Site icon Vistara News

LIC ADO 2023 : ಎಲ್‌ಐಸಿಯಿಂದ ರಾಜ್ಯದಲ್ಲಿ 696 ಎಡಿಓ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷಾ ದಿನಾಂಕ ಬದಲು

LIC ADO Recruitment 2023 ಎಲ್‌ಐಸಿ ನೇಮಕ

LIC ADO Recruitment 2023

ಬೆಂಗಳೂರು: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ) ಅಪ್ರೆಂಟಿಸ್‌ ಅಭಿವೃದ್ಧಿ ಅಧಿಕಾರಿ (Apprentice Development Officer) 9,394 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು (LIC ADO 2023), ಅರ್ಜಿ ಸಲ್ಲಿಸಲು ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದೆ. ಈ ನಡುವೆ ಮುಖ್ಯ ಪರೀಕ್ಷೆಯ ದಿನಾಂಕವನ್ನು ಬದಲಾಯಿಸಲಾಗಿದೆ.

ಸೋಮವಾರದಂದು ಪ್ರಕಟಣೆ ಹೊರಡಿಸಿರುವ ಎಲ್‌ಐಸಿಯು ಈ ನೇಮಕಕ್ಕೆ ಸಂಬಂಧಿಸಿದಂತೆ ನಡೆಸಲಾಗುವ ಮುಖ್ಯ ಪರೀಕ್ಷೆಯನ್ನು ಏಪ್ರಿಲ್‌ 8 ಕ್ಕೆ ಬದಲಾಗಿ ಏಪ್ರಿಲ್‌ 23ಕ್ಕೆ ನಡೆಸಲಾಗುವುದು ಎಂದು ತಿಳಿಸಿದೆ. ಈ ಹಿಂದೆ ಹೊರಡಿಸಿದ ಅಧಿಸೂಚನೆಯಲ್ಲಿ ಮಾರ್ಚ್‌ 12 ಕ್ಕೆ ಪೂರ್ವಭಾವಿ ಪರೀಕ್ಷೆ ಮತ್ತು ಏಪ್ರಿಲ್‌ 8 ಮುಖ್ಯ ಪರೀಕ್ಷೆ ನಡೆಸಲಾಗುವುದು ಎಂದು ಪ್ರಕಟಿಸಲಾಗಿತ್ತು.

ಇನ್ನೂ ಅರ್ಜಿ ಸಲ್ಲಿಸದೇ ಇರುವ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 10 ಕೊನೆಯ ದಿನವಾಗಿರುತ್ತದೆ. ಅರ್ಜಿ ಶುಲ್ಕ ಪಾವತಿಸಲು ಕೂಡ ಫೆಬ್ರವರಿ 10 ಕೊನೆಯ ದಿನವಾಗಿದೆ.

ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10-02-2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 10-02-2023

ಪೂರ್ವಭಾವಿ ಪರೀಕ್ಷೆ (ಪ್ರಿಲಿಮ್ಸ್‌) : 12-03-2023
ಮುಖ್ಯ ಪರೀಕ್ಷೆ ದಿನಾಂಕ : 23-04-2023
ಸಹಾಯವಾಣಿ ಸಂಖ್ಯೆ: 91-022 6827 6827

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ದೇಶಾದ್ಯಂತ ಒಟ್ಟು 9,394 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದರೂ, ಎಲ್‌ಐಸಿಯ ದಕ್ಷಿಣ ಕೇಂದ್ರೀಯ ವಲಯ ಕಚೇರಿಯ ಅಡಿಯಲ್ಲಿ 1,408 ಹುದ್ದೆಗಳಿಗೆ ನೇಮಕ ನಡೆಯಲಿದೆ. ಈ ವಲಯ ಕಚೇರಿ ಅಡಿಯಲ್ಲಿ ಬರುವ ರಾಜ್ಯದ ಬೆಂಗಳೂರು -I, ಬೆಂಗಳೂರು -II ಮತ್ತು ಮೈಸೂರು, ಬೆಳಗಾವಿ, ಧಾರವಾಡ, ಮೈಸೂರು, ರಾಯಚೂರು, ಶಿವಮೊಗ್ಗ, ಉಡುಪಿ ವಿಭಾಗೀಯ ಕಚೇರಿಗಳಲ್ಲಿ ಒಟ್ಟು 696 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಯಾವುದಾದರು ಒಂದು ವಿಭಾಗೀಯ ಕಚೇರಿಯ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ರಾಜ್ಯದಲ್ಲಿ ಎಲ್ಲಿ ಎಷ್ಟು ಹುದ್ದೆ?

ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕದ ಸಂದರ್ಭದಲ್ಲಿ ವಿಮಾ ಕಂಪನಿಯಲ್ಲಿ ಅಥವಾ ವಿತ್ತೀಯ ಕಂಪನಿಯ ಮಾರುಕಟ್ಟೆ ವಿಭಾಗದಲ್ಲಿ 2 ವರ್ಷ ಅನುಭವ ಇದ್ದವರಿಗೆ ಆಧ್ಯತೆ ನೀಡಲಾಗುತ್ತದೆ. ಎಲ್‌ಐಸಿ ಎಂಪ್ಲಾಯಿ ಕೆಟಗರಿ ಮತ್ತು ಏಜೆಂಟ್‌ ಕೆಟಗರಿಯಲ್ಲಿಯೂ ನೇಮಕ ನಡೆಯಲಿದೆ.

ವಯೋಮಿತಿ ಎಷ್ಟು?

21 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯನ್ನು ದಿನಾಂಕ 01-01-2023ಕ್ಕೆ ಲೆಕ್ಕ ಹಾಕಲಾಗುತ್ತದೆ. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗಿರುತ್ತದೆ. ಗರಿಷ್ಠ ವಯೋಮಿತಿ ಎಲ್‌ಐಸಿ ಏಜೆಂಟ್‌ ಆಗಿದ್ದಲ್ಲಿ ೪೦ ಮತ್ತು ಎಲ್‌ಐಸಿ ಎಂಪ್ಲಾಯಿ ಆಗಿದ್ದಲ್ಲಿ 42 ವರ್ಷಗಳಾಗಿರುತ್ತವೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ 750 ರೂ.ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಬಹುದಾಗಿದೆ. ಎಸ್‌ಸಿ/ಎಸ್‌ಟಿ, PwBD ಅಭ್ಯರ್ಥಿಗಳು ಇಂಟಿಮೇಷನ್‌ ಶುಲ್ಕ 100 ರೂ. ಪಾವತಿಸಬೇಕಿರುತ್ತದೆ.

ಹೆಚ್ಚಿನ ಮಾಹಿತಿಗೆ ಎಲ್‌ಐಸಿ ವೆಬ್‌ಸೈಟ್‌ ವಿಳಾಸ: Click Here

ಸ್ಟೈಫೆಂಡ್‌ ಎಷ್ಟು?

ಅಪ್ರೆಂಟಿಸ್‌ ಅವಧಿಯಲ್ಲಿ ಮಾಸಿಕವಾಗಿ 51,500 ರೂ. ಸ್ಟೈಫೆಂಡ್‌ ನೀಡಲಾಗುತ್ತದೆ. ಪ್ರೊಬೆಷನರಿ ಅವಧಿಯಲ್ಲಿ ರೂ. 35,650-2200(2)-40,050-2595(2)-45,240-2645(17)-90,205 ವೇತನ ಶ್ರೇಣಿ ನಿಗದಿಯಾಗಿರುತ್ತದೆ. ಎ ಕ್ಲಾಸ್‌ ನಗರದಲ್ಲಿ ಡೆವಲಪ್‌ಮೆಂಟ್‌ ಆಫೀಸರ್‌ ಆಗಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚು ಕಡಿಮೆ ಮಾಸಿಕ ರೂ. 56,000 ವೇತನ ದೊರೆಯಲಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ನೇಮಕ ಹೇಗೆ?

ಮೂರು ಹಂತದ ನೇಮಕ ಪ್ರಕ್ರಿಯೆ ಮೂಲಕ ಈ ಹುದ್ದೆಗಳಿಗೆ ನೇಮಕ ನಡೆಯಲಿದೆ. ಮೊದಲಿಗೆ ಪೂರ್ವಭಾವಿ ಪರೀಕ್ಷೆ (70 ಅಂಕಗಳಿಗೆ) ನಡೆಸಲಾಗುತ್ತದೆ, ಇದರಲ್ಲಿ ಅರ್ಹತೆ ಪಡೆದವರನ್ನು 1:20 ರ ಅನುಪಾತದಲ್ಲಿ ಮೂಖ್ಯ ಪರೀಕ್ಷೆಗೆ (160 ಅಂಕಗಳಿಗೆ) ಆಹ್ವಾನಿಸಲಾಗುತ್ತದೆ. ಇದರಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಮೂರನೇ ಹಂತದಲ್ಲಿ ನಡೆಯಲಿರುವ ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಆಹ್ವಾನಿಸಲಾಗುತ್ತದೆ. ಸಂದರ್ಶನಕ್ಕೆ 40 ಅಂಕ ನಿಗದಿಯಾಗಿರುತ್ತದೆ. ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ : UPSC Recruitment 2023 : ರೈಲ್ವೆ ಇಲಾಖೆಯ IRMS ಅಧಿಕಾರಿಯಾಗಬೇಕೇ? ಐಎಎಸ್‌ ಪರೀಕ್ಷೆಗೇ ಅರ್ಜಿ ಸಲ್ಲಿಸಿ!

Exit mobile version