Site icon Vistara News

SSC Recruitment 2023 : ಕೇಂದ್ರ ಸರ್ಕಾರದ 5,369 ಹುದ್ದೆಗಳಿಗೆ ನೇಮಕ; ಎಸ್ಸೆಸ್ಸೆಲ್ಸಿ, ಪಿಯುಸಿ, ಪದವೀಧರರಿಗೆ ಅವಕಾಶ

SSC Selection Post Phase XI notification 2023 released

ಎಸ್‌ಎಸ್‌ಸಿ

ನವ ದೆಹಲಿ: ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಕೇಂದ್ರದ ವಿವಿಧ ಸಚಿವಾಲಯ, ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ (SSC Selection Post Phase XI Notification 2023) ಅರ್ಜಿ ಆಹ್ವಾನಿಸಿದೆ (SSC Recruitment 2023). ವಿವಿಧ ಗುಂಪಿನ ಒಟ್ಟು 5,369 ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, ಅರ್ಜಿ ಸಲ್ಲಿಸಲು ಮಾರ್ಚ್‌ 27 ಕೊನೆಯ ದಿನವಾಗಿರುತ್ತದೆ.

ವಿವಿಧ ಹುದ್ದೆಗಳಿಗೆ ನೇಮಕ ನಡೆಯುತ್ತಿರುವುದರಿಂದ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಮತ್ತು ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ನೇಮಕ ನಡೆಯಲಿರುವ ಹುದ್ದೆಗಳ ವಲಯವಾರು ವಿವರಗಳನ್ನು ಎಸ್‌ಎಸ್‌ಸಿಯು ವೆಬ್‌ಸೈಟ್‌ನಲ್ಲಿ ಒದಗಿಸಿದ್ದು, ಆಸಕ್ತ ಅಭ್ಯರ್ಥಿಗಳು ಹುದ್ದೆ ಮತ್ತು ವಿದ್ಯಾರ್ಹತೆಯ ಮಾಹಿತಿಯನ್ನು ಪಡೆದುಕೊಂಡು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಹುದ್ದೆಗಳ ವಿವರ ಪಡೆಯಲು ಇಲ್ಲಿ ಕ್ಲಿಕ್‌ (Click Here) ಮಾಡಿ.

ಮಲ್ಟಿಟಾಸ್ಕಿಂಗ್ ಸ್ಟಾಫ್‌, ಟೆಕ್ನಿಕಲ್ ಸೂಪರಿಂಟೆಂಡೆಂಟ್‌, ಅಕೌಂಟೆಂಟ್‌, ಕ್ಲರ್ಕ್‌, ಮೆಕ್ಯಾನಿಕಲ್‌ ವಿಭಾಗ ಚಾರ್ಜ್‌ಮನ್, ಕೋರ್ಟ್‌ ಮಾಸ್ಟರ್‌, ಕೇರ್‌ ಟೇಕರ್‌, ರೀಸರ್ಚ್‌ ಅಸೋಸಿಯೇಟ್‌, ಜೂನಿಯರ್‌ ಕೆಮಿಸ್ಟ್‌, ಜೂನಿಯರ್‌ ಎಂಜಿನಿಯರ್‌, ನರ್ಸಿಂಗ್‌ ಆಫೀಸರ್‌, ಸ್ಟಾಕ್‌ಮೆನ್‌, ಫೀಲ್ಡ್‌ ಮೆನ್‌, ಸೀನಿಯರ್‌ ಕನ್ಸರ್‌ವೇಷನ್‌ ಅಸಿಸ್ಟೆಂಟ್‌ ಹೀಗೆ ವೈವಿಧ್ಯಮಯ ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ನಡೆಯುತ್ತಿದೆ.

ನೇಮಕಾತಿಯ ವೇಳಾಪಟ್ಟಿ

ವಯೋಮಿತಿ ಎಷ್ಟು?
ಕೆಲವು ಹುದ್ದೆಗಳಿಗೆ 18-25 ಮತ್ತೆ ಕೆಲವು ಹುದ್ದೆಳಿಗೆ 18-27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿಯಲ್ಲಿ ಎಸ್‌ಸಿ/ ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇರುತ್ತದೆ. ವಯೋಮಿತಿಯನ್ನು ದಿನಾಂಕ 01-01-2023 ಕ್ಕೆ ಲೆಕ್ಕಹಾಕಲಾಗುತ್ತದೆ.

ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ : https://ssc.nic.in/Portal/Apply

ಅರ್ಜಿ ಶುಲ್ಕ ಎಷ್ಟು ಕಟ್ಟಬೇಕು?
ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಮಹಿಳಾ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿರುತ್ತದೆ. ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬಹುದಾಗಿರುತ್ತದೆ. ಆನ್‌ಲೈನ್‌ನಲ್ಲಿ ಸಾಧ್ಯವಾಗದೇ ಇರುವವರು ಎಸ್‌ಬಿಐ ಬ್ಯಾಂಕ್‌ನಲ್ಲಿ ಚಲನ್‌ ಮೂಲಕ ಪಾವತಿಸಲು ಅವಕಾಶ ನೀಡಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here ) ಮಾಡಿ.

ನೇಮಕ ಹೇಗೆ?
ಮೊದಲಿಗೆ ಕಂಪ್ಯೂಟರ್‌ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ. ನೂರು ಅಂಕಗಳಿಗೆ ನಡೆಯಲಿರುವ ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ, ಅಗತ್ಯ ಇದ್ದರೆ ಕೌಶಲ/ ದೈಹಿಕ ಪರೀಕ್ಷೆ ನಡೆಸಲಾಗುತ್ತದೆ. ಅಗತ್ಯ ವಿಲ್ಲದ ಹುದ್ದೆಗಳಿಗೆ ನೇರವಾಗಿ ದಾಖಲೆ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಪರೀಕ್ಷೆಗಳು ಹೇಗಿರುತ್ತವೆ, ಯಾವೆಲ್ಲಾ ವಿಷಯಗಳನ್ನು ಒಳಗೊಂಡಿರುತ್ತದೆ ಎಂಬ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

ವಿದ್ಯಾರ್ಹತೆಗೆ ತಕ್ಕಂತೆ ಪರೀಕ್ಷೆಯಲ್ಲಿ ಪ್ರಶ್ನೆಕೇಳಲಾಗುತ್ತದೆ. ಅಂದರೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಬಯಸಿದ ಅಭ್ಯರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಮಟ್ಟದ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ಪರೀಕ್ಷೆಯ ಪಠ್ಯಕ್ರಮವನ್ನು ಅಧಿಸೂಚನೆಯಲ್ಲಿ ಒದಗಿಸಲಾಗಿದೆ.

ರಾಜ್ಯದಲ್ಲಿ ಎಲ್ಲೆಲ್ಲಿ ಪರೀಕ್ಷೆ ನಡೆಯುತ್ತದೆ?
ರಾಜ್ಯದ ಒಟ್ಟು ಎಂಟು ಜಿಲ್ಲಾ ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಸಲಾಗುತ್ತೆ. ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಉಡುಪಿ ಪರೀಕ್ಷಾ ಕೇಂದ್ರ ಇರಲಿದೆ.

ನೇಮಕದ ಕುರಿತ ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌: https://ssc.nic.in
ಬೆಂಗಳೂರು ಎಸ್‌ಎಸ್‌ಸಿ ಸಹಾಯವಾಣಿ ಸಂಖ್ಯೆ: 080-25502520, 09483862020

ಇದನ್ನೂ ಓದಿ | UPSC Recruitment 2023 : ರೈಲ್ವೆ ಇಲಾಖೆಯ IRMS ಅಧಿಕಾರಿಯಾಗಬೇಕೇ? ಐಎಎಸ್‌ ಪರೀಕ್ಷೆಗೇ ಅರ್ಜಿ ಸಲ್ಲಿಸಿ!

Exit mobile version