Site icon Vistara News

ದೌರ್ಜನ್ಯದಿಂದ ಮೃತಪಟ್ಟ ಎಸ್ಸಿ-ಎಸ್ಟಿ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ

Karnataka Election Results- 217 Crorepatis In 224 Member Karnataka Assembly

ಬೆಂಗಳೂರು: ದೌರ್ಜನ್ಯದಿಂದ ಮೃತಪಟ್ಟ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡದ (ಎಸ್‌ಟಿ) ವ್ಯಕ್ತಿಯ ಕುಟುಂಬದ ಸದಸ್ಯರಿಗೆ ಇನ್ನು ಮುಂದೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ದೊರೆಯಲಿದೆ.

Preview in new tab

ಈ ಸಂಬಂಧ ʼರಾಜ್ಯ ನಾಗರಿಕ ಸೇವಾ (ದೌರ್ಜನ್ಯದಿಂದ ಮೃತಪಟ್ಟ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಕ್ಕೆ ಸೇರಿದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಅನುಕಂಪದ ಆಧಾರದ ನೇಮಕಾತಿ) (ವಿಶೇಷ) ನಿಯಮಗಳು-1999ʼಕ್ಕೆ ತಿದ್ದುಪಡಿ ತಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ತಿದ್ದುಪಡಿಗೆ ಮೇ 12ರ ಗುರುವಾರದಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿತ್ತು. ಇದೀಗ ತಿದ್ದುಪಡಿ ಅಧಿಸೂಚನೆ ಪ್ರಕಟಗೊಂಡಿದೆ. ಇದುವರೆಗೆ ದೌರ್ಜನ್ಯದಿಂದ ಮೃತಪಟ್ಟ ಸರ್ಕಾರಿ ನೌಕರರ ಕುಟುಂಬದವರಿಗೆ ಮಾತ್ರ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲಾಗುತ್ತಿತ್ತು.

ತಿದ್ದುಪಡಿ ಅಧಿಸೂಚನೆಯಲ್ಲಿ ದೌರ್ಜನ್ಯಕ್ಕೊಳಗಾದ ಕುಟುಂಬದ ಸದಸ್ಯರು ಒಂದು ವರ್ಷದೊಳಗೆ ಅರ್ಜಿ ಸಲ್ಲಿಸಬೇಕೆಂಬ ನಿಯಮವನ್ನು ಬದಲಿಸಲಾಗಿದ್ದು, 2 ವರ್ಷ ಕಾಲಾವಕಾಶ ನೀಡಲಾಗಿದೆ. ವಿವಾಹಿತ ವ್ಯಕ್ತಿಯು ಮೃತಪಟ್ಟಿದ್ದರೆ ಆತನ ಅವಲಂಬಿತರಾಗಿರುವ ವಿಧವಾ ಪತ್ನಿ, ಮಗ ಅಥವಾ ಮಗಳು, ವಿವಾಹಿತ ಮಹಿಳೆ ಮೃತಪಟ್ಟಿದ್ದರೆ ಆತನ ಪತಿ, ಅವಿವಾಹಿತರಾಗಿದ್ದರೆ ಅವರ ಸಹೋದರ ಅಥವಾ ಸಹೋದರಿ, ಅವಿವಾಹಿತ ವ್ಯಕ್ತಿಯ ಸಂಗಾತಿ ಈಗಾಗಲೇ ನಿಧನರಾಗಿದ್ದರೆ ಮತ್ತು ಅವರಿಗೆ ಅಪ್ರಾಪ್ತ ವಯಸ್ಕ ಮಕ್ಕಳಿದ್ದರೆ ಅವರನ್ನು ಪೋಷಿಸುವ ಪ್ರಮಾಣೀಕೃತ ಪೋಷಕರು ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಬಹುದಾಗಿದೆ.

ಅಧಿಸೂಚನೆ ಇಲ್ಲಿದೆ ನೋಡಿ

ಇದನ್ನೂ ಓದಿ| ಸರ್ಕಾರದ ಹೊರಗುತ್ತಿಗೆ ಹುದ್ದೆಗಳಲ್ಲಿಯೂ ಮಹಿಳೆಯರಿಗೆ ಶೇ.33 ಮೀಸಲು ಜಾರಿ

ದೌರ್ಜನ್ಯದಿಂದ ಸರ್ಕಾರಿ ನೌಕರರು ಮೃತಪಟ್ಟಿರೆ ಯಾವೆಲ್ಲಾ ನಿಯಮಗಳನ್ನು ಅನುಸರಿಸಲಾಗುತ್ತಿತ್ತೋ, ಹೆಚ್ಚು ಕಡಿಮೆ ಅದೇ ನಿಯಮಗಳನ್ನು ನೌಕರಲ್ಲದವರಿಗೂ ಅನ್ವಯಿಸಲಾಗಿದೆ. ನೌಕರಿಗೆ ಅರ್ಜಿ ಸಲ್ಲಿಸುವವರು 55 ವರ್ಷಕ್ಕಿಂತ ಒಳಗಿನವರಾಗಿರಬೇಕೆಂದು ಸೂಚಿಸಲಾಗಿದೆ.

Exit mobile version