Site icon Vistara News

Karnataka Holiday List 2024: ರಾಜ್ಯದ ಸಾರ್ವತ್ರಿಕ ರಜಾ ದಿನಗಳ ಅಧಿಕೃತ ಪಟ್ಟಿ ಬಿಡುಗಡೆ

Monsoon session

ಬೆಂಗಳೂರು: 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಅಧಿಕೃತ ಪಟ್ಟಿಯನ್ನು (Karnataka Holiday List 2024) ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ. ಈ ಬಗ್ಗೆ ರಾಜ್ಯ ಪತ್ರ ಹೊರಡಿಸಲಾಗಿದ್ದು, ಈ ಪಟ್ಟಿಯಲ್ಲಿ ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು, ಪ್ರಮುಖ ಹಬ್ಬಗಳು ಹಾಗೂ ಮಹಾನ್‌ ವ್ಯಕ್ತಿಗಳ ಜಯಂತಿಗಳು ಸೇರಿವೆ.

ಸಾರ್ವತ್ರಿಕ ರಜಾ ದಿನಗಳ ಪಟ್ಟಿ

ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು

ದಿ. 15-01-2024: ಸೋಮವಾರ – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ದಿ. 26-01-2024: ಶುಕ್ರವಾರ- ಗಣರಾಜ್ಯೋತ್ಸವ
ದಿ. 08-03-2024: ಶುಕ್ರವಾರ – ಮಹಾಶಿವರಾತ್ರಿ
ದಿ. 29-03-2024: ಶುಕ್ರವಾರ -ಗುಡ್ ಫ್ರೈಡೇ
ದಿ. 09-04-2024: ಮಂಗಳವಾರ – ಯುಗಾದಿ ಹಬ್ಬ
ದಿ. 11-04-2024: ಗುರುವಾರ ಖುತುಬ್ ಎ ರಂಜಾನ್
ದಿ. 01-05-2024: ಬುಧವಾರ – ಕಾರ್ಮಿಕರ ದಿನಾಚರಣೆ
ದಿ. 10-05-2024: ಶುಕ್ರವಾರ – ಬಸವ ಜಯಂತಿ, ಅಕ್ಷಯ ತೃತೀಯ
ದಿ. 17-06-2024: ಸೋಮವಾರ – ಬಕ್ರೀದ್
ದಿ. 17-07-2024: ಬುಧವಾರ – ಮೋಹರಂ ಕಡೇ ದಿನ
ದಿ. 15-08-2024: ಗುರುವಾರ – ಸ್ವಾತಂತ್ರ್ಯ ದಿನಾಚರಣೆ
ದಿ. 07-09-2024: ಶನಿವಾರ – ವರಸಿದ್ಧಿ ವಿನಾಯಕ ವ್ರತ
ದಿ. 16-09-2024: ಸೋಮವಾರ – ಈದ್ ಮಿಲಾದ್
ದಿ. 02-10-2024: ಬುಧವಾರ – ಗಾಂಧಿ ಜಯಂತಿ ಮಹಾಲಯ ಅಮವಾಸ್ಯೆ
ದಿ. 11-10-2024: ಶುಕ್ರವಾರ – ಮಹಾನವಮಿ, ಆಯುಧಪೂಜೆ
ದಿ. 17-10-2024: ಗುರುವಾರ – ಮಹರ್ಷಿ ವಾಲ್ಮೀಕಿ ಜಯಂತಿ
ದಿ. 31-10-2024: ಗುರುವಾರ – ನರಕ ಚತುರ್ದಶಿ
ದಿ. 01-11-2024: ಶುಕ್ರವಾರ – ಕನ್ನಡ ರಾಜ್ಯೋತ್ಸವ
ದಿ. 02-11-2024: ಶನಿವಾರ – ಬಲಿಪಾಡ್ಯಮಿ, ದೀಪಾವಳಿ
ದಿ. 18-11-2024: ಸೋಮವಾರ – ಕನಕದಾಸ ಜಯಂತಿ
ದಿ. 25-12-2024: ಬುಧವಾರ – ಕ್ರಿಸ್‌ಮಸ್

ಸೂಚನೆ:

  1. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (12.10.2024) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
  2. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಕಚೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ, ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.
  3. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.
  4. 03.09.2024 (ಮಂಗಳವಾರ) ಕೈಲ್ ಮೂಹೂರ್ತ, 17.10.2024 (ಗುರುವಾರ) ತುಲಾ ಸಂಕ್ರಮಣ ಹಾಗೂ 14.12.2024 (ಶನಿವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.

ಇದನ್ನೂ ಓದಿ | BESCOM recruitment 2022 | ಬೆಸ್ಕಾಂನಲ್ಲಿ 400 ಮಂದಿಗೆ ಅಪ್ರೆಂಟಿಸ್‌ಷಿಪ್‌ ಮಾಡುವ ಅವಕಾಶ

2024ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಪರಿಮಿತ ರಜೆಗಳ ಪಟ್ಟಿ

ದಿ. 01-01-2024: ಸೋಮವಾರ- ನೂತನ ವರ್ಷಾರಂಭ
ದಿ. 25-03-2024: ಸೋಮವಾರ ಹೋಳಿಹಬ್ಬ
ದಿ. 30-03-2024: ಶನಿವಾರ – ಹೋಲಿ ಸಾಟರ್‌ಡೇ
ದಿ. 05-04-2024: ಶುಕ್ರವಾರ – ಜುಮತ್ ಉಲ್ ವಿದಾ
ದಿ. 06-04-2024: ಶನಿವಾರ-ಷಬ್ ಎ ಖಾದರ್
ದಿ. 17-04-2024 : ಬುಧವಾರ – ಶ್ರೀರಾಮನವಮಿ
ದಿ. 25-05-2024: ಗುರುವಾರ- ಬುದ್ಧ ಪೂರ್ಣಿಮ
ದಿ. 16-08-2024: ಶುಕ್ರವಾರ- ಶ್ರೀ ವರಮಹಾಲಕ್ಷ್ಮಿ ವ್ರತ
ದಿ. 19-08-2024 : ಸೋಮವಾರ – ಋಗ್ ಉಪಾಕರ್ಮ, ಯಜುರ್ ಉಪಾಕರ್ಮ
ದಿ. 20-08-2024: ಮಂಗಳವಾರ – ಬ್ರಹ್ಮಶ್ರೀ ನಾರಾಯಣಗುರು ಜಯಂತಿ
ದಿ. 26-08-2024 : ಸೋಮವಾರ-ಶ್ರೀಕೃಷ್ಣ ಜನ್ಮಾಷ್ಟಮಿ
ದಿ. 06-09-2024 : ಶುಕ್ರವಾರ- ಸ್ವರ್ಣಗೌರಿ ವ್ರತ
ದಿ. 17-09-2024 : ಮಂಗಳವಾರ-ವಿಶ್ವಕರ್ಮ ಜಯಂತಿ
ದಿ. 15-11-2024 : ಶುಕ್ರವಾರ- ಗುರುನಾನಕ್ ಜಯಂತಿ

ಸೂಚನೆ:

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version