ಬೆಂಗಳೂರು: ರಾಜ್ಯದಲ್ಲಿ 2491.70 ಕೋಟಿ ರೂ. ಬಂಡವಾಳ ಹೂಡಿಕೆಯ 55 ಯೋಜನೆಗಳಿಗೆ ಅನುಮತಿ ನೀಡಲಾಗಿದ್ದು, ಇದರಿಂದ 8964 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯ (SIngle window) 136ನೇ ಸಭೆಯಲ್ಲಿ ಈ ಅನುಮತಿ ನೀಡಲಾಗಿದೆ.
ಯೋಜನೆಗಳ ವರ್ಗೀಕರಣ
೧. ರೂ.50 ಕೋಟಿಗೂ ಹೆಚ್ಚು ಬಂಡವಾಳ ಹೂಡಿಕೆಯ 7 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ ರೂ. 852.06 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. 3860 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ.
೨. ರೂ.15 ಕೋಟಿಯಿಂದ ರೂ.50 ಕೋಟಿ ಒಳಗಿನ ಬಂಡವಾಳ ಹೂಡಿಕೆಯ 44 ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ ರೂ. 786.91 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. 3644 ಜನರಿಗೆ ಉದ್ಯೋಗವಕಾಶ ಸಿಗಲಿದೆ.
೩. ೫೦ ಕೋಟಿ ರೂ.ಗಿಂತಲೂ ಹೆಚ್ಚು ಬಂಡವಾಳ ಹೂಡಿಕೆಯ 4 ಯೋಜನೆಗೆ ಅನುಮೋದನೆ ನೀಡಲಾಗಿದೆ. ಇದರಿಂದ ರೂ. 852.73 ಕೋಟಿ ಬಂಡವಾಳ ಹೂಡಿಕೆಯಾಗಲಿದೆ.
ಹೀಗೆ ಒಟ್ಟು 55 ಯೋಜನೆಗಳಿಂದ ರೂ. 2491.70 ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಇವುಗಳಿಂದ 8964 ಜನರಿಗೆ ಉದ್ಯೋಗವಕಾಶ ಲಭ್ಯವಾಗಲಿದೆ ಎಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಆಯುಕ್ತರು, ಕೈಗಾರಿಕಾಭಿವೃದ್ಧಿ ಹಾಗೂ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಕಾರ್ಯಕಾರಿ ಸದಸ್ಯರು, ಕೆ.ಐ.ಎ.ಡಿ.ಬಿ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಉದ್ಯೋಗ ಮಿತ್ರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಅನುಮೋದನೆ ನೀಡಲಾದ ಪ್ರಮುಖ ಯೋಜನಾ ಪ್ರಸ್ತಾವನೆಗಳು
೧. ಮೆ. ಬ್ರದರ್ ಮೆಷಿನರಿ ಇಂಡಿಯಾ ಪ್ರೈವೆಟ್ ಲಿಮಿಟೆಡ್- ೨೮೦ ಕೋಟಿ ರೂ. ಹೂಡಿಕೆ – ೨೨೦ ಉದ್ಯೋಗ
೨. ಮೆಸರ್ಸ್ ಬನ್ಸಾಲ್ ಆರಾಧ್ಯ ಸ್ಟೀಲ್ ಪ್ರೈವೆಟ್ ಲಿಮಿಟೆಡ್- ೧೬೭.೨೭ ಕೋಟಿ ರೂ. ಹೂಡಿಕೆ- ೮೦೦ ಉದ್ಯೋಗ
೩. ಮೆ. ಸ್ಯಾಲಿಸಿಲೇಟ್ಸ್ ಎಂಡ್ ಕೆಮಿಕಲ್ಸ್ ಪ್ರೈ. ಲಿಮಿಟೆಡ್- ೧೩೧.೯೭ ಕೋಟಿ ರೂ. ಹೂಡಿಕೆ- ೪೬೫ ಉದ್ಯೋಗ
೪. ಮೆ. ಕೇದಾರ್ ಸೋಲಾರ್ ಪವರ್- ೮೦.೬೬ ಕೋಟಿ ರೂ. ಹೂಡಿಕೆ- ೭೫ ಮಂದಿಗೆ ಉದ್ಯೋಗ
೫. ಮೆ. ಹೆಲ್ಲಾ ಇನ್‌ಫ್ರಾ ಮಾರ್ಕೆಟ್ ಪ್ರೈ. ಲಿಮಿಟೆಡ್- ೭೧.೬೬ ಕೋಟಿ ರೂ. ಹೂಡಿಕೆ- ೧೫೦೦ ಉದ್ಯೋಗ
೬. ಮ್ಯಾಗ್‌ಕೋರ್ ಲ್ಯಾಮಿನೇಷನ್ ಇಂಡಿಯಾ- ೬೦.೫ ಕೋಟಿ ರೂ. ಹೂಡಿಕೆ- ೬೫೦ ಮಂದಿಗೆ ಜಾಬ್
೭. ಒನ್ ಸ್ಟೀಲ್ ಎಂಡ್ ಅಲಾಯ್ಸ್ ಪ್ರೈ. ಲಿಮಿಟೆಡ್- ೬೦ ಕೋಟಿ ರೂ. ಹೂಡಿಕೆ- ೧೫೦ ಮಂದಿಗೆ ಜಾಬ್
೮. ಬೇಲೂರ್ ಬಾಯಿರ್ ಬಯೋಟೆಕ್ ಲಿಮಿಟೆಡ್- ೪೮.೩೨ ಕೋಟಿ ರೂ. ಹೂಡಿಕೆ- ೧೮೦ ಉದ್ಯೋಗ
೯. ಮೆ. ಖಾನಲ್ ಫುಡ್ಸ್ ಪ್ರೈವೆಟ್ ಲಿಮಿಟೆಡ್- ೩೦ ಕೋಟಿ ರೂ. ಹೂಡಿಕೆ- ೨೦೦ ಮಂದಿಗೆ ಉದ್ಯೋಗ
೧೦. ಮೆ. ಲೆವೋ ಲೈಫ್ ಸೈನ್ಸಸ್ ಪ್ರೈ. ಲಿಮಿಟೆಡ್- ೨೮.೫ ಕೋಟಿ ರೂ. ಹೂಡಿಕೆ- ೧೨೮ ಮಂದಿಗೆ ಉದ್ಯೋಗ
ಇದನ್ನೂ ಓದಿ | CM Basavaraja bommai | ಹೂಡಿಕೆದಾರರ ಸಮಾವೇಶದಲ್ಲಿ ಕರಾವಳಿಗೆ 2 ಲಕ್ಷ ಕೋಟಿ ರೂ. ಬಂಡವಾಳ