Site icon Vistara News

MSIL Recruitment 2023 : ಎಂಎಸ್‌ಐಎಲ್‌ನಲ್ಲಿ 72 ಹುದ್ದೆ; ಮಾರಾಟ ಕ್ಷೇತ್ರದಲ್ಲಿದ್ದವರಿಗೆ ಅಪೂರ್ವ ಅವಕಾಶ

MSIL Recruitment 2023

#image_title

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಬೆಂಗಳೂರಿನ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್‌ನಲ್ಲಿನ (MSIL Recruitment 2023 ) ಒಟ್ಟು 72 ಹುದ್ದೆಗಳು ಸೇರಿದಂತೆ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ 670 ಹುದ್ದೆಗಳ ನೇಮಕ ಪ್ರಕ್ರಿಯೆ (KEA Recruitment 2023) ಆರಂಭಿಸಿದೆ. ಈಗಾಗಲೇ ವಿವರವಾದ ಅಧಿಸೂಚನೆ ಪ್ರಕಟಿಸಿ, ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ 72 ಹುದ್ದೆಗಳಲ್ಲದೆ, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 186, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ 386, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ 26 ಹುದ್ದೆಗಳಿಗೆ ಈ ನೇಮಕ ನಡೆಯುತ್ತಿದೆ.

ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 22 ಕೊನೆಯ ದಿನವಾಗಿದೆ. ಅರ್ಜಿ ಶುಲ್ಕವನ್ನು ಆಫ್‌ಲೈನ್‌ನಲ್ಲಿ ಮಾತ್ರ ಪಾವತಿಸಲು (ಅಂಚೆಕಚೇರಿ ಮೂಲಕ) ಅವಕಾಶ ನೀಡಲಾಗಿದೆ. ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿ ಹುದ್ದೆಗೆ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸಬೇಕಿರುತ್ತದೆ ಮತ್ತು ಪ್ರತ್ಯೇಕವಾಗಿ ಅರ್ಜಿ ಶುಲ್ಕ ಪಾವತಿಸಬೇಕಿರುತ್ತದೆ.

ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 23-06-2023 ಮಧ್ಯಾಹ್ನ 2 ಗಂಟೆಯಿಂದ
ಇ-ಅಂಚೆ ಕಚೇರಿಗಳಲ್ಲಿ ಶುಲ್ಕಪಾವತಿ (ಕಚೇರಿಯ ವೇಳೆಯಲ್ಲಿ) ಬೆಳಗ್ಗೆ11ಗಂಟೆಯಿಂದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22-07-2023 ಸಂಜೆ 5.30ರ ವರೆಗೆ
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 25-07-2023

ಸಹಾಯವಾಣಿ ಸಂಖ್ಯೆ: 080-23460460
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ ವಿಳಾಸ:
https://cetonline.karnataka.gov.in/kea/

ಯಾವೆಲ್ಲಾ ಹುದ್ದೆಗಳಿಗೆ ನೇಮಕ?

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ಯಾವ ಹುದ್ದೆಗೆ ಏನು ವಿದ್ಯಾರ್ಹತೆ?

1.ಸಹಾಯಕ ವ್ಯವಸ್ಥಾಪಕರು ( Assistant Manager (Sales))
MBA or equivalent post Graduate, Diploma in Marketing Management, with a minimum of 2 years experience in Marketing/Sales/Product Management of Consumer Products/ Exports in a reputed Organization.
OR
Degree with minimum 5 years experience in Marketing/Sales/Product/ Exports in Supervisory capacity in reputed Organization.

2. ಸಹಾಯಕ ವ್ಯವಸ್ಥಾಪಕರು ( Assistant Manager (Accounts))
CA/ICWA/MBA (Finance) from IIM.
OR
Inter CA/ICWA/M.Com with 5 years experience in accounts & Finance Department.

3. ಸಹಾಯಕ ವ್ಯವಸ್ಥಾಪಕರು (Assistant Manager (Personnel))
MSW/MBA or equivalent post graduate Diploma in personnel Management/ Business Administration with a minimum of 2 years experience in supervisory capacity. Degree in Law is compulsory.

4. ಸಹಾಯಕ ವ್ಯವಸ್ಥಾಪಕರು (Assistant Manager (Pharma))
M.Sc in Chemistry or M.Pharma/Doctor with 5 years experience in reputed Organization.

5. ಸಹಾಯಕ ವ್ಯವಸ್ಥಾಪಕರು (Assistant Manager (Tours & Travels))
Post Graduate, IATA in tours & Travels with 5 years experience in reputed Organization.

6. ಸಹಾಯಕ ವ್ಯವಸ್ಥಾಪಕರು (Assistant Manager (EDP))
Degree in Engineering (Computer Science)/ MCA, with 2 years experience.
OR
Degree in Computer Science with 5 years experience in developing software or related work.

7. ಮಾರಾಟ ಮೇಲ್ವಿಚಾರಕರು (Sales Supervisor )
ಮಾರಾಟ ಕ್ಷೇತ್ರದಲ್ಲಿ ಐದು ವರ್ಷಗಳ ಅನುಭವ ಹೊಂದಿರುವ ಪದವೀಧರರು ಅರ್ಜಿ ಸಲ್ಲಿಸಬಹುದು.

8. ಮಾರಾಟ ಎಂಜಿನಿಯರ್‌ ( Sales Engineer (Mechanical))
ಮಾರುಕಟ್ಟೆ/ ಮಾರಾಟ ಕ್ಷೇತ್ರದಲ್ಲಿ ಐದು ವರ್ಷಗಳ ಅನುಭವ ಹೊಂದಿರುವ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದವರು ಅಥವಾ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧರರು ಅರ್ಜಿ ಸಲ್ಲಿಸಬಹುದು.

9. ಮಾರಾಟ ಎಂಜಿನಿಯರ್‌ (Sales Engineer (Electrical))
ಮಾರುಕಟ್ಟೆ/ ಮಾರಾಟ ಕ್ಷೇತ್ರದಲ್ಲಿ ಐದು ವರ್ಷಗಳ ಅನುಭವ ಹೊಂದಿರುವ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದವರು ಅಥವಾ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಪದವೀಧರರು ಅರ್ಜಿ ಸಲ್ಲಿಸಬಹುದು.

10. ಮಾರಾಟ ಎಂಜಿನಿಯರ್‌ (Sales Engineer (CIVIL))
ಮಾರುಕಟ್ಟೆ/ ಮಾರಾಟ ಕ್ಷೇತ್ರದಲ್ಲಿ ಐದು ವರ್ಷಗಳ ಅನುಭವ ಹೊಂದಿರುವ ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡಿದವರು ಅಥವಾ ಸಿವಿಲ್‌ ಎಂಜಿನಿಯರಿಂಗ್‌ ಪದವೀಧರರು ಅರ್ಜಿ ಸಲ್ಲಿಸಬಹುದು.

11. ಮಾರಾಟ ಎಂಜಿನಿಯರ್‌ (Sales Engineer (E&C))
ಮಾರುಕಟ್ಟೆ/ ಮಾರಾಟ ಕ್ಷೇತ್ರದಲ್ಲಿ ಐದು ವರ್ಷಗಳ ಅನುಭವ ಹೊಂದಿರುವ Electrical & Communicationನಲ್ಲಿ ಡಿಪ್ಲೊಮಾ ಮಾಡಿದವರು ಅಥವಾ Electrical & Communication ಎಂಜಿನಿಯರಿಂಗ್‌ ಪದವೀಧರರು ಅರ್ಜಿ ಸಲ್ಲಿಸಬಹುದು.

12. ಅಕೌಂಟ್‌ ಕ್ಲರ್ಕ್‌ (Accounts Clerk)
ಬಿಕಾಂ/ಸ್ಟ್ಯಾಟಿಟಿಕ್ಸ್‌/ ಎಕನಾಮಿಕ್ಸ್‌/ ಮ್ಯಾಥ್‌ಮೆಟಿಕ್ಸ್‌ ಪದವೀಧರರು ಅರ್ಜಿ ಸಲ್ಲಿಸಬಹುದು. ಮೂರು ವರ್ಷಗಳ ಅನುಭವ ಕಡ್ಡಾಯ.

13. ಕ್ಲರ್ಕ್‌ (Clerk)
ಯಾವುದೇ ಪದವೀಧರರು ಅರ್ಜಿ ಸಲ್ಲಿಸಬಹುದು.

14. ಮಾರಾಟ ಪ್ರತಿನಿಧಿಗಳು (Sales Representative)
ಮಾರುಕಟ್ಟೆ ಮತ್ತು ಮಾರಾಟದಲ್ಲಿ ಐದು ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ (Click Here ) ಮಾಡಿ.

ವಯೋಮಿತಿ ಎಷ್ಟು?

ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸಾಮಾನ್ಯ ಅಭ್ಯರ್ಥಿಗೆ ಗರಿಷ್ಠ ವಯೋಮಿತಿ 35 ವರ್ಷ. ಪ್ರವರ್ಗ- 2ಎ, 2ಬಿ, 3ಎ,3ಬಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ ನಿಗದಿಪಡಿಸಲಾಗುತ್ತದೆ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 1,000 ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ರ ಅಭ್ಯರ್ಥಿಗಳಿಗೆ 750 ರೂ., ಅಂಗವಿಕಲ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರು 250 ರೂ. ನಿಗದಿಪಡಿಸಲಾಗುತ್ತದೆ. ಅರ್ಜಿ ಸಲ್ಲಿಸುವಾಗ ಚಲನ್‌ ಪಡೆದು ಇ-ಅಂಚೆ ಕಚೇರಿ ಮೂಲಕ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗುತ್ತದೆ.

ಅರ್ಜಿ ಶುಲ್ಕ ಪಾವತಿಸಲು ಇಲ್ಲಿ ಕ್ಲಿಕ್‌ (Click Here ) ಮಾಡಿ.

ನೇಮಕ ಹೇಗೆ?

ಆಹಾರ ಮತ್ತು ನಾಗರೀಕ ಸರಬರಾಜು ನಿಗಮ(ನಿ)ದಲ್ಲಿನ ಹುದ್ದೆಗಳನ್ನು ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) (ಸಾಮಾನ್ಯ) ನಿಯಮಗಳು 2014ರಡಿ ನಿರ್ದಿಷ್ಟಪಡಿಸಲಾದ ಮತ್ತು ಕರ್ನಾಟಕ ನಾಗರೀಕ ಸೇವೆಗಳು (ಲಿಪಿಕ ಹುದ್ದೆಗಳ ನೇಮಕಾತಿ) ನಿಯಮಗಳು 1978ರಡಿ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುತ್ತದೆ.

ಇದನ್ನೂ ಓದಿ: KARBWWB Recruitment 2023 : ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 186 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

ಸ್ಪರ್ಧಾತ್ಮಕ ಪರೀಕ್ಷೆಯ ವೇಳಾಪಟ್ಟಿಯನ್ನು ಮುಂದೆ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಪರೀಕ್ಷೆಯ ಪಠ್ಯಕ್ರಮವನ್ನೂ ಕೆಇಎ ವೆಬ್‌ಸೈಟ್‌ನಲ್ಲಿ ಒದಗಿಸಲಾಗುತ್ತದೆ. ಆಫ್‌ಲೈನ್‌ನಲ್ಲಿ- ಒಎಂಆರ್‌ ಮಾದರಿಯಲ್ಲಿ ಈ ಪರೀಕ್ಷೆ ನಡೆಯಲಿದೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಬೆಳಗಾವಿ, ಕಲಬುರಗಿ, ವಿಜಯಪುರ, ಶಿವಮೊಗ್ಗ ಮತ್ತು ತುಮಕೂರಿನಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ.

Exit mobile version