ಬೆಂಗಳೂರು: ಕರ್ನಾಟಕ ರಾಜ್ಯ ಪರೀಕ್ಷಾ ಪ್ರಾಧಿಕಾರವು ರಾಜ್ಯ ಸರ್ಕಾರದ ನಾನಾ ಇಲಾಖೆಗಳಲ್ಲಿ (Government Job) ಬಾಕಿ ಇರುವ ಹುದ್ದೆಗಳಿಗೆ ಅರ್ಜಿ ಕರೆದಿದೆ. ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ. (BMTC ), ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕ ನಡೆಯಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜನವರಿ 10 2024ರಂದು ಪ್ರಕಟಣೆ ಹೊರಡಿಸಿದೆ. ಆದರೆ ಹುದ್ದೆಗೆ ಬೇಕಾಗಿರುವ ವಿದ್ಯಾರ್ಹತೆ, ವೃಂದವಾರು ವರ್ಗೀಕರಣ, ಅರ್ಜಿ ಸಲ್ಲಿಕೆಯ ಕೊನೇ ದಿನಾಂಕ ಹಾಗೂ ಪರೀಕ್ಷೆಗೆ ಸಂಬಂಧಪಟ್ಟ ಮಾಹಿತಿಯನ್ನು ಅಧಿಸೂಚನೆ ಪ್ರಕಟಿಸುವ ವೇಳೆ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಪ್ರಕಟಣೆಯ ಪ್ರತಿಯನ್ನು ವಿಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
ಉದ್ಯೋಗ ವಿವರ ಇಲ್ಲಿದೆ
- ಶೈಕ್ಷಣಿಕ ಅರ್ಹತೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮಗಳ ಪ್ರಕಾರ ನಿಗದಿಯಾಗಲಿದೆ. ಮುಂದೆ ಪ್ರಕಟಗೊಳ್ಳಲಿದೆ.
- ವಯೋಮಿತಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿ ಮಾಡಲಿದೆ. ಶೀಘ್ರ ಪ್ರಕಟಗೊಳ್ಳಬಹುದು.
- ವಯೋಮಿತಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಯಮದ ಪ್ರಕಾರ ವಯೋಮಿತಿ ನಿಗದಿಯಾಗಲಿದೆ.
- ಅರ್ಜಿ ಶುಲ್ಕ: ಇನ್ನೂ ನಿಗದಿಯಾಗಿಲ್ಲ. ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.
- ಉದ್ಯೋಗ ಸ್ಥಳ: ಕರ್ನಾಟಕದ ನಾನಾ ಪ್ರದೇಶ
ಭರ್ತಿಯಾಗಲಿರುವ ಹುದ್ದೆಗಳ ವಿವರ ಇಲ್ಲಿದೆ
- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿ 2503 ಹುದ್ದೆಗಳು
- ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KKRTC)ಯಲ್ಲಿ 1752 ಹುದ್ದೆಗಳು
- ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ (NWKRTC) 750 ಹುದ್ದೆಗಳು
- ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (KUWSB)ಯಲ್ಲಿ 64 ಹುದ್ದೆಗಳು
- ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ (RGUHS) 44 ಹುದ್ದೆಗಳು
- ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ನಲ್ಲಿ (KSDL) 38 ಹುದ್ದೆಗಳು
- ಒಟ್ಟು ಹುದ್ದೆಗಳು 5151
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯಲ್ಲಿರುವ ಹುದ್ದೆಗಳ ವಿವರ
- ನಿರ್ವಾಹಕ – 2500
- ಸಹಾಯಕ ಲೆಕ್ಕಿಗ – 01
- ಸ್ಟಾಫ್ ನರ್ಸ್ – 01
- ಫಾರ್ಮಸಿಸ್ಟ್ – 01
ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KKRTC)ಯ ಹುದ್ದೆಯ ವಿವರ
- ಸಹಾಯಕ ಲೆಕ್ಕಿಗ – 15
- ನಿರ್ವಾಹಕ – 1737
- ಸಹಾಯಕ ಆಡಳಿತಾಧಿಕಾರಿ (ದರ್ಜೆ-2) – 03
- ಸಹಾಯಕ ಲೆಕ್ಕಾಧಿಕಾರಿ – 02
- ಸಹಾಯಕರ ಅಂಕಿಸಂಖ್ಯಾಧಿಕಾರಿ – 01
- ಸಹಾಯಕ ಉಗ್ರಾಣಾಧಿಕಾರಿ – 02
- ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ – 07
- ಸಹಾಯಕ ಕಾನೂನು ಅಧಿಕಾರಿ – 07
- ಸಹಾಯಕ ಅಭಿಯಂತರು (ಕಾಮಗಾರಿ) – 01
- ಸಹಾಯಕ ತಾಂತ್ರಿಕ ಶಿಲ್ಪಿ – 11
- ಸಹಾಯಕ ಸಂಚಾರ ವ್ಯವಸ್ಥಾಪಕ – 11
- ಕಿರಿಯ ಅಭಿಯಂತರರು (ಕಾಮಗಾರಿ) – 05
- ಕಿರಿಯ ಅಭಿಯಂತರರು (ವಿದ್ಯುತ್) – 08
- ಗಣಕ ಮೇಲ್ವಿಚಾರಕ – 14
- ಸಂಚಾರ ನಿರೀಕ್ಷಕ – 18
- ಚಾರ್ಜ್ಮನ್ 52
- ಸಹಾಯಕ ಸಂಚಾರ ನಿರೀಕ್ಷಕ (ದರ್ಜೆ-3) – 28
- ಕುಶಲ ಕರ್ಮಿ – 80
- ತಾಂತ್ರಿಕ ಸಹಾಯಕ (ದರ್ಜೆ-3) – 500
ಇದನ್ನೂ ಓದಿ :
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (KUWSB) ಹುದ್ದೆಯ ವಿವರ
- ಸಹಾಯಕ ಇಂಜಿನಿಯರ್ (ಸಿವಿಲ್) – 50
- ಪ್ರಥಮ ದರ್ಜೆ ಲೆಕ್ಕ ಸಹಾಯಕ (ಗ್ರೂಪ್-ಸಿ) 14
ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ (RGUHS) ಹುದ್ದೆಯ ವಿವರ
- ಸಹಾಯಕ ಗ್ರಂಥಪಾಲಕ-1
- ಜೂನಿಯರ್ ಪ್ರೋಗ್ರಾಮರ್-5
- ಸಹಾಯಕ ಇಂಜಿನಿಯರ್-1
- ಸಹಾಯಕ-12
- ಕಿರಿಯ ಸಹಾಯಕ-25
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಹುದ್ದೆಗಳ ವಿವರ
- ಅಧಿಕಾರಿ (ಲೆಕ್ಕಪತ್ರ) (ಮಾರುಕಟ್ಟೆ) (ಗ್ರೂಪ್-ಬಿ)-6
- ಅಧಿಕಾರಿ (ಲೆಕ್ಕಪತ್ರ) (ಗ್ರೂಪ್ -ಬಿ)-1
- ಕಿರಿಯ ಅಧಿಕಾರಿ ಕ್ಯೂಎಡಿ-2
- ಕಿರಿಯ ಅಧಿಕಾರಿ (ಉತ್ಪಾದನೆ ನಿರ್ವಹಣೆ)-2
- ಕಿರಿಯ ಅಧಿಕಾರಿ (ಸಾಮಗ್ರಿ/ ಉಗ್ರಾಣ ವಿಭಾಗ-2
- ಉಪ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) (ಗ್ರೂಪ್-ಎ)-1
- ಸಹಾಯಕ ಪ್ರಧಾನ ವ್ಯವಸ್ಥಾಪಕರು (ಮಾರುಕಟ್ಟೆ) (ಗ್ರೂಪ್-ಎ)-1
- ನಿರ್ವಾಹಕರು (ಮಾರುಕಟ್ಟೆ) (ಗ್ರೂಪ್-ಎ)-1
- ಅಧಿಕಾರಿ (ಮಾರುಕಟ್ಟೆ) (ಗ್ರೂಪ್-ಬಿ)-2
- ಕಿರಿಯ ಅಧಿಕಾರಿ (ಮಾರುಕಟ್ಟೆ) (ಗ್ರೂಪ್-ಸಿ)-1
- ಮಾರಾಟ ಪ್ರತಿನಿಧಿ(ಮಾರುಕಟ್ಟೆ) (ಗ್ರೂಪ್-ಸಿ)-4
- ಕಿರಿಯ ಮಾರಾಟ ಪ್ರತಿನಿಧಿ (ಮಾರುಕಟ್ಟೆ) (ಗ್ರೂಪ್ -ಸಿ)-3
- ಅಸಿಸ್ಟೆಂಟ್ ಆಪರೇಟರ್ (ಅರೆಕುಶಲ) (ಗ್ರೂಪ್ -ಡಿ)-11