Site icon Vistara News

SBI PO Recruitment 2023: 2000 ಪ್ರೊಬೇಷನರಿ ಹುದ್ದೆ ನೇಮಕಕ್ಕೆ ಎಸ್‌ಬಿಐ ಅರ್ಜಿ ಆಹ್ವಾನ, ಸೆ.27 ಅಪ್ಲೈಗೆ ಕೊನೆ ದಿನ

SBI

SBI hikes FD interest rates by up to 50 bps; check latest fixed deposit rates here

ನವದೆಹಲಿ: ಸ್ಟೇಟ್ ಆಫ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಖಾಲಿ ಇರುವ 2000 ಪ್ರೊಬೇಷನರಿ ಹುದ್ದೆಗಳಗ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ(SBI PO Recruitment 2023). ಅರ್ಜಿ ಸಲ್ಲಿಕೆ ಸೆಪ್ಟೆಂಬರ್ 7ರಿಂದ ಆರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನವಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ (online Application) ಸಲ್ಲಿಸಬಹುದಾಗಿದೆ. 2023ರ ನವೆಂಬರ್ ತಿಂಗಳಲ್ಲಿ ಪ್ರಿಲಿಮಿನರಿ ಎಕ್ಸಾಮ್ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದ ಜಾಲತಾಣಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಅಪ್ಲೈ ಮಾಡುವುದು ಹೇಗೆ?

sbi.co.in ತೆರೆಯಿರಿ. ಹೋಮ್‌ಪುಟದಲ್ಲಿರುವ PO recruitment ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಕ್ರೆಡೆನ್ಷಿಯಲ್‌ ಬಳಸಿಕೊಂಡು ಲಾಗ್ ಇನ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡುವುದನ್ನು ಮುಂದುವರಿಸಿ. ಅಲ್ಲಿ ಕೇಳಲಾಗುವ ಎಲ್ಲ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಆನ್‌ಲೈನ್ ಮೂಲಕ ಶುಲ್ಕವನ್ನು ಪಾವತಿಸಿ. ಬಳಿಕ ಸ್ವೀಕೃತಿ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಮುಂದಿನ ಬಳಕೆಗಾಗಿ ಪ್ರಿಂಟೌಟ್ ತೆಗೆದುಕೊಳ್ಳಿ.

ಎಸ್‌ಬಿಐ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

ಶೈಕ್ಷಣಿಕ ಅಹರ್ತೆ ಏನು?

ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಮಾನ ವಿದ್ಯಾರ್ಹತೆ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ತಮ್ಮ ಪದವಿಯ ಅಂತಿಮ ವರ್ಷ/ಸೆಮಿಸ್ಟರ್‌ನಲ್ಲಿರುವವರು ಸಂದರ್ಶನಕ್ಕೆ ಹಾಜರಾಗಬೇಕಾದರೆ, ಅವರು ಡಿಸೆಂಬರ್ 31, 2023 ರಂದು ಅಥವಾ ಅದಕ್ಕೂ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುರಾವೆಗಳನ್ನು ಸಲ್ಲಿಸಬೇಕು ಎಂಬ ಷರತ್ತಿಗೆ ತಾತ್ಕಾಲಿಕವಾಗಿ ಅನ್ವಯವಾಗುತ್ತದೆ.

ವಯೋಮಿತಿ ಇದೆಯಾ?

ಅರ್ಹ ಅಭ್ಯರ್ಥಿಗಳಿಗೆ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. 2023, ಏಪ್ರಿಲ್ 1ಕ್ಕೆ ಅನ್ವಯವಾಗುವಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯಸ್ಸು 21ರಿಂದ 30ರೊಳಗಿರಬೇಕು.

ಅರ್ಜಿ ಶುಲ್ಕ ಎಷ್ಟು?

ವಿವಿಧ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದವರು ಮತ್ತು ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 750 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅದೇ ರೀತಿ, ಒಮ್ಮೆ ಪಾವತಿಸಿದ ಅರ್ಜಿ ಶುಲ್ಕವನ್ನು ಮರುಪಾವತಿಸಲಾಗುವುದಿಲ್ಲ ಅಥವಾ ಬೇರೆ ಯಾವುದೇ ಪರೀಕ್ಷೆ ಅಥವಾ ಆಯ್ಕೆಗಾಗಿ ಅದನ್ನು ಕಾಯ್ದಿರಿಸಲಾಗುವುದಿಲ್ಲ.

Exit mobile version