Site icon Vistara News

PNB Recruitment 2022 | 103 ಆಫೀಸರ್‌ ಮತ್ತು ಮ್ಯಾನೇಜರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

PNB Recruitment 2022

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ 23 ಫೈರ್‌ ಸೇಫ್ಟಿ ಆಫೀಸರ್‌ ಹಾಗೂ 80 ಸೆಕ್ಯುರಿಟಿ ಮ್ಯಾನೇಜರ್‌ ಸೇರಿ ಒಟ್ಟು ೧೦೩ ಹುದ್ದೆಗಳ ನೇಮಕಕ್ಕೆ (PNB Recruitment 2022) ಅರ್ಜಿ ಆಹ್ವಾನಿಸಿದೆ.

ಆಸಕ್ತರು ಲಿಖಿತ ಅರ್ಜಿಯನ್ನು ಸ್ಪೀಡ್‌ ಪೋಸ್ಟ್‌ ಅಥವಾ ರಿಜಿಸ್ಟರ್‌ ಪೋಸ್ಟ್‌ ಮೂಲಕ ಮಾತ್ರ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್‌ 30 ಕೊನೆಯ ದಿನವಾಗಿರುತ್ತದೆ.

23 ಫೈರ್‌ ಸೇಫ್ಟಿ ಆಫೀಸರ್‌ ಹುದ್ದೆಗಳ ಪೈಕಿ 3 ಹುದ್ದೆ ಎಸ್‌ಸಿ ಅಭ್ಯರ್ಥಿಗಳಿಗೆ, 1 ಹುದ್ದೆ ಎಸ್‌ಟಿ ಅಭ್ಯರ್ಥಿಗಳಿಗೆ, 6 ಹುದ್ದೆ ಒಬಿಸಿ ಅಭ್ಯರ್ಥಿಗಳಿಗೆ, 2 ಹುದ್ದೆ ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ ಹಾಗೂ 11 ಹುದ್ದೆಯನ್ನು ಸಾಮಾನ್ಯ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.
80 ಸೆಕ್ಯುರಿಟಿ ಮ್ಯಾನೇಜರ್‌ ಹುದ್ದೆಗಳ ಪೈಕಿ ಎಸ್‌ಸಿ ಅಭ್ಯರ್ಥಿಗಳಿಗೆ 12, ಎಸ್‌ಟಿ ಅಭ್ಯರ್ಥಿಗಳಿಗೆ 6, ಒಬಿಸಿ ಅಭ್ಯರ್ಥಿಗಳಿಗೆ 21, ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ 8 ಹಾಗೂ ಸಾಮಾನ್ಯ ಅಭ್ಯರ್ಥಿಗಳಿಗೆ 33 ಹುದ್ದೆಗಳನ್ನು ಮೀಸಲಿಡಲಾಗಿದೆ.

ವಿದ್ಯಾರ್ಹತೆ ಏನು?
ಫೈರ್‌ ಸೇಫ್ಟಿ ಆಫೀಸರ್‌ ಹುದ್ದೆ: ಫೈರ್‌ ವಿಷಯದಲ್ಲಿ ಬಿಇ ಅಥವಾ ಫೈರ್‌ ಟೆಕ್ನಾಲಜಿ, ಫೈರ್‌ ಎಂಜಿನಿಯರಿಂಗ್‌ ವಿಷಯದಲ್ಲಿ ನಾಲ್ಕು ವರ್ಷಗಳ ಪದವಿ ಪಡೆದಿರಬೇಕು. ಪೈರ್‌ ಸೇಫ್ಟಿಗೆ ಸಂಬಂಧಿಸಿದ ವಿಷಯದಲ್ಲಿ ಪದವಿ ಪಡೆದವರು ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಇದರ ಜತೆಗೆ ಅನುಭವ ಹೊಂದಿರುವುದೂ ಅವಶ್ಯ.
ಸೆಕ್ಯುರಿಟಿ ಮ್ಯಾನೇಜರ್‌: ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಆದರೆ ಸೇನೆಯಲ್ಲಿ ಅಥವಾ ಪೊಲೀಸ್‌ ಇಲಾಖೆಯ ಗೆಜೆಟೆಡ್‌ ಆಫೀಸರ್‌ ಹುದ್ದೆಯಲ್ಲಿ ಐದು ವರ್ಷ ಕಾರ್ಯ ನಿರ್ವಹಿಸಿದ ಅನುಭವ ಹೊಂದಿರಬೇಕಾದದು ಅವಶ್ಯಕ.

ವಯೋಮಿತಿ ಎಷ್ಟು ನಿಗದಿಪಡಿಸಲಾಗಿದೆ?
ಫೈರ್‌ ಸೇಫ್ಟಿ ಆಫೀಸರ್‌ ಹುದ್ದೆಗೆ ಮತ್ತು ಸೆಕ್ಯುರಿಟಿ ಮ್ಯಾನೇಜರ್‌ ಹುದ್ದೆಗೆ ೨೧ ರಿಂದ ೩೫ ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ೫ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ೩ ವರ್ಷ ಸಡಿಲಿಕೆ ನೀಡಲಾಗಿರುತ್ತದೆ.

ಅರ್ಜಿ ಶುಲ್ಕ ಎಷ್ಟು?
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 59 ರೂ. ಹಾಗೂ ಇತರ ಅಭ್ಯರ್ಥಿಗಳು 1003 ರೂ ಅರ್ಜಿ ಶುಲ್ಕ ಪಾವತಿಸಬೇಕಾ ಗಿರುತ್ತದೆ. ಅಧಿಸೂಚನೆಯಲ್ಲಿ ಬ್ಯಾಂಕ್‌ನ ಅಕೌಂಟ್‌ ನಂಬರ್‌ನ ಮಾಹಿತಿ ನೀಡಲಾಗಿದ್ದು, ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಬಹುದಾಗಿರುತ್ತದೆ.

ನೇಮಕ ಹೇಗೆ?
ಸಲ್ಲಿಸಲಾದ ಅರ್ಜಿಯನ್ನು ಬ್ಯಾಂಕ್‌ನ ಮಾನವ ಸಂಪನ್ಮೂಲ ವಿಭಾಗವು ಪರಿಶೀಲಿಸಿ, ಅರ್ಹತೆಗಳ ಆಧಾರದ ಮೇಲೆ ಸಂದರ್ಶನಕ್ಕೆ ಕರೆದು, ಅರ್ಹ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಅನಿವಾರ್ಯವಾಗಿದ್ದಲ್ಲಿ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಿ, ಅರ್ಹರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ.

ವೇತನ ಶ್ರೇಣಿ ಎಷ್ಟು?
ಫೈರ್‌ ಸೇಫ್ಟಿ ಆಫೀಸರ್‌ ಹುದ್ದೆ: ರೂ. 36,000-1,490/7-46,430-1,740/2- 49,910-1,990/7-63,840
ಸೆಕ್ಯುರಿಟಿ ಮ್ಯಾನೇಜರ್‌ ಹುದ್ದೆ: ರೂ. 48,170-1,740/1-49,910-1,990/10-69,810

ಅರ್ಜಿ ಸಲ್ಲಿಸಬೇಕಾದ ವಿಳಾಸ;
CHIEF MANAGER (RECRUITMENT SECTION),
HRD DIVISION, PUNJAB NATIONAL BANK,
CORPORATE OFFICE, PLOT NO 4, SECTOR 10,
DWARKA, NEW DELHI -110075

ಹೆಚ್ಚಿನ ಮಾಹಿತಿಗೆ ವೆಬ್‌ ವಿಳಾಸ: https://www.pnbindia.in

ಇದನ್ನೂ ಓದಿ| IBPS PO Recruitment 2022 | ಬ್ಯಾಂಕ್‌ಗಳ 6,432 ಪ್ರೊಬೆಷನರಿ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

Exit mobile version