Site icon Vistara News

Old Pension Scheme: ಹಿಮಾಚಲ ಪ್ರದೇಶದಲ್ಲಿ ಏಪ್ರಿಲ್ 1ರಿಂದ ಹಳೆ ಪಿಂಚಣಿ ವ್ಯವಸ್ಥೆ ಜಾರಿ

Old Pension Scheme will implement in himachal pradesh from April 1

ಶಿಮ್ಲಾ, ಹಿಮಾಚಲ ಪ್ರದೇಶ: ವಿಧಾನಸಭೆ ಚುನಾವಣೆ ವೇಳೆ ಭರವಸೆ ನೀಡಿದಂತೆ ಕಾಂಗ್ರೆಸ್ ಸರ್ಕಾರವು ಹಿಮಾಚಲ ಪ್ರದೇಶದಲ್ಲಿ ಏಪ್ರಿಲ್ 1ರಿಂದ ಹಳೆ ಪಿಂಚಣಿ ಯೋಜನೆ(OPS) ಜಾರಿ ಮಾಡಲಿದೆ. ಈ ಬಗ್ಗೆ ರಾಜ್ಯ ಸರ್ಕಾರವು ಅಧಿಕೃತ ಹೇಳಿಕೆಯನ್ನು ನೀಡಿ, ವಿಷಯವನ್ನು ಖಚಿತಪಡಿಸಿದೆ(Old Pension Scheme).

ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಹಳೆ ಪಿಂಚಣಿ ಯೋಜನೆ ಜಾರಿಯಿಂದ ರಾಜ್ಯದ ಖಜಾನೆಗೆ ಹೆಚ್ಚುವರಿಯಾಗಿ 1 ಸಾವಿರ ಕೋಟಿ ಹೊರೆಯಾಗಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Himachal Election Result | ಹಿಮಾಚಲದಲ್ಲಿ ಕಾಂಗ್ರೆಸ್‌ಗೆ ಗೆಲುವು, ಕಾರಣಗಳು ಹಲವು!

ಹಿಮಾಚಲ ಪ್ರದೇಶ ಲೋಕತಂತ್ರ ಪ್ರಹರಿ ಸಮ್ಮಾನ್ ಅಧಿನಿಯಮ್- 2021 ಮತ್ತು ಹಿಮಾಚಲ ಪ್ರದೇಶ ಲೋಕತಂತ್ರ ಪ್ರಹರಿ ಸಮ್ಮಾನ್ ನಿಯಮ್- 2022 ವಾಪಸ್ ಪಡೆಯಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಅಧಿನಿಯಮಗಳ ಪ್ರಕಾರ ತುರ್ತು ಪರಿಸ್ಥಿತಿಯ ಸಮಯದಲ್ಲಿ ಜೈಲಿನಲ್ಲಿದ್ದ ವ್ಯಕ್ತಿಗಳಿಗೆ ತಿಂಗಳಿಗೆ 11,000 ರೂ. ಮಾಸಿಕ ಪಿಂಚಣಿಯನ್ನು ನೀಡಲಾಗುತ್ತಿತ್ತು.

Exit mobile version