Site icon Vistara News

Self employment: ಬ್ರಾಹ್ಮಣರ ಸ್ವ ಉದ್ಯೋಗ, ಶಿಕ್ಷಣಕ್ಕೆ ಸರ್ಕಾರದ ನೆರವು; ಅರ್ಹರು ಯಾರು? ಸೌಕರ್ಯ ಪಡೆಯೋದು ಹೇಗೆ?

Swavalambi for self employment of Brahmins and Sandipini scheme for Brahmins students education

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದಿರುವ ಬ್ರಾಹ್ಮಣ ಕುಟುಂಬಗಳ (Brahmin family) ಶ್ರೇಯೋಭಿವೃದ್ಧಿಗಾಗಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೀಡುವ ಸ್ವಾವಲಂಬಿ ಮತ್ತು ಸಾಂದೀಪಿನಿ ಶಿಷ್ಯ ವೇತನದ ಯೋಜನೆಗಳನ್ನು ಆರಂಭ ಮಾಡಿದೆ. ಸ್ವಯಂ ಉದ್ಯೋಗಿ (Self employment) ಬ್ರಾಹ್ಮಣರಿಗೆ ಸಹಾಯಧನ (Subsidy to Brahmins) ಸಿಗುವುದಲ್ಲದೆ, ವಿದ್ಯಾರ್ಥಿಗಳಿಗೆ ಶಿಷ್ಯ ವೇತನವನ್ನೂ ನೀಡುವ ಯೋಜನೆಗಳು ಇವಾಗಿವೆ.

ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna ByreGowda) ಈಚೆಗೆ ಮಾಹಿತಿಯನ್ನು ನೀಡಿದ್ದರು. ಇದರಡಿ ಶಿಕ್ಷಣ, ಪಠ್ಯ ಪುಸ್ತಕ, ಎಲೆಕ್ಟ್ರಾನಿಕ್ ಉಪಕರಣ, ಇನ್ನಿತರ ಅಧ್ಯಯನ ಉಪಕರಣಗಳು, ಸಾರಿಗೆ ವ್ಯವಸ್ಥೆ, ಹಾಸ್ಟೆಲ್ ಹಾಗೂ ಬಟ್ಟೆ ಕೂಡಾ ಸಿಗಲಿದೆ. ಇನ್ನು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳು ಸ್ವಯಂ ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗೆ ಬ್ಯಾಂಕ್‌ನಿಂದ ಸಾಲ ಪಡೆದಿದ್ದಲ್ಲಿ ಇದರಲ್ಲಿ ಶೇ.20ರಷ್ಟು ಹಣವನ್ನು ಸರ್ಕಾರ ‘ಸ್ವಾವಲಂಬಿ’ ಯೋಜನೆಯಡಿ ಸಹಾಯಧನದ ರೂಪದಲ್ಲಿ ನೀಡಲಿದೆ ಎಂದು ಸಹ ಸಚಿವರು ಹೇಳಿದ್ದರು.

ಸ್ವಾವಲಂಬಿ ಯೋಜನೆ ಬಗ್ಗೆ ತಿಳಿಯಿರಿ

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರಿಗೆ ಸ್ವಾವಲಂಬಿ ಯೋಜನೆಯಡಿ ಸ್ವ – ಉದ್ಯೋಗ ಕೈಗೊಳ್ಳಲು ಬ್ಯಾಂಕಿನಿಂದ ಪಡೆದ ಸಾಲಕ್ಕೆ 1 ಲಕ್ಷ ರೂಪಾಯಿವರೆಗೆ ಸಹಾಯಧನ ನೀಡಲಾಗುತ್ತದೆ. ಅಂಗಡಿ, ಹೈನುಗಾರಿಕೆ, ಹೊಲಿಗೆ ವೃತ್ತಿ, ಆಟಿಕೆ ತಯಾರಿಕೆ, ಗೃಹ/ಗುಡಿ ಕೈಗಾರಿಕೆ ಮುಂತಾದ ಆದಾಯ ತರುವಂತಹ ಲಾಭದಾಯಕ ಉದ್ಯಮಗಳನ್ನು ಕೈಗೊಳ್ಳಲು ಈ ಸಹಾಯಧನ ಸಿಗುತ್ತದೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕಿನಿಂದ ಸ್ವ- ಉದ್ಯೋಗ ಕೈಗೊಳ್ಳಲು 2023-24ನೇ ಸಾಲಿನಲ್ಲಿ ಸಾಲ ಪಡೆದಿರುವವರು ಇದರ ಅಡಿ ಅರ್ಜಿ ಸಲ್ಲಿಕೆ ಮಾಡಬಹುದು.

ಸ್ವಾವಲಂಬಿ ಯೋಜನೆಗೆ ದಾಖಲೆಗಳೇನು ಬೇಕು?

*ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ.
*ಪಾಸ್‌ಪೋರ್ಟ್‌ ಫೋಟೊ
*ಬ್ಯಾಂಕ್‌ನಲ್ಲಿ ಸಾಲ ಪಡೆದಿರುವ ದೃಢೀಕರಣ
*ಸಾಲ ಪಡೆದ ಬ್ಯಾಂಕಿನ ಪಾಸ್ ಬುಕ್ ಪ್ರತಿ
*ಬ್ಯಾಂಕ್‌ನಿಂದ ಪಡೆದ ಸಾಲದ ಮಂಜೂರಾತಿ ಪತ್ರ

ಅರ್ಜಿ ಸಲ್ಲಿಸುವುದು ಎಲ್ಲಿ?

ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿ ವಿವರಗಳನ್ನು ಭರ್ತಿ ಮಾಡಿ ಸಬ್‌ಮಿಟ್‌ ಕೊಡಬೇಕು.

ಸಾಂದೀಪನಿ ಶಿಷ್ಯ ವೇತನಕ್ಕೆ ಅರ್ಜಿ ಸಲ್ಲಿಸಲು ಜ.31 ಕೊನೇ ದಿನ

ಸಾಂದೀಪನಿ ಶಿಷ್ಯ ಯೋಜನೆಯಡಿ ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲಾಗುತ್ತದೆ. ಇದರಡಿ 15 ಸಾವಿರ ರೂ. ವಿದ್ಯಾರ್ಥಿ ವೇತನ ಲಭ್ಯವಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಸಮೀಪದ ಗ್ರಾಮ್ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. 2024ರ ಜನವರಿ 31 ಅರ್ಜಿ ಸಲ್ಲಿಸಲು ಕೊನೇ ದಿನ. ಈ ವರ್ಷ ಒಟ್ಟು 9,206 ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ. ಪ್ರಸಕ್ತ ವರ್ಷ ಈ ಯೋಜನೆಗಾಗಿ ಸರ್ಕಾರದಿಂದ 13.77 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: HSRP Number Plate : ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಹಾಕಿಸೋಕೆ ಇನ್ನು 28 ದಿನ ಮಾತ್ರ ಬಾಕಿ!

ಅರ್ಹತೆ ಏನು?

Exit mobile version