Site icon Vistara News

LIC AAO Recruitment 2023 | ಎಲ್‌ಐಸಿಯಲ್ಲಿ 300 ಎಎಓ ನೇಮಕ; ಕನ್ನಡದಲ್ಲಿ ನಡೆಯಲ್ಲ ಪರೀಕ್ಷೆ!

LIC AAO Recruitment 2023

LIC AAO Recruitment 2023

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಸಹಾಯಕ ಆಡಳಿತ ಅಧಿಕಾರಿ (Assistant Administrative Officer) 300 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು (LIC AAO Recruitment 2023), ಇದಕ್ಕೆ ನಡೆಸಲಾಗುವ ಪೂರ್ವಭಾವಿ (ಪ್ರಿಲಿಮ್ಸ್‌) ಮತ್ತು ಮುಖ್ಯ ಪರೀಕ್ಷೆಯನ್ನು (ಮೇನ್‌) ಕೇವಲ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಭಾಷೆಯಲ್ಲಿ ನಡೆಸಲಿದೆ.

ಇದರಿಂದಾಗಿ ರಾಜ್ಯದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ಹಿಂದಿಗೆ ಬದಲಾಗಿ ಸ್ಥಳೀಯ ಭಾಷೆಗಳಲ್ಲಿಯೇ ಪರೀಕ್ಷೆ ನಡೆಸಬೇಕು ಎಂದು ಕನ್ನಡ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಂತೆ ಎಲ್‌ಐಸಿಯೂ ಹಿಂದಿಯಲ್ಲಿ ಪರೀಕ್ಷೆ ನಡೆಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ನೇಮಕ?
ಎಲ್‌ಐಸಿಯು ಒಟ್ಟು 300 ಸಹಾಯಕ ಆಡಳಿತ ಅಧಿಕಾರಿ (ಎಎಓ) (Generalist) ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನವಾಗಿರುತ್ತದೆ. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ಮೀಸಲಾತಿ ಹಂಚಿಕೆ ಈ ರೀತಿ ಇದೆ;

ವಯೋಮಿತಿ ಎಷ್ಟು?
21 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯನ್ನು ದಿನಾಂಕ 01–01-2023ಕ್ಕೆ ಲೆಕ್ಕ ಹಾಕಲಾಗುತ್ತದೆ. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿರುತ್ತದೆ.

ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ 700 ರೂ.ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಬಹುದಾಗಿದೆ. ಎಸ್‌ಸಿ/ಎಸ್‌ಟಿ, PwBD ಅಭ್ಯರ್ಥಿಗಳು ಇಂಟಿಮೇಷನ್‌ ಶುಲ್ಕ 85 ರೂ. ಪಾವತಿಸಬೇಕಿರುತ್ತದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ (Click Here) ಮಾಡಿ

ವೇತನ ಶ್ರೇಣಿ: ಬೇಸಿಕ್‌ ವೇತನ ಮಾಸಿಕ 53,600 ರೂ. ಗಳಾಗಿದ್ದು, ವೇತನ ಶ್ರೇಣಿ ಇಂತಿದೆ: ರೂ.53,600- 2,645(14)-90,630-2,865(4)-1,02,090. ಇದಲ್ಲದೆ, ಡಿಎ/ಎಚ್‌ಆರ್‌ಎ, ಮೆಡಿಕಲ್‌ ಇನ್ನಿತರ ಭತ್ಯೆಗಳೂ ಇರುತ್ತವೆ.

ನೇಮಕ ಹೇಗೆ?
ಮೂರು ಹಂತದ ನೇಮಕ ಪ್ರಕ್ರಿಯೆ ಮೂಲಕ ಈ ಹುದ್ದೆಗಳಿಗೆ ನೇಮಕ ನಡೆಯಲಿದೆ. ಮೊದಲಿಗೆ ಪೂರ್ವಭಾವಿ ಪರೀಕ್ಷೆ (100 ಅಂಕಗಳಿಗೆ) ನಡೆಸಲಾಗುತ್ತದೆ, ಇದರಲ್ಲಿ ಅರ್ಹತೆ ಪಡೆದವರಿಗೆ ಮೂಖ್ಯ ಪರೀಕ್ಷೆ (300 ಅಂಕಗಳಿಗೆ) ನಡೆಸಲಾಗುತ್ತದೆ. ಇದರ ಜತೆಗೆ 25 ಅಂಕಗಳಿಗೆ ವಿವರಣಾತ್ಮಕ ಪರೀಕ್ಷೆಯೂ ನಡೆಯಲಿದೆ. ಇದರಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಮೂರನೇ ಹಂತದಲ್ಲಿ ನಡೆಯಲಿರುವ ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಆಹ್ವಾನಿಸಲಾಗುತ್ತದೆ. ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಹೆಚ್ಚಿನ ಮಾಹಿತಿಗೆ ಎಲ್‌ಐಸಿ ವೆಬ್‌ಸೈಟ್‌ ವಿಳಾಸ: Click Here

ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ?
ರಾಜ್ಯದ ಬೆಳಗಾವಿ, ಬೆಂಗಳೂರು, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿಯಲ್ಲಿ ಪರೀಕ್ಷಾ ಕೇಂದ್ರ ಇರಲಿದೆ. ಮುಖ್ಯ ಪರೀಕ್ಷೆಯನ್ನು ಬೆಂಗಳೂರು, ಬೆಳಗಾವಿ ಮತ್ತು ಶಿವಮೊಗ್ಗದಲ್ಲಿ ಮಾತ್ರ ನಡೆಸಲಾಗುತ್ತದೆ.

ಇದನ್ನೂ ಓದಿ| SBI PO Exam : ಎಸ್‌ಬಿಐ ಪಿಓ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ಪ್ರಕಟ; ಜ.30ಕ್ಕೆ ಮುಖ್ಯ ಪರೀಕ್ಷೆ

Exit mobile version