Site icon Vistara News

KPSC Recruitment 2022 | ಕೆಪಿಎಸ್‌ಸಿಯಿಂದ ವಿವಿಧ 23 ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

KPSC Recruitment 2022

ಬೆಂಗಳೂರು: ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಈಗಾಗಲೇ ಪ್ರಕಟಿಸಿರುವ ವಿವಿಧ 23 ಅಧಿಸೂಚನೆಗಳಿಗೆ (KPSC Recruitment 2022) ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗಳನ್ನು ನಡೆಸಲು ತಯಾರಿ ನಡೆಸಿದ್ದು, ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ.

ಈ ವಿಷಯವನ್ನು ಕೆಪಿಎಸ್‌ಸಿಯ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಆಯೋಗವು ಸಿದ್ಧಪಡಿಸಿರುವ ತಾತ್ಕಾಲಿಕ ವೇಳಾಪಟ್ಟಿಯನ್ನೂ ಒದಗಿಸಿದ್ದಾರೆ. ಇದೇ ಡಿಸೆಂಬರ್‌ ಅಂತ್ಯದಿಂದ ಹಿಡಿದು, 2023ರ ಸೆಪ್ಟೆಂಬರ್‌ವರೆಗೆ ಈ ಪರೀಕ್ಷೆಗಳು ನಡೆಯಲಿವೆ.

ಈ ತಾತ್ಕಾಲಿಕ ವೇಳಾಪಟ್ಟಿಗೆ ಅಭ್ಯರ್ಥಿಗಳಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪರೀಕ್ಷೆಗಳನ್ನು ತಡವಾಗಿ ನಡೆಸಲಾಗುತ್ತಿದೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ತಾತ್ಕಾಲಿಕ ವೇಳಾಪಟ್ಟಿಯನ್ನು ಒಮ್ಮೆ ಪರಾಮರ್ಶಿಸಬೇಕು ಸರ್. ಕಾರಣ, ಈಗಾಗಲೇ ಅಧಿಸೂಚನೆ ಹೊರಡಿಸಿದ ಹುದ್ದೆಗಳು ಕೆಲವೇ ಕೆಲವು (1,2,3,5,6,7,8,10,13,20) ಹೀಗೆ ಇರುವುದರಿಂದ ಇಷ್ಟೊಂದು ಸಮಯ ತೆಗೆದುಕೊಳ್ಳುವ ಅಗತ್ಯತೆ ಇಲ್ಲ ಅನಿಸುತ್ತೆ. ಹಾಗಾಗಿ ಈ ಎಲ್ಲಾ ಹುದ್ದೆಗಳಿಗೆ ಮಾರ್ಚ್‌ ಒಳಗಾಗಿ ಪರೀಕ್ಷೆ ನಡೆಸಬೇಕೆಂದು ತಮ್ಮಲ್ಲಿ ವಿನಂತಿ ಸರ್ʼʼ ಎಂದು ಪ್ರಕಾಶ ಮಿರಗಾಣಿ ಎಂಬುವರು ಮನವಿ ಮಾಡಿದ್ದಾರೆ.

ಅನೇಕರು ಪರೀಕ್ಷಾ ದಿನಾಂಕಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರಲ್ಲದೆ, ಕೆಲವು ಸಲಹೆಗಳನ್ನೂ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೆಪಿಎಸ್‌ಸಿಯ ಕಾರ್ಯದರ್ಶಿ ವಿಕಾಸ್‌ ಕಿಶೋರ್‌ ಸುರಳ್ಕರ್‌, “ಅಭ್ಯರ್ಥಿಗಳು ನೀಡಿರುವ ಸಲಹೆಗಳನ್ನು ಗಮನಿಸಲಾಗಿದೆ. ಈ ಕುರಿತು ಕಾನೂನಾತ್ಮಕವಾಗಿ ಪರಿಶೀಲಿಸಿ, ಆಯೋಗದ ಒಪ್ಪಿಗೆ ಪಡೆದು, ವೇಳಾಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತೇವೆʼʼ ಎಂದು ಹೇಳಿದ್ದಾರೆ.

ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಪರೀಕ್ಷೆಯ ನಿರ್ದಿಷ್ಟ ದಿನಾಂಕವನ್ನು 30 ದಿನಗಳ ಮುಂಚಿತವಾಗಿ ತಿಳಿಸಲಾಗುವುದು. ಈ ಬಗ್ಗೆ ಆಯೋಗದ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗುವುದು ಎಂದು ಆಯೋಗವು ಸ್ಪಷ್ಟಪಡಿಸಿದೆ.

ವಿವಿಧ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಇಲ್ಲಿದೆ;

ಹೆಚ್ಚಿನ ಮಾಹಿತಿಗೆ ಆಯೋಗದ ವೆಬ್‌ಸೈಟ್‌ | https://kpsc.kar.nic.in/

ಇದನ್ನೂ ಓದಿ | KPSC Recruitment 2022 | ಸರ್ಕಾರ ಇಲಾಖೆಗಳಲ್ಲಿ 700 ಹುದ್ದೆ; ಸದ್ಯವೇ ಕೆಪಿಎಸ್‌ಸಿ ಅಧಿಸೂಚನೆ

Exit mobile version