Site icon Vistara News

Railway Recruitment : ಕರ್ನಾಟಕ ರೈಲ್ವೆಯಲ್ಲಿ ಅಪ್ರೆಂಟಿಸ್‌‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಒಂದೇ ದಿನ ಬಾಕಿ

Indian Railway

ಬೆಂಗಳೂರು: ಸೌತ್‌ ವೆಸ್ಟರ್ನ್‌ ರೈಲ್ವೆ ಕರ್ನಾಟಕ ಡಿವಿಷನ್‌ನಲ್ಲಿ ಖಾಲಿ ಇವರು 904 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಇತ್ತೀಚೆಗೆ ಅಧಿಸೂಚನೆ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿಗೆ ಆಗಸ್ಟ್​ 2 ಕೊನೇ ದಿನ. ತಕ್ಷಣವೇ ಅರ್ಜಿ ಹಾಕಿ ಕರ್ನಾಟಕದಲ್ಲೇ ಕೆಲಸ ಮಾಡುವ ಅವಕಾಶವನ್ನು ಗಿಟ್ಟಿಸಿಕೊಳ್ಳಿ. ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸ್ವೀಕಾರ ಮಾಡುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಯ್ಕೆಯಾದವರಿಗೆ ನಿರ್ದಿಷ್ಟ ಅವಧಿಯವರೆಗೆ ತರಬೇತುದಾರರಾಗಿ ಉದ್ಯೋಗ ಸಿಗುತ್ತದೆ ಹಾಗೂ ಮಾಸಿಕ ಸ್ಟೈಫಂಡ್ ದೊರೆಯುತ್ತದೆ.

ಯಾವುದೆಲ್ಲ ಹುದ್ದೆಗಳಿವೆ?

ಕರ್ನಾಟಕ ಪ್ರದೇಶದ ದಕ್ಷಿಣ ಪಶ್ಚಿಮ ರೈಲ್ವೆಯ ವಿವಿಧ ಡಿವಿಷನ್‌ಗಳಾದ ಹುಬ್ಬಳ್ಳಿ ರೈಲ್ವೆ ಡಿವಿಷನ್, ಹುಬ್ಬಳ್ಳಿ ಕ್ಯಾರಿಯೇಜ್ ರಿಪೇರಿ ವರ್ಕ್‌ಶಾಪ್‌, ಬೆಂಗಳೂರು ಡಿವಿಷನ್, ಮೈಸೂರು ಡಿವಿಷನ್, ಮೈಸೂರು ಸೆಂಟ್ರಲ್‌ ವರ್ಕ್‌ಶಾಪ್‌ ಗಳಲ್ಲಿ ಈ ಅಪ್ರೆಂಟಿಸ್‌ಗಳನ್ನು ನೇಮಕ ಮಾಡಲಾಗುತ್ತದೆ. ಫಿಟ್ಟರ್, ಆ್ಯಂಡ್​ ಏರ್‌ ಕಂಡೀಷನರ್ ಮೆಕ್ಯಾನಿಕ್, ವೆಲ್ಡರ್, ಎಲೆಕ್ಟ್ರೀಷಿಯನ್, ರೆಫ್ರಿಜರೇಷನ್, ಪ್ರೋಗ್ರಾಮಿಂಗ್ ಆ್ಯಂಡ್​ ಸಿಸ್ಟಮ್ ಅಡ್ಮಿನಿಸ್ಟ್ರೇಷನ್‌ ಅಸಿಸ್ಟಂಟ್ ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ. ಡಿವಿಷನ್‌ವಾರು ಹುದ್ದೆಗಳ ವಿವರ ಕೆಳಗಿನಂತಿದೆ.

ಅಪ್ರೆಂಟಿಸ್ ಹುದ್ದೆಗಳ ಇಷ್ಟಿವೆ

ಎಷ್ಟು ಕಲಿತಿರಬೇಕು?
ಕನಿಷ್ಠ 10ನೇ ತರಗತಿ ಕಲಿತಿರಬೇಕು ಜತೆಗೆ ಐಟಿಐ ಕೋರ್ಸ್​ ಮಾಡಿರಬೇಕು.

ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವಾಗ?

02-08-2023 ರ ರಾತ್ರಿ 12-00 ಗಂಟೆವರೆಗೆ ಅರ್ಜಿ ಸಲ್ಲಿಸಬಹುದು

ಯಾವ ರೀತಿ ಆಯ್ಕೆ ಮಾಡುತ್ತಾರೆ?

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಶೇಕಡಾ.50 ಅಂಕ, ಐಟಿಐ ವಿದ್ಯಾರ್ಹತೆಯ ಶೇಕಡಾ.50 ಅಂಕ ಪರಿಗಣಿಸಿ ಅರ್ಹತೆಯ ಪಟ್ಟಿಯನ್ನು ತಯಾರಿಸುತ್ತಾರೆ.

ಇದನ್ನೂ ಓದಿ : MGNREGA Job Cards: ಪ್ರಸಕ್ತ ವರ್ಷದಲ್ಲಿ 5 ಕೋಟಿಗೂ ಅಧಿಕ ನರೇಗಾ ಜಾಬ್ ಕಾರ್ಡ್ ಮಾಡಿದ ಕೇಂದ್ರ ಸರ್ಕಾರ!

ವಯಸ್ಸಿನ ಮಿತಿ ಇದೆಯೇ?

ಅರ್ಜಿ ಸಲ್ಲಿಸುವವರಿಗೆ ಕನಿಷ್ಠ 15 ವರ್ಷ ಆಗಿರಬೇಕು. 24 ವರ್ಷ ವಯಸ್ಸು ಮೀರಿರಬಾರದು.

ಅರ್ಜಿ ಸಲ್ಲಿಸುವುದು ಹೇಗೆ?

ಸೌತ್‌ ವೆಸ್ಟರ್ನ್‌ ರೈಲ್ವೆಯ ವೆಬ್‌ಸೈಟ್‌ https://jobs.rrchubli.in/act-2223/ ಗೆ ಭೇಟಿ ನೀಡಿ ಅರ್ಜಿ ಭರ್ತಿ ಮಾಡಬಹುದು.

ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಅಪ್ರೆಂಟಿಸ್ ಹುದ್ದೆಯ ಅವಧಿ : 1 ವರ್ಷ.

ಅರ್ಜಿಯ ಶುಲ್ಕ ಎಷ್ಟು? 100 ರೂಪಾಯಿ

ಉದ್ಯೋಗಳ ಕುರಿತ ಇನ್ನಷ್ಟು ಮಾಹಿತಿಗೆ ಈ ಲಿಂಗ್​ ಕ್ಲಿಕ್ ಮಾಡಿ. https://vistaranews.com/category/job

Exit mobile version