Site icon Vistara News

SBI Recruitment 2022 | ಸ್ಪೆಷಲಿಸ್ಟ್‌ ಕೇಡರ್‌ನ 714 ಆಫೀಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

SBI PO Recruitment 2022

ದೇಶದ ಅತಿದೊಡ್ಡ ರಾಷ್ಟ್ರೀಕೃತ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ) ಬ್ಯಾಂಕಿನ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸ್ಪೆಷಲಿಸ್ಟ್‌ ಕೇಡರ್‌ನ ಆಫೀಸರ್‌ ಹುದ್ದೆಗಳ ನೇಮಕಕ್ಕೆ (SBI Recruitment 2022) ಅರ್ಜಿ ಆಹ್ವಾನಿಸಿದೆ.

ಒಟ್ಟು 714 ಹುದ್ದೆಗಳಿಗೆ ನೇಮಕ ನಡೆಯಲಿದ್ದು, ಈ ಸಂಬಂಧ ಮೂರು ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 20 ಕೊನೆಯ ದಿನವಾಗಿರುತ್ತದೆ.

ಐಟಿ ವಿಭಾಗದ ಡಾಟಾ ಸೈಂಟಿಸ್ಟ್‌ ಸ್ಪೆಷಲಿಸ್ಟ್‌ ಮ್ಯಾನೇಜರ್‌ -11, ಡಾಟಾ ಸೈಂಟಿಸ್ಟ್‌ ಸ್ಪೆಷಲಿಸ್ಟ್‌ ಡೆಪ್ಯುಟಿ ಮ್ಯಾನೇಜ್‌-5, ಸಿಸ್ಟಮ್‌ ಆಫೀಸರ್‌ -3 ಹುದ್ದೆಗಳಿಗೆ ಸಂಬಂಧಿಸಿದಂತೆ ಒಂದು ಅಧಿಸೂಚನೆ ಪ್ರಕಟಿಸಲಾಗಿದ್ದು, ಇದು ರೆಗ್ಯುಲರ್‌ ಬೇಸ್‌ನ ಹುದ್ದೆಗಳಾಗಿವೆ.

ಇನ್ನು ಐಟಿ ವಿಭಾಗದ ನೆಟ್‌ ಡೆವಲಪರ್‌, ಜಾವಾ ಡೆವಲಪರ್‌ ಮತ್ತಿತರ ವಿಭಾಗದ ಡೆಪ್ಯುಟಿ ಮ್ಯಾನೇಜರ್‌ ಮತ್ತು ಅಸಿಸ್ಟೆಂಟ್‌ ಮ್ಯಾನೇಜರ್‌ನ 25 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಇವು ಕೂಡ ರೆಗ್ಯುಲರ್‌ ಹುದ್ದೆಗಳಾಗಿವೆ. ಇದೇ ಅಧಿಸೂಚನೆಯಲ್ಲಿ ಸೀನಿಯರ್‌ ಸ್ಪೆಷಲ್‌ ಎಕ್ಸಿಕ್ಯುಟಿವ್‌ 5 ಹುದ್ದೆಗಳಿಗೆ ಕೂಡ ಅರ್ಜಿ ಆಹ್ವಾನಿಸಲಾಗಿದ್ದು, ಇವು ಗುತ್ತಿಗೆಯಾಧಾರಿತ ಹುದ್ದೆಗಳಾಗಿವೆ.

ಇನ್ನು ಮೂರನೇ ಅಧಿಸೂಚನೆಯಲ್ಲಿ ವೆಲ್ತ್‌ ಮ್ಯಾನೇಜ್‌ಮೆಂಟ್‌ ಬಿಸ್ನೆಸ್‌ ವಿಭಾಗದ ರಿಲೇಷನ್‌ ಶಿಪ್‌ ಮ್ಯಾನೇಜರ್‌ 335 ಹುದ್ದೆ, ಸೀನಿಯರ್‌ ರಿಲೇಷನ್‌ ಶಿಪ್‌ ಮ್ಯಾನೇಜರ್‌ 147 ಹುದ್ದೆ, ಇನ್‌ವೆಸ್ಟ್‌ ಮೆಂಟ್‌ ಆಫೀಸರ್‌ 52 ಹುದ್ದೆ, ಕಸ್ಟಮರ್‌ ರಿಲೇಷನ್‌ ಶಿಪ್‌ ಎಕ್ಸಿಕ್ಯುಟಿವ್‌ 75 ಸೇರಿದಂತೆ 10 ವಿಭಾಗದ ಒಟ್ಟು 665 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಎಲ್ಲ ಹುದ್ದೆಗಳೂ ಗುತ್ತಿಗೆಯಾಧಾರಿತ ಹುದ್ದೆಗಳಾಗಿವೆ.

ಈ ಎಲ್ಲ ಆಫೀಸರ್‌ ಹುದ್ದೆಗಳಿಗೆ ನಿರ್ಧಿಷ್ಟ ವಿದ್ಯಾರ್ಹತೆ ಮತ್ತು ಅನುಭವ ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೋಡಿಕೊಂಡು, ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವಾಗಲೇ ವಿದ್ಯಾರ್ಹತೆ ಮತ್ತು ಅನುಭವಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ಆಪ್‌ಲೋಡ್‌ ಮಾಡಬೇಕಿರುತ್ತದೆ.

ಅರ್ಜಿ ಸಲ್ಲಿಸಲು ಲಿಂಕ್‌ : https://recruitment.bank.sbi/crpd-sco-2022-23-16/apply

ಕೆಲವು ಹುದ್ದೆಗಳಿಗೆ ಗರಿಷ್ಠ ವಯೋಮಿತಿ 32, ವರ್ಷಗಳಾದರೆ, ಇನ್ನು ಕೆಲವು ಹುದ್ದೆಗಳಿಗೆ 35 ವರ್ಷಗಳಾಗಿವೆ. ಅಧಿಸೂಚನೆಯಲ್ಲಿ ವಯೋಮಿತಿಯನ್ನೂ ನೋಡಿಕೊಂಡು ಅರ್ಜಿ ಸಲ್ಲಿಸಬೇಕಿರುತ್ತದೆ. ಅರ್ಜಿ ಶುಲ್ಕ 750 ರೂ.ಗಳಾಗಿದ್ದು, ಆನ್‌ಲೈನ್‌ನಲ್ಲಿಯೇ ಶುಲ್ಕ ಪಾವತಿಸಬಹುದಾಗಿದೆ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿರುತ್ತದೆ.

ಎಲ್ಲ ಹುದ್ದೆಗಳಿಗೂ ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ. ವಿದ್ಯಾರ್ಹತೆ ಮತ್ತು ಅನುಭವವನ್ನು ಪರಿಶೀಲಿಸಿ ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಬ್ಯಾಂಕ್‌ ಅಧಿಸೂಚನೆಯಲ್ಲಿ ತಿಳಿಸಿದೆ.

ಹೆಚ್ಚಿನ ಮಾಹಿತಿಗೆ ವೆಬ್‌ ಸೈಟ್‌: https://sbi.co.in/web/careers/current-openings

ಇದನ್ನೂ ಓದಿ | KPSC Recruitment 2022 | ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆ; ಮತ್ತೆ ಅರ್ಜಿ ಸಲ್ಲಿಸಲು ಅವಕಾಶ

Exit mobile version