ನವ ದೆಹಲಿ: ಸೋಷಿಯಲ್ ಮೀಡಿಯಾ ದಿಗ್ಗಜ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಕಂಪನಿ ಭರ್ಜರಿ ಸಂಖ್ಯೆಯಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಲು ಮುಂದಾಗಿದೆ. ಮೆಟಾ ಸಂಸ್ಥೆಯ 11 ಸಾವಿರ ಉದ್ಯೋಗಿ(ಶೇ.13)ಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಹೆಚ್ಚುತ್ತಿರುವ ವೆಚ್ಚಗಳು ಮತ್ತು ಕಂಪನಿಗೆ ಬರುತ್ತಿರುವ ಜಾಹೀರಾತು ಕಡಿಮೆಯಾಗುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಮೆಟಾ ಸಂಸ್ಥೆ ಒಟ್ಟಾರೆ 11 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದರಿಂದ ಸಹಜವಾಗಿಯೇ ಅವರಲ್ಲಿ ಆತಂಕ ಶುರುವಾಗಿದೆ. ಇನ್ನು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಮೆಟಾ ಪ್ಲಾಟ್ಫಾರ್ಮ್ ಸಿಇಒ ಮಾರ್ಕ್ ಜುಕರ್ಬರ್ಗ್, ‘ಉದ್ಯೋಗ ಕಡಿತದ ನಿರ್ಧಾರದ ಹೊಣೆಗಾರಿಕೆಯನ್ನು ನಾನು ತೆಗೆದುಕೊಳ್ಳುತ್ತೇನೆ. ನಾವು ಯಾಕೆ ಇಂಥ ನಿರ್ಧಾರ ಮಾಡಿದ್ದೇವೆ ಎಂಬುದು ನಮಗೆ ಗೊತ್ತು. ಹಾಗೇ, ಈ ನಿರ್ಧಾರ ಎಲ್ಲರಿಗೂ ಆತಂಕ ತಂದಿದೆ. ಅದರಲ್ಲೂ ಯಾರೆಲ್ಲ ಉದ್ಯೋಗ ಕಳೆದುಕೊಳ್ಳುತ್ತಾರೋ, ಅವರಿಗೆ ತುಂಬ ಕಷ್ಟವಾಗುತ್ತದೆ. ಆ ಬಗ್ಗೆ ನಮಗೂ ವಿಷಾದವಿದೆ’ ಎಂದು ಹೇಳಿದ್ದಾರೆ.
ಮೆಟಾ ಕಂಪನಿ ಇನ್ಸ್ಟಾಗ್ರಾಂ, ವಾಟ್ಸಾಆ್ಯಪ್ಗಳ ಮಾಲೀಕತ್ವವನ್ನು 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಇತ್ತೀಚೆಗೆ ಟ್ವಿಟರ್ನ್ನು ಎಲಾನ್ ಮಸ್ಕ್ಗೆ ಮಾರಾಟ ಮಾಡುವ ವೇಳೆ ಆ ಕಂಪನಿಯ ಶೇ.50ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿತ್ತು. ಅವರನ್ನೆಲ್ಲ ಕೆಲಸದಿಂದ ತೆಗೆದು ಹಾಕುವಾಗ ಒಂದು ಶಿಸ್ತು ಕೂಡ ಇರಲಿಲ್ಲ.
ಇದನ್ನೂ ಓದಿ: Meta lay off | ಟ್ವಿಟರ್ ಬಳಿಕ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದಲ್ಲೂ ಸಾವಿರಾರು ಉದ್ಯೋಗ ಕಡಿತ?