೊಂದಿರಬೇಕು ಹಾಗೂ ಕರ್ನಾಟಕ ಹಾಲು ಮಹಾಮಂಡಳಿ/ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಕನಿಷ್ಟ 03 ವರ್ಷಗಳ ಸೇವಾನುಭವ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ.
ವೇತನ ಶ್ರೇಣಿ: ರೂ. 27,650-52,650

ಕಿರಿಯ ಸಿಸ್ಟಂ ಆಪರೇಟರ್‌
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯೊಂದಿಗೆ ಕನಿಷ್ಟ ಒಂದು ವರ್ಷದ ಡಿಪ್ಲೋಮಾ ಇನ್‌ ಕಂಪ್ಯೂಟರ್‌ ಅಪ್ಲಿಕೇಷನ್‌ ಕೋರ್ಸ್‌ ಹಾಗೂ ಕರ್ನಾಟಕ ಹಾಲು ಮಹಾಮಂಡಳಿ / ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಕನಿಷ್ಟ 03 ವರ್ಷಗಳ ಸೇವಾನುಭವ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಇಲ್ಲದಿದ್ದ ಪಕ್ಷದಲ್ಲಿ ಈ
ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ.
ಹತ್ತು ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯೊಂದಿಗೆ ಕನಿಷ್ಟ ಒಂದು ವರ್ಷದ ಡಿಪ್ಲೋಮಾ ಇನ್‌ ಕಂಪ್ಯೂಟರ್‌ ಅಪ್ಲಿಕೇಷನ್‌ ಕೋರ್ಸ್‌ ಮಾಡಿದವರು ಅರ್ಜಿ ಸಲ್ಲಿಸಬಹುದು.
ವೇತನ ಶ್ರೇಣಿ: ರೂ. 27,650-52,650

ಶೀಘ್ರಲಿಪಿಗಾರರು ದರ್ಜೆ-2
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯೊಂದಿಗೆ ಸೀನಿಯರ್‌ ಇಂಗ್ಲೀಷ್‌ ಮತ್ತು ಕನ್ನಡ ಶಾರ್ಟ್‌ ಹ್ಯಾಂಡ್‌ನೊಂದಿಗೆ ಕಂಪ್ಯೂಟರ್‌ ಆಫೀಸ್‌ ಪ್ಯಾಕೇಜ್‌ ನಿರ್ವಹಣೆ ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ: ರೂ. 27,650 – 52,650

ಕಿರಿಯ ತಾಂತ್ರಿಕರು
ಎಸ್‌.ಎಸ್‌.ಎಲ್‌.ಸಿ.ಯೊಂದಿಗೆ ಡೈರೆಕ್ಟೋರೇಟ್‌ ಜನರಲ್‌ ಆಫ್‌ ಎಂಪ್ಲಾಯ್‌ಮೆಂಟ್‌ ಅಂಡ್‌ ಟ್ರೈನಿಂಗ್‌ ಇವರಿಂದ ಎಲೆಕ್ಟ್ರಿಕಲ್‌ ಟ್ರೇಡ್‌ನಲ್ಲಿ ತೇರ್ಗಡೆ ಹೊಂದಿ ಕಡ್ಡಾಯವಾಗಿ ನ್ಯಾಷನಲ್‌ ಟ್ರೇಡ್‌ ಸರ್ಟಿಫಿಕೇಟ್‌ (ಎನ್‌.ಟಿ.ಸಿ) ಅಥವಾ ಪ್ರಾವಿಜನಲ್‌ ನ್ಯಾಷನಲ್‌ ಟ್ರೇಡ್‌ ಸರ್ಟಿಫಿಕೇಟ್‌ ಅಥವಾ ನ್ಯಾಷನಲ್‌ ಕೌನ್ಸಿಲ್‌ ಫಾರ್‌ ವೆಕೇಷನಲ್‌ ಟ್ರೈನಿಂಗ್‌ (ಎನ್‌.ಸಿ.ವಿ.ಟಿ) ಸರ್ಟಿಫಿಕೇಟ್‌ ಪಡೆದಿರಬೇಕು
ಹಾಗೂ ಕರ್ನಾಟಕ ಹಾಲು ಮಹಾಮಂಡಳಿ / ಜಿಲ್ಲಾ ಸಹಕಾರ ಹಾಲು ಒಕ್ಕೂಟಗಳಲ್ಲಿ ಕನಿಷ್ಟ 03 ವರ್ಷಗಳ ಸೇವಾನುಭವ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ.
12 ಹುದ್ದೆಗಳಿಗೆ ಎಸ್‌.ಎಸ್‌.ಎಲ್‌.ಸಿ ಯೊಂದಿಗೆ ನಿರ್ದೇಶಕರು, ಬಾಯ್ಲರ್‌ ಮತ್ತು ಕಾರ್ಪಾನೆ ಇವರಿಂದ ಬಾಯ್ಲರ್‌ ಅಟೆಂಡೆಂಟ್‌ ದರ್ಜೆ-2 ರ ಪ್ರಮಾಣ ಪತ್ರ ಪಡೆದಿರಬೇಕು ಅಥವಾ ಎಸ್‌.ಎಸ್‌.ಎಲ್‌.ಸಿ ಯೊಂದಿಗೆ ಬಾಯ್ಲರ್‌ ಅಟೆಂಡೆಂಟ್‌ ಟ್ರೇಡ್‌ನಲ್ಲಿ ಪ್ರಾವಿಜನಲ್‌ / ನ್ಯಾಷನಲ್‌ ಶಿಶಿಕ್ಷು ಪ್ರಮಾಣ ಪತ್ರ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ. ಕೆಲವು ಕಿರಿಯ ತಾಂತ್ರಿಕ ಹುದ್ದೆಗಳಿಗೆ ಅನುಭವದ ಅವಶ್ಯಕತೆ ಇರುವುದಿಲ್ಲ. ಇದನ್ನು ಅಧಿಸೂಚನೆಯಲ್ಲಿ ನೋಡಿಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ವೇತನ ಶ್ರೇಣಿ ರೂ. 21,400-42,000

ಎಲ್ಲ ಹುದ್ದೆಗಳಲ್ಲಿ ಕಿರಿಯ ತಾಂತ್ರಿಕ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಹುದ್ದೆಗಳ ನೇಮಕಾತಿಗೆ ಅಭ್ಯರ್ಥಿ ಗಳು ಕಂಪ್ಯೂಟರ್‌ ಆಪರೇಷನ್ಸ್‌ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನವನ್ನು ಕಡ್ಡಾಯವಾಗಿ ಹೊಂದಿರಬೇಕು ಹಾಗೂ ಕಂಪ್ಯೂಟರ್‌ ಸರ್ಟಿಫಿಕೇಟ್‌ ತರಬೇತಿ ಪ್ರಮಾಣ ಪತ್ರ ಸಲ್ಲಿಸಬೇಕು. ಪದವಿಯಲ್ಲಿ ಕನಿಷ್ಠ ಒಂದು ಕೋರ್ಸ್‌ ಕಂಪ್ಯೂಟರ್‌ ವಿಷಯ ಅಧ್ಯಯನ ಮಾಡಿದಲ್ಲಿ ಕಂಪ್ಯೂಟರ್‌ ಸರ್ಟಿಫಿಕೇಟ್‌ ಸಲ್ಲಿಸಲು ವಿನಾಯಿತಿ ನೀಡಲಾಗುತ್ತದೆ.

ವಯೋಮಿತಿ ಎಷ್ಟು?

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ ವಯೋಮಿತಿ 35 ವರ್ಷ. ಗರಿಷ್ಠ ವಯೋಮಿತಿಯಲ್ಲಿ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಮೂರು ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ನೀಡಲಾಗುತ್ತದೆ. ವಯೋಮಿತಿಯನ್ನು ನೇಮಕಾತಿ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ: 03-03-2023 ಕ್ಕೆ ಲೆಕ್ಕಾಚಾರ ಹಾಕಲಾಗುತ್ತದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಅರ್ಜಿ ಶುಲ್ಕ ಎಷ್ಟು?

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-3 ಹಾಗೂ ಅಂಗವಿಕಲ ಅಭ್ಯರ್ಥಿಗಳು ರೂ. 500 (ಬ್ಯಾಂಕ್‌ ಶುಲ್ಕ ಪ್ರತ್ಯೇಕ) ಅರ್ಜಿ ಶುಲ್ಕ ಪಾವತಿಸಬೇಕು. ಇತರೆ ವರ್ಗದ ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ ರೂ. 1000 (ಬ್ಯಾಂಕ್‌ ಶುಲ್ಕ ಪ್ರತ್ಯೇಕ). ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ (ಡೆಬಿಟ್‌ ಕಾರ್ಡ್‌ / ಕ್ರೆಡಿಟ್‌ ಕಾರ್ಡ್‌/ ಇಂಟರ್‌ನೆಟ್‌ ಬ್ಯಾಂಕಿಂಗ್‌) ಮೂಲಕ ಪಾವತಿಸಬಹುದಾಗಿರುತ್ತದೆ.

ನೇಮಕ ಹೇಗೆ?

ಮೊದಲಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪದವಿ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ ಮತ್ತು ಪದವಿಗಿಂತ ಕಡಿಮೆ ವಿದ್ಯಾರ್ಹತೆ ಹೊಂದಿರಬೇಕಾದ ಹುದ್ದೆಗಳಿಗೆ (ಕಿರಿಯ ತಾಂತ್ರಿಕ ಹುದ್ದೆ) ಪ್ರತ್ಯೇಕವಾಗಿ ಲಿಖಿತ ಪರೀಕ್ಷೆಯನ್ನು ಒಟ್ಟು 200 ಅಂಕಗಳಿಗೆ ನೆಡೆಸಲಾಗುತ್ತದೆ.

ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಮೌಖಿಕ ಸಂದರ್ಶನಕ್ಕೆ ಕರೆಯಲಾಗುವುದು. ಮೌಖಿಕ ಸಂದರ್ಶನಕ್ಕೆ ಗರಿಷ್ಟ 15 ಅಂಕಗಳನ್ನು ನಿಗದಿಪಡಿಸಲಾರುತ್ತದೆ. ಅಭ್ಯರ್ಥಿಯು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಶೇ. 85 ಕ್ಕೆ ಇಳಿಸಿ ಹಾಗೆ ಪ್ರಾಪ್ತವಾಗುವ ಅಂಕಗಳಿಗೆ ಮೌಖಿಕ ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಒಟ್ಟುಗೂಡಿಸಿ ಅಂತಿಮ ಮೆರಿಟ್‌ ಪಟ್ಟಿಯನ್ನು ತಯಾರಿಸಿ ಮೆರಿಟ್‌ ಹಾಗೂ ಮೀಸಲಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ : DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Exit mobile version