Site icon Vistara News

RBI Assistant Recruitment: ಆರ್‌ಬಿಐನಲ್ಲಿದೆ 450 ಹುದ್ದೆ; ಈ ಪದವಿ ಪಡೆದಿದ್ದರೆ ಇಂದೇ ಅರ್ಜಿ ಸಲ್ಲಿಸಿ

rbi 2023

rbi 2023

ನವದೆಹಲಿ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (Reserve Bank of India) ಖಾಲಿ ಇರುವ ಸುಮಾರು 450 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಯಾವುದೇ ವಿಷಯದಲ್ಲಿ ಶೇ. 50ರಷ್ಟು ಅಂಕ ಗಳಿಸಿ ಪದವಿ ತೇರ್ಗಡೆಯಾದವರು ಈ ಆರ್‌ಬಿಐ ಅಸಿಸ್ಟೆಂಟ್‌ ಹುದ್ದೆಗಳಿಗೆ (RBI Assistant Recruitment) ಅರ್ಜಿ ಸಲ್ಲಿಸಲು ಅರ್ಹರು. ಅಲ್ಲದೆ ಮಾಜಿ ಸೈನಿಕರಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ಸಶಸ್ತ್ರ ಪಡೆಗಳ ಮೆಟ್ರಿಕ್ಯುಲೇಷನ್ ಉತ್ತೀರ್ಣರಾಗಿರುವವರು ಮತ್ತು ಕನಿಷ್ಠ 15 ವರ್ಷಗಳ ರಕ್ಷಣಾ ಸೇವೆಯನ್ನು ಸಲ್ಲಿಸಿದವರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಯಾ ನೇಮಕಾತಿ ಕಚೇರಿಯ ಪ್ರಾದೇಶಿಕ ಭಾಷೆಯಲ್ಲಿ ಪ್ರವೀಣರಾಗಿರಬೇಕಾಗಿರುವುದು ಕಡ್ಡಾಯ. ಅಕ್ಟೋಬರ್‌ 4ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

ವಯೋಮಿತಿ ಎಷ್ಟು?

ಆರ್‌ಬಿಐ ಅಸಿಸ್ಟೆಂಟ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ ಇದೆ. ಮಾತ್ರವಲ್ಲ ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ ಗರಿಷ್ಠ 15 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ಆಯ್ಕೆ ವಿಧಾನ

ಬಹು ವಿಧಗಳ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಮೊದಲಿಗೆ ಅಭ್ಯರ್ಥಿಗಳ ಪ್ರಾಥಮಿಕ ಜ್ಞಾನ ಪರೀಕ್ಷಿಸುವ ಪೂರ್ವಭಾವಿ ಪರೀಕ್ಷೆ ನಡೆಯಲಿದೆ. ಬಳಿಕ ಮುಖ್ಯ ಪರೀಕ್ಷೆ ಆಯೋಜಿಸಲಾಗುವುದು. ಅದಾದ ನಂತರ ಮುಖ್ಯ ಪರೀಕ್ಷೆ, ಅಂತಿಮವಾಗಿ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LPT) ನಡೆಯಲಿದೆ. ಪೂರ್ವಭಾವಿ ಪರೀಕ್ಷೆ ಆನ್‌ಲೈನ್‌ ಮೂಲಕ ಅಕ್ಟೋಬರ್‌ 21 ಮತ್ತು 23ರಂದು ನಡೆದರೆ, ಮುಖ್ಯ ಪರೀಕ್ಷೆ ಡಿಸೆಂಬರ್‌ 2 ನಡೆಯುವ ಸಾಧ್ಯತೆ ಇದೆ.

ವೇತನ ಶ್ರೇಣಿ

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 20,700-55,700 ರೂ. ವೇತನ ಪಾವತಿಸಲಾಗುವುದು. ಜತೆಗೆ ಹೌಸ್‌ ರೆಂಟ್‌ ಅಲೊವೆನ್ಸ್ (HRA) ಕೂಡ ಸಿಗಲಿದೆ. ವೈದ್ಯಕೀಯ ನೆರವು, ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲವೂ ಲಭಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಅರ್ಜಿ ಶುಲ್ಕ

ಜನರಲ್‌, ಒಬಿಸಿ, ಇಡಬ್ಲ್ಯುಎಸ್‌ ಅಭ್ಯರ್ಥಿಗಳು 450+ 18% ಜಿಎಸ್‌ಟಿಯನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಪಿಡ್ಲ್ಯುಬಿಡಿ, ಇಎಕ್ಸ್‌ಎಸ್‌ ಅಭ್ಯರ್ಥಿಗಳು 50+ 18% ಜಿಎಸ್‌ಟಿಯನ್ನು ಪಾವತಿಸಬೇಕು.

ಇದನ್ನೂ ಓದಿ: IT Job: ಆಸ್ಟ್ರೇಲಿಯಾ ಮೂಲದ ಕಂಪನಿಯಲ್ಲಿ 82 ಲಕ್ಷ ವೇತನ ಪ್ಯಾಕೇಜ್‌ ಉದ್ಯೋಗ ಪಡೆದ ‘ಐಐಐಟಿ’ ವಿದ್ಯಾರ್ಥಿನಿ

ಅರ್ಜಿ ಸಲ್ಲಿಸುವ ವಿಧಾನ

Exit mobile version