Site icon Vistara News

RDWSD Recruitment 2023: ಗ್ರಾಮೀಣ ಕುಡಿಯುವ ನೀರು & ನೈರ್ಮಲ್ಯ ಇಲಾಖೆಯ 155 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

water tap

water tap

ಬೆಂಗಳೂರು: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (Rural Drinking Water and Sanitation Department-RDWSD Recruitment 2023) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ರಾಜ್ಯಾದ್ಯಂತ 155 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನವೆಂಬರ್‌ 4.

ಹುದ್ದೆಗಳ ವಿವರ

ಆರ್ಥಿಕ ಸಮಾಲೋಚಕರು-31, ಸಾಮಾಜಿಕ ಅಭಿವೃದ್ಧಿ ಸಮಾಲೋಚಕರು-31, ಪರಿಸರ ಸಮಾಲೋಚಕರು-31, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಮಾಲೋಚಕರು-31, ಪ್ರೊಕ್ಯೂರ್‌ಮೆಂಟ್‌ ಸಮಾಲೋಚಕರು-31 ಹುದ್ದೆಗಳಿವೆ. ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯಲಿದೆ. ರಾಜ್ಯದ 31 ಜಿಲ್ಲೆಗಳಲ್ಲೂ ನೇಮಕಾತಿ ಇರಲಿದೆ.

ವಿದ್ಯಾರ್ಹತೆ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊರಡಿಸಿದ ಅಧಿಸೂಚನೆ ಪ್ರಕಾರ ಅಂಗೀಕೃತ ಶೈಕ್ಷಣಿಕ ಮಂಡಳಿ ಮತ್ತು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ/ ಎಂಬಿಎ/ ಎಂ.ಕಾಂ/ ಎಂಎಸ್‌ಡಬ್ಲ್ಯು/ ಎಂಎ/ ಬಿಇ/ ಬಿ.ಟೆಕ್‌/ ಎಂ.ಟೆಕ್‌/ ಬಿಸಿಎ/ ಬಿಇ (ಸಿಎಸ್‌/ ಐಟಿ) ಪಡೆದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ ಮತ್ತು ಆಯ್ಕೆ ಪ್ರಕ್ರಿಯೆ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊರಡಿಸಿದ ಅಧಿಸೂಚನೆ ಪ್ರಕಾರ ಗರಿಷ್ಠ ವಯೋಮಿತಿ 45 ವರ್ಷ. ಶಾರ್ಟ್‌ಲಿಸ್ಟ್‌, ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ ಮೂಲಕ ನೇಮಕಾತಿ ನಡೆಯಲಿದೆ.

ವೇತನ ಮತ್ತು ಅರ್ಜಿ ಶುಲ್ಕ

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 50,000 ರೂ.-75,000 ರೂ. ವೇತನ ಸಿಗಲಿದೆ. ಯಾವುದೇ ಅರ್ಜಿ ಶುಲ್ಕವಿಲ್ಲ.

ಅರ್ಜಿ ಸಲ್ಲಿಸುವ ವಿಧಾನ

ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://swachhamevajayate.org/ ಪರಿಶೀಲಿಸಿ.

Exit mobile version