Site icon Vistara News

‘ಟಾಪ್ ವುಮನ್ ಕೋಡರ್‌’ಗೆ ಲಿಂಕ್ಡ್‌ಇನ್‌ನಿಂದ ವಾರ್ಷಿಕ 60 ಲಕ್ಷ ರೂ. ಸ್ಯಾಲರಿ!

Top Woman Coder get job at Linkedin by RS 60 lakh package

ನವದೆಹಲಿ: ದೇಶದ ‘ಟಾಪ್ ವುಮನ್ ಕೋಡರ್’ (Top Woman Coder) ಮತ್ತು ಎಂಜಿನಿಯರಿಂಗ್ ಪದವೀಧರೆ (Engineering Graduate) ಮುಸ್ಕಾನ್ ಅಗರವಾಲ್ (Muskan Agrawal) ಅವರನ್ನು ಲಿಂಕ್ಡ್‌ಇನ್ (LinkedIN) ಭಾರೀ ಮೊತ್ತದ ಸ್ಯಾಲರಿ ಪ್ಯಾಕೇಜ್‌ಗೆ (Salary Package) ನೇಮಕ ಮಾಡಿಕೊಂಡಿದೆ. ವಾರ್ಷಿಕ 60 ಲಕ್ಷ ರೂಪಾಯಿ ಆಫರ್ ನೀಡಿದೆ. ವಿಶೇಷ ಎಂದರೆ, ಮುಸ್ಕಾನ್ ಅಗರವಾಲ್ ಯಾವುದೇ ಐಐಟಿ ಪದವೀಧರೆಯಲ್ಲ. ಉತ್ತರ ಪ್ರದೇಶದ ಉನಾದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ(IIIT)ಯಿಂದ ಪದವಿ ಪಡೆದುಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 9.40 ಜಿಪಿಎ ಸ್ಕೋರ್ ಪಡೆದುಕೊಳ್ಳುವ ಮೂಲಕ ಅವರು ಪದವೀಧರೆಯಾಗಿದ್ದಾರೆ. ಮುಸ್ಕಾನ್ ಅಗರವಾಲ್ ತನ್ನ ಕಾಲೇಜಿನ ವಿದ್ಯಾರ್ಥಿಯೊಬ್ಬರಿಂದ ಪಡೆದ ಅತ್ಯಧಿಕ ವೇತನ ಪ್ಯಾಕೇಜ್‌ಗಾಗಿ ದಾಖಲೆಯನ್ನು ನಿರ್ಮಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಳೆದ ವರ್ಷ ಮುಸ್ಕಾನ್ ಅಗರವಾಲ್ ಅವರು ಭಾರತದ ಅತಿದೊಡ್ಡ ಕೋಡಿಂಗ್ ಸ್ಪರ್ಧೆಯಾದ ಟೆಕ್‌ಗಿಗ್ ಗೀಕ್ ಗಾಡೆಸ್ 2022 ಅನ್ನು ಗೆದ್ದು, ದೇಶದ ಟಾಪ್ ವುಮನ್ ಕೋಡರ್ ಎನಿಸಿಕೊಂಡಿದ್ದರು. ಈ ಸ್ಪರ್ಧೆಯಲ್ಲಿ ಅವರಿಗೆ 1.5 ಲಕ್ಷ ರೂ. ನಗದು ಬಹುಮಾನ ಕೊಡ ದೊರೆತಿತ್ತು. ಟೆಕ್‌ಗೀಗ್ ಗೀಕ್ ಗಾಡೆಸ್ ಸ್ಪರ್ಧೆಯಲ್ಲಿ ಸುಮಾರು 69,000ಕ್ಕ ಅಧಿಕ ಕೋಡರ್‌ಗಳು ಭಾವಹಿಸಿದ್ದರು. ಅವರೆನ್ನಲ್ಲ ಹಿಂದಿಕ್ಕಿ ಮುಸ್ಕಾನ್ ಟಾಪ್ ಕೋಡರ್ ಆಗಿ ಹೊರ ಹೊಮ್ಮಿದ್ದರು.

ಈ ಸ್ಪರ್ಧೆಯಲ್ಲಿ, ಫೈನಲಿಸ್ಟ್‌ಗಳು ತಮ್ಮ ವಿಜೇತ ಪ್ರೋಗ್ರಾಮಿಂಗ್ ಪರಿಹಾರಗಳನ್ನು ಸಲ್ಲಿಸಲು ನಾಲ್ಕು ಗಂಟೆಗಳ ಕಾಲ ತಡೆರಹಿತ ಕೋಡಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು.

ಕಳೆದ ವರ್ಷ ಐಐಐಟಿ ಉನಾದ ಮತ್ತೊಬ್ಬ ಟ್ರೈನೀ 47 ಲಕ್ಷ ರೂಪಾಯಿ ವಾರ್ಷಿಕ ಪ್ಯಾಕೇಜ್ ಅನ್ನು ಪಡೆದುಕೊಂಡಿದ್ದರು. 2019-23 ಬ್ಯಾಚ್ ಟ್ರೈನಿಗಳಲ್ಲಿ ಸರಿಸುಮಾರು 86 ಪ್ರತಿಶತದಷ್ಟು ಜನರು ಸುಮಾರು 31 ವಿವಿಧ ಕಂಪನಿಗಳಲ್ಲಿ ಉದ್ಯೋಗಗಳನ್ನು ಕಂಡುಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

“ಟಾಪ್ ಕೋಡರ್” ಕೋಡೆಸ್ ಕೆಫೆಯೊಂದಿಗೆ ಕೆಲಸ ಮಾಡುತ್ತಿದ್ದರು. ಇದು ಮಹಿಳೆಯರಿಗೆ ತಂತ್ರಜ್ಞಾನದಲ್ಲಿ ವೈಯಕ್ತಿಕಗೊಳಿಸಿದ ಮಾರ್ಗದರ್ಶನ, ಸಂಪನ್ಮೂಲಗಳು ಮತ್ತು ಸಂದರ್ಶನದ ಅವಧಿಗಳೊಂದಿಗೆ ಸಹಾಯ ಮಾಡಲು ಮೆಂಟರ್‌ಶಿಪ್ ಉಪಕ್ರಮವಾಗಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಅಗರವಾಲ್ ಅವರ ಸಾಧನೆಗಳು ಲಿಂಕ್ಡ್‌ಇನ್‌ನಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಇಂಜಿನಿಯರ್ ಆಗಿ ಉದ್ಯೋಗವನ್ನು ಪಡೆಯಲು ಸಹಾಯ ಮಾಡಿತು. ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಮತ್ತು ಕಳೆದ ಐದು ತಿಂಗಳಿಂದ ಲಿಂಕ್ಡ್ಇನ್ ಕಂಪನಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: ಮಕ್ಕಳನ್ನು ನೋಡಿಕೊಳ್ಳುವ ಆಯಾ ಕೆಲಸಕ್ಕೆ 80 ಲಕ್ಷ ರೂ. ಸ್ಯಾಲರಿ ಆಫರ್!

Exit mobile version