ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದ (UPSC) ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದಾಗಲೆಲ್ಲ ಅಭ್ಯರ್ಥಿಗಳಿಗೆ ಹೊಸದಾಗಿ ನೋಂದಣಿ ಮಾಡಿಕೊಳ್ಳುವ ತಾಪತ್ರಯ ಇರುತ್ತದೆ. ಆದರೆ, ಈ ಸಂಕಷ್ಟ ಇನ್ನು ಮುಂದೆ ಇರುವುದಿಲ್ಲ. ಅಭ್ಯರ್ಥಿಗಳ ಕಷ್ಟ ತಪ್ಪಿಸಲು ಯುಪಿಎಸ್‌ಸಿಯು ಒಂದು ಬಾರಿ ನೋಂದಣಿ (one-time registration -OTR) ವ್ಯವಸ್ಥೆ ಜಾರಿ ಮಾಡಿದೆ.
ಕೇಂದ್ರ ಲೋಕಸೇವಾ ಆಯೋಗದ ನೂತನ ವ್ಯವಸ್ಥೆಯಿಂದಾಗಿ ಅಭ್ಯರ್ಥಿಗಳು ಯುಪಿಎಸ್‌ಸಿಯ ಪ್ರತಿ ನೇಮಕಾತಿ ವೇಳೆ ತಮ್ಮ ಮೂಲ ಮಾಹಿತಿ ನೀಡಿ, ನೋಂದಣಿ ಮಾಡಿಕೊಳ್ಳುವುದು ತಪ್ಪುತ್ತದೆ. ಒಮ್ಮೆ ಮಾತ್ರ ನೋಂದಣಿ ಮಾಡಿಕೊಳ್ಳುವುದರಿಂದ ಸಮಯ ಉಳಿಯುವ ಜತೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯೂ ಸುಲಭವಾಗುತ್ತದೆ.
ಅಭ್ಯರ್ಥಿಯು ಒಮ್ಮೆ ನೋಂದಣಿ ಮಾಡಿಕೊಂಡಾಗ ಅವನ\ಅವಳ ಮಾಹಿತಿಯು ಯುಪಿಎಸ್‌ಸಿ ಸರ್ವರ್‌ನಲ್ಲಿ ಭದ್ರವಾಗಿರುತ್ತದೆ ಎಂದು ಆಯೋಗ ತಿಳಿಸಿದೆ. ನೋಂದಣಿ ಮಾಡಿಕೊಳ್ಳಲು ಬಯಸುವ ಅಭ್ಯರ್ಥಿಗಳು ಯುಪಿಎಸ್‌ಸಿಯ upsc.gov.in ಹಾಗೂ upsconline.nic.in ಗೆ ಭೇಟಿ ನೀಡಬಹುದು.
ಇದನ್ನೂ ಓದಿ | UPSC Results 2021: ಖಡಕ್ ಅಧಿಕಾರಿಗಳ ಪ್ರೇರಣಿಯಿಂದ ಯುಪಿಎಸ್‌ಸಿ ಬರೆದ ಶಿವಮೊಗ್ಗ ವೈದ್ಯಗೆ 641ನೇ ರ‍್ಯಾಂಕ್