ನವದೆಹಲಿ: ಕೇಂದ್ರ ಸರ್ಕಾರದ (Central Government) ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವ 1324 ಕಿರಿಯ ಎಂಜಿನಿಯರ್ ನೇಮಕಾತಿಗಾಗಿ (SSC JE 2023) ಸಿಬ್ಬಂದಿ ನೇಮಕಾತಿ ಆಯೋಗವು (Staff Selection Commission – SSC) ಪ್ರಕ್ರಿಯೆ ಆರಂಭಿಸಿದೆ. ಆಸಕ್ತ ಅಭ್ಯರ್ಥಿಗಳು, ಕಿರಿಯ ಎಂಜಿನಿಯರ್ (Junior Engineer) ಹುದ್ದೆಗಳಿಗಾಗಿ ತಮ್ಮ ಅರ್ಹತೆಯನ್ನು ಖಚಿತಪಡಿಸಿಕೊಂಡು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಸ್ಎಸ್‌ಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.
SSC JE 2023 ಅಪ್ಲಿಕೇಶನ್ ಪ್ರಕ್ರಿಯೆಯು ಜುಲೈ 26 ರಿಂದ ಆಗಸ್ಟ್ 16ರವರೆಗೆ ನಡೆಯಲಿದೆ. ಅಪ್ಲಿಕೇಶನ್ ತಿದ್ದುಪಡಿ ವಿಂಡೋ ಆಗಸ್ಟ್ 17 ರಿಂದ 18 ರವರೆಗೆ ಕಾರ್ಯನಿರ್ವಹಿಸುತ್ತದೆ. ಕಿರಿಯ ಎಂಜಿನಿಯರ್ ನೇಮಕಾತಿ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CNT) ಮೋಡ್‌ನಲ್ಲಿ 2023ರ ಅಕ್ಟೋಬರ್ ತಿಂಗಳಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯ ದಿನಾಂಕವನ್ನು ನಿಗದಿತ ಸಮಯದಲ್ಲಿ ಆಯೋಗ ಹಂಚಿಕೊಳ್ಳಲಿದೆ. ವಯೋಮಿತಿ ಅರ್ಹತೆ ತಿಳಿದುಕೊಳ್ಳಲು ಅಧಿಕೃತ ಅಧಿಸೂಚನೆಯನ್ನು ನೋಡತಕ್ಕದ್ದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಸಿಬ್ಬಂದಿ ನೇಮಕಾತಿ ಆಯೋಗವು ಈ ನೇಮಕಾತಿ ಪ್ರಕ್ರಿಯೆ ಮೂಲಕ 1324 ಕಿರಿಯ ಎಂಜಿನಿಯರ್ ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಬಿಆರ್‌ಒ, ಸಿಪಿಡಬ್ಲ್ಯೂ, ಎಫ್‍ಬಿಪಿ, ಎನ್‌ಟಿಆರ್ಒ ಮತ್ತು ಇತರ ಸರ್ಕಾರಿ ಸಂಸ್ಥೆಗಳಲ್ಲಿ ನೇಮಕ ಮಾಡಲಾಗತ್ತದೆ.
ಈ ಸುದ್ದಿಯನ್ನೂ ಓದಿ: Agniveer Recruitment 2023: ವಾಯುಪಡೆಗೆ ಅಗ್ನಿವೀರರ ನೇಮಕ; ಇಂದಿನಿಂದ ಅರ್ಜಿ ಸಲ್ಲಿಕೆ ಶುರು
ಎಸ್‌ಎಸ್‌ಸಿ ಕಿರಿಯ ಎಂಜಿನಿಯರ್ ಹುದ್ದೆ ನೇಮಕಾತಿಗಾಗಿ ಅರ್ಜಿದಾರರು ಅರ್ಜಿ ಶುಲ್ಕ 100 ರೂ. ಪಾವತಿಸಬೇಕಾಗುತ್ತದೆ. ಆದರೆ, ಮಹಿಳಾ ಅಭ್ಯರ್ಥಿಗಳು ಮತ್ತು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ವಿಶೇಷ ಚೇತನರು, ಮೀಸಲಾತಿಗೆ ಅರ್ಹರಾಗಿರುವ ಮಾಜಿ ಸೈನಿಕರಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಉದ್ಯೋಗದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.