ನವ ದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕಂಬೈನ್ಡ್ ಜಿಯೋ ಸೈಂಟಿಸ್ಟ್ ಪರೀಕ್ಷೆಯ (UPSC CGS 2023) ಅಧಿಸೂಚನೆ ಪ್ರಕಟಿಸಿದೆ. ಕೇಂದ್ರ ಸರ್ಕಾರದ ಗ್ರೂಪ್ “ಎʼʼಯ ಒಟ್ಟು 285 ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ನಡೆಯಲಿದೆ.
ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಅಕ್ಟೋಬರ್ 11, 2022 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಆನ್‌ಲೈನ್‌ನಲ್ಲಿಯೇ ಅರ್ಜಿ ಶುಲ್ಕ ಪಾವತಿಸಲು ಅವಕಶ ನೀಡಲಾಗಿದೆ. 2023ರ ಫೆಬ್ರವರಿ 19 ರಂದು ಪೂರ್ವ ಭಾವಿ ಪರೀಕ್ಷೆ ನಡೆಯಲಿದೆ. ಇದರಲ್ಲಿ ಅರ್ಹತೆ ಪಡೆದವರಿಗೆ ಮುಖ್ಯ ಪರೀಕ್ಷೆ ನಡೆಸಲಾಗುತ್ತದೆ. ಮುಖ್ಯ ಪರೀಕ್ಷೆಯನ್ನು 2023ರ ಜೂನ್ 24 ಮತ್ತು 25ರಂದು ನಡೆಸಲಾಗುತ್ತದೆ. ಪೂರ್ವಭಾವಿ ಪರೀಕ್ಷೆಯ ಪರೀಕ್ಷಾ ಕೇಂದ್ರವು ಬೆಂಗಳೂರಿನಲ್ಲಿ ಇರಲಿದೆ. ಆದರೆ ಮುಖ್ಯ ಪರೀಕ್ಷೆಯನ್ನು ರಾಜ್ಯದಲ್ಲಿ ನಡೆಸಲಾಗುವುದಿಲ್ಲ.
ಯಾವೆಲ್ಲಾ ಹುದ್ದೆಗಳಿಗೆ ನೇಮಕ?
ಕೇಂದ್ರ ಗಣಿ ಇಲಾಖೆಯ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿನ
ಜಿಯಾಲಾಜಿಸ್ಟ್ (ಗ್ರೂಪ್ “ಎ”)- 216 ಹುದ್ದೆ
ಜಿಯೋಪಿಜಿಕ್ಸ್ (ಗ್ರೂಪ್ “ಎ”) – 21 ಹುದ್ದೆ
ಕೆಮಿಸ್ಟ್ (ಗ್ರೂಪ್ “ಎ”)- 19 ಹುದ್ದೆ
ಕೇಂದ್ರ ಜಲಶಕ್ತಿ ಇಲಾಖೆಯ ಅಂತರ್ಜಲ ಮಂಡಳಿಯಲ್ಲಿನ
ಸೈಂಟಿಸ್ಟ್ “ಬಿ” (ಹೈಡ್ರೊಜಿಯೊಲಾಜಿ) (ಗ್ರೂಪ್ “ಎ”) -26
ಸೈಂಟಿಸ್ಟ್ “ಬಿ” (ಕೆಮಿಕಲ್) (ಗ್ರೂಪ್ “ಎ”) – 26
ಸೈಂಟಿಸ್ಟ್ “ಬಿ” (ಜಿಯೋಪಿಜಿಕ್ಸ್) (ಗ್ರೂಪ್ “ಎ”) -26
ಒಟ್ಟು 285 ಹುದ್ದೆಗಳಿಗೆ ಈ ಪರೀಕ್ಷೆ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಲಿಂಕ್: https://upsconline.nic.in/upsc/OTRP/
ಯಾರು ಅರ್ಜಿ ಸಲ್ಲಿಸಬಹುದು?
Geological Science or Geology or Applied Geology or Geo- Exploration or Mineral
Exploration or Engineering Geology or Marine Geology or Earth Science and Resource Management or Oceanography and Coastal Areas Studies or Petroleum Geosciences or Geochemistry ಯಲ್ಲಿ ಎಂಎಸ್ಸಿ ಮಾಡಿದವರು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿನ ಜಿಯಾಲಾಜಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
Physics or Applied Physics or M.Sc. (Geophysics) or Integrated M.Sc. (Exploration
Geophysics) or M.Sc (Applied Geophysics) or M.Sc. (Marine Geophysics) or M.Sc. (Tech.) (AppliedGeophysics) ನಲ್ಲಿ ಎಂಎಸ್ಸಿ ಮಾಡಿದವರು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿನ ಜಿಯೋಪಿಜಿಕ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
Chemistry or Applied Chemistry or Analytical Chemistry ನಲ್ಲಿ ಎಂಎಸ್ಸಿ ಮಾಡಿದವರು ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿನ ಕೆಮಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
Geology or applied Geology or Marine Geology or Hydrogeology ಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅಂತರ್ಜಲ ಮಂಡಳಿಯಲ್ಲಿನ ಸೈಂಟಿಸ್ಟ್ “ಬಿ” ಹುದ್ದೆಗಳಿಗೆ ಅರ್ಜಿಸಲ್ಲಿಸಬಹುದಾಗಿರುತ್ತದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 21-09-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-10-2022
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 11-10-2022
ಅರ್ಜಿ ಹಿಂದಕ್ಕೆ ಪಡೆಯಲು ಅವಕಾಶ: 19-10-2022 ರಿಂದ 25-10-2022
ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ: 011-23381125/011-23385271/011-23098543.
ಯುಪಿಎಸ್‌ಸಿ ವೆಬ್ ವಿಳಾಸ: https://www.upsc.gov.in
ವಯೋಮಿತಿ ಎಷ್ಟು?
21 ರಿಂದ 32 ವರ್ಷದೊಳಗಿನ ಎಂಜಿನಿಯರಿಂಗ್ ಪದವೀಧರರು ಎಂಜಿನಿಯರಿಂಗ್ ಸರ್ವೀಸಸ್ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ನೀಡಲಾಗುತ್ತದೆ.
ನೇಮಕಾತಿಯ ಅಧಿಸೂಚನೆಯನ್ನು ಓದಲು ಲಿಂಕ್: https://www.upsc.gov.in/exams-related-info/exam-notification
ಅರ್ಜಿ ಶುಲ್ಕ ಎಷ್ಟು?
ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು 200 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಮಹಿಳೆಯರು, ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕದಿಂದ ಸಂಪೂರ್ಣ ವಿನಾಯ್ತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಪಾವತಿಸುವುದಾದರೆ 10-10-2022ರ ಒಳಗೆ ಸಲ್ಲಿಸಬೇಕಿದೆ. ಆನ್‌ಲೈನ್
ನಲ್ಲಿಯೂ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿರುತ್ತದೆ. ಇದಕ್ಕೆ 11-10-2022 ಕೊನೆಯ ದಿನವಾಗಿರುತ್ತದೆ.
ಇದನ್ನೂ ಓದಿ | UPSC ESE 2023 | ಎಂಜಿನಿಯರಿಂಗ್ ಸರ್ವೀಸಸ್ ಪರೀಕ್ಷೆಗೆ ಅಧಿಸೂಚನೆ ಪ್ರಕಟ