Site icon Vistara News

Unemployment Rate: ದೇಶದಲ್ಲಿ ನಿರುದ್ಯೋಗ ಪ್ರಮಾಣ 5 ವರ್ಷದಲ್ಲೇ ಕನಿಷ್ಠ, ಕೊರೊನಾ ಬಳಿಕ ಚೇತರಿಕೆ

Unemployment rate

India’s Unemployment Rate At Record Low, SBI Research Says

ನವದೆಹಲಿ: ಕೊರೊನಾ ಬಿಕ್ಕಟ್ಟಿನ ಬಳಿಕ ಭಾರತದ ಆರ್ಥಿಕತೆ ದಿನೇದಿನೆ ಚೇತರಿಸಿಕೊಳ್ಳುತ್ತಿದೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿಯಿಂದ ಜಗತ್ತಿನ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದರೂ ಭಾರತದ ಆರ್ಥಿಕತೆ ಮಾತ್ರ ಸದೃಢವಾಗಿದೆ. ಹಾಗಾಗಿಯೇ, ದೇಶೀಯ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿಲ್ಲ. ಇದರ ಬೆನ್ನಲ್ಲೇ, ದೇಶದಲ್ಲಿ ಕಳೆದ ಐದು ವರ್ಷದಲ್ಲಿಯೇ ನಿರುದ್ಯೋಗ ಪ್ರಮಾಣ ಕನಿಷ್ಠ ಮಟ್ಟಕ್ಕೆ (Unemployment Rate) ಕುಸಿದಿದೆ ಎಂದು ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ.

ನಿರುದ್ಯೋಗ, ಜಿಡಿಪಿ ಬೆಳವಣಿಗೆ ಕುರಿತು ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌ (National Sample Survey Office-NSSO) ವರದಿ ನೀಡಿದೆ. ದೇಶದಲ್ಲಿ ೨೦೧೭-೧೮ನೇ ವಿತ್ತೀಯ ಸಾಲಿನಲ್ಲಿ ನಿರುದ್ಯೋಗ ಪ್ರಮಾಣವು ಶೇ.೬.೧ರಷ್ಟಿತ್ತು. ಇದು ಕಳೆದ ಒಂದು ದಶಕದಲ್ಲಿಯೇ ಗರಿಷ್ಠ ನಿರುದ್ಯೋಗ ಪ್ರಮಾಣವಾಗಿತ್ತು. ಆದರೆ, ೨೦೨೧-೨೨ನೇ ಸಾಲಿನಲ್ಲಿ ನಿರುದ್ಯೋಗ ಪ್ರಮಾಣವು ಶೇ.೪.೧ಕ್ಕೆ ಕುಸಿದಿದೆ. ಇದು ಸಕಾರಾತ್ಮಕ ಬೆಳವಣಿಗೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಭಾರತದಲ್ಲಿ ಕೃಷಿ ಆಧಾರಿತ ಉದ್ಯೋಗ ಪ್ರಮಾಣ ಕುಸಿಯುತ್ತಿದೆ ಎಂದು ತಿಳಿದುಬಂದಿದೆ. ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ತಮ್ಮ ಗ್ರಾಮಗಳಿಗೆ ತೆರಳಿದ್ದ ಯುವಕರು ಮತ್ತೆ ನಗರಗಳತ್ತ ಮುಖ ಮಾಡಿರುವುದೇ ಇದಕ್ಕೆ ಕಾರಣ ಎಂದೇ ಹೇಳಲಾಗುತ್ತಿದೆ. ಆದಾಗ್ಯೂ, ೨೦೨೪ರ ಲೋಕಸಭೆ ಚುನಾವಣೆ ವೇಳೆಗೆ ಆರ್ಥಿಕ ದತ್ತಾಂಶಗಳು ಸರ್ಕಾರಕ್ಕೆ ಪೂರಕವಾಗಿರಲಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನಿರುದ್ಯೋಗಕ್ಕೆ ರಾಜಕಾರಣಿಗಳೇ ಕಾರಣ: ಡಿ.ಕೆ. ಶಿವಕುಮಾರ್‌ ಪ್ರಶ್ನೆಗೆ Twitterನಲ್ಲಿ ಸ್ವಾರಸ್ಯಕರ ಉತ್ತರಗಳು !

Exit mobile version