Site icon Vistara News

Prelims Result: ಎಸ್‌ಬಿಐ ನೇಮಕ ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟ; ವೆಬ್‌ಸೈಟ್‌ ಓಪನ್‌ ಆಗ್ತಿಲ್ಲ!

sbi new

sbi new

ನವದೆಹಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಪ್ರೊಬೇಷನರಿ ಆಫೀಸರ್ಸ್ (PO) ನೇಮಕಾತಿ 2023ರ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ (SBI PO Prelims Result 2023) ಪ್ರಕಟವಾಗಿದೆ. ನವೆಂಬರ್‌ನಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (Institute of Banking Personnel Selection-IBPS) ಈ ಪರೀಕ್ಷೆ ಆಯೋಜಿಸಿತ್ತು.

ವೆಬ್‌ಸೈಟ್‌ನಲ್ಲಿ ಸಮಸ್ಯೆ

ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಎಸ್‌ಬಿಐಯ ಅಧಿಕೃತ ವೆಬ್‌ಸೈಟ್ sbi.co.in.ನಲ್ಲಿ ಪರಿಶೀಲಿಸಬಹುದು. ಆದರೆ ಸದ್ಯ ವೆಬ್‌ಸೈಟ್‌ನಲ್ಲಿ ಸಮಸ್ಯೆ ಎದುರಾಗಿದ್ದು, ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದೆ.

ಪ್ರಿಲಿಮ್ಸ್‌ನಲ್ಲಿ ತೇರ್ಗಡೆಯಾದವರು ಮೇನ್ಸ್ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಈ ಪರೀಕ್ಷೆಯನ್ನು ಡಿಸೆಂಬರ್ 5 ರಂದು ನಿಗದಿಪಡಿಸಲಾಗಿದೆ. ಮುಖ್ಯ ಪರೀಕ್ಷೆಯ ಕಾಲ್‌ ಲೆಟರ್‌ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕತ ಮೂಲಗಳು ತಿಳಿಸಿವೆ. ಮೇನ್ಸ್ ಫಲಿತಾಂಶಗಳು ಡಿಸೆಂಬರ್ ಅಥವಾ ಜನವರಿಯಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆ.

ಮುಖ್ಯ ಪರೀಕ್ಷೆ (Mains examination) ಎರಡು ವಿಭಾಗಗಳನ್ನು ಒಳಗೊಂಡಿದೆ. ಆಬ್ಜಕ್ಟಿವ್‌ ಪರೀಕ್ಷೆ ಮತ್ತು ವಿವರಣಾತ್ಮಕ ಪರೀಕ್ಷೆ. ಈ ಪೈಕಿ ಆಬ್ಜಕ್ಟಿವ್‌ ಪರೀಕ್ಷೆ 200 ಅಂಕ ಮತ್ತು ವಿವರಣಾತ್ಮಕ ಪರೀಕ್ಷೆಗೆ 50 ಅಂಕಗಳಿವೆ. ಅಬ್ಜಕ್ಟಿವ್‌ ಟೆಸ್ಟ್‌ ರೀಸನಿಂಗ್‌ & ಕಂಪ್ಯೂಟರ್‌ ಆಪ್ಟಿಟ್ಯೂಡ್‌, ಡೇಟಾ ಅನಾಲಿಸಿಸ್‌, ಇಂಟರ್‌ಪ್ರೆಟೇಶನ್‌, ಜನರಲ್‌/ ಎಕಾನಮಿ/ ಬ್ಯಾಂಕಿಂಗ್‌ ಮಾಹಿತಿ ಮತ್ತು ಇಂಗ್ಲಿಷ್‌ ಭಾಷೆಯ ಪ್ರಶ್ನೆಯನ್ನೊಳಗೊಂಡಿರುತ್ತದೆ. ವಿವರಣಾತ್ಮಕ ಪ್ರಶ್ನೆಯು ಇಂಗ್ಲಿಷ್‌ನಲ್ಲಿ ಪತ್ರ ಬರವಣಿಗೆ & ಪ್ರಬಂಧ ರಚನೆಯನ್ನು ಹೊಂದಿರುತ್ತದೆ.

ಮೂರನೇ ಹಂತದಲ್ಲಿ ಸೈಕೋಮೆಟ್ರಿಕ್ ಪರೀಕ್ಷೆ ಆಯೋಜಿಸಲಾಗುತ್ತದೆ. ಈ ಹಂತದ ಪರೀಕ್ಷೆ 2024ರ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆ ಇದೆ. ಸಂದರ್ಶನಗಳು ಮತ್ತು ಗುಂಪು ಚರ್ಚೆಯ ಹಂತಗಳೂ ಜನವರಿ-ಫೆಬ್ರವರಿಯಲ್ಲಿ ನಡೆಯಲಿವೆ. SBI PO 2023ರ ಅಂತಿಮ ಫಲಿತಾಂಶ 2024ರ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ.

ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ವೀಕ್ಷಿಸುವ ವಿಧಾನ

ಇದನ್ನೂ ಓದಿ: Job Alert: ಎಸ್‌ಬಿಐಯಲ್ಲಿದೆ ಭರ್ಜರಿ 8,283 ಉದ್ಯೋಗಾವಕಾಶ; ಇಂದಿನಿಂದ ಅರ್ಜಿ ಸಲ್ಲಿಸಬಹುದು

2,000 ಪ್ರೊಬೆಷನರಿ ಅಧಿಕಾರಿಗಳ ನೇಮಕದ ಗುರಿ

SBI PO 2023 ನೇಮಕಾತಿ ಪ್ರಕ್ರಿಯೆಯ ಮೂಲಕ ಬ್ಯಾಂಕ್‌ನ ಖಾಲಿ ಇರುವ 2,000 ಪ್ರೊಬೇಷನರಿ ಅಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶ ಹೊಂದಲಾಗಿದೆ. ಪ್ರೊಬೇಷನರಿ ಆಫೀಸರ್(ಪಿಒ) ಹುದ್ದೆಗಳಿಗೆ ನೋಂದಣಿ ಪ್ರಕ್ರಿಯೆ ಸೆಪ್ಟೆಂಬರ್ 7ರಂದು ಪ್ರಾರಂಭವಾಗಿ ಸೆಪ್ಟೆಂಬರ್ 27ರಂದು ಕೊನೆಗೊಂಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version