ಭಾರತೀಯ ರೈಲ್ವೆಯಲ್ಲಿನ ಗ್ರೂಪ್ “ಎʼʼ ಹುದ್ದೆಗಳಿಗೆ ನೀವು ನೇಮಕವಾಗಬೇಕೇ? ಹಾಗಾದರೆ ಈ ಬಾರಿಯಿಂದ ಕೇಂದ್ರ ಲೋಕ ಸೇವಾ ಆಯೋಗವು (ಯುಪಿಎಸ್‌ಸಿ) ನಾಗರಿಕ ಸೇವಾ ಹುದ್ದೆಗಳ (ಎಎಎಸ್) ನೇಮಕಕ್ಕೆ (UPSC Recruitment 2023) ನಡೆಸುತ್ತಿರುವ ಪರೀಕ್ಷೆಗೇ ಅರ್ಜಿ ಸಲ್ಲಿಸಿ!
ಏಕೆಂದರೆ ಇನ್ನು ಮುಂದೆ ಈ ಹುದ್ದೆಗೆ ನೇಮಕ ಮಾಡಿಕೊಳ್ಳಲು ಭಾರತೀಯ ರೈಲ್ವೆ ಇಲಾಖೆಯು ನಡೆಸುತ್ತಿದ್ದ ಭಾರತೀಯ ರೈಲ್ವೆ ಮ್ಯಾನೇಜ್‌ಮೆಂಟ್ ಸರ್ವೀಸ್(IRMS) ಪರೀಕ್ಷೆಯನ್ನು ರದ್ದುಪಡಿಸಲಾಗಿದ್ದು, ಯುಪಿಎಸ್‌ಸಿಯು ನಡೆಸುವ ಐಎಎಸ್/ಐಎಫ್‌ಎಸ್ ಪರೀಕ್ಷೆಯೊಂದಿಗೇ ಈ ಪರೀಕ್ಷೆಯನ್ನೂ ವಿಲೀನಗೊಳಿಸಲಾಗಿದೆ.
ಈ ಸಂಬಂಧ ಕಳೆದ ಡಿಸೆಂಬರ್‌ನಲ್ಲಿಯೇ ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ರೈಲ್ವೆ ಸಚಿವಾಲಯದ ಅಧಿಕಾರಿಗಳು, ಯುಪಿಎಸ್‌ಸಿ ಮತ್ತು ಸಿಬ್ಬಂದಿ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಇದುವರೆಗೆ ನಡೆಸಲಾಗುತ್ತಿದ್ದ “ಭಾರತೀಯ ರೈಲ್ವೆ ನಿರ್ವಹಣಾ ಸೇವೆʼʼ(IRMS) ನೇಮಕಾತಿ ಪರೀಕ್ಷೆಯನ್ನು ರದ್ದು ಪಡಿಸಿ, ಯುಪಿಎಸ್‌ಸಿ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆಯ ಮೂಲಕವೇ ಈ ಹುದ್ದೆಗಳಿಗೂ ನೇಮಕ ಮಾಡಲು ತೀರ್ಮಾನಿಸಿದ್ದಾರೆ.
ಈಗಾಗಲೇ ಯುಪಿಎಸ್‌ಸಿಯು ನಾಗರಿಕ ಸೇವಾ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಅಧಿಸೂಚನೆಯಲ್ಲಿಯೇ ಭಾರತೀಯ ರೈಲ್ವೆ ಮ್ಯಾನೇಜ್‌ಮೆಂಟ್ ಸರ್ವೀಸ್(IRMS) ಹುದ್ದೆಗಳಿಗೂ ಈ ಪರೀಕ್ಷೆ ಮೂಲಕವೇ ನೇಮಕ ನಡೆಯಲಿದೆ ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ (Click Here) ಮಾಡಿ.
ಐಆರ್‌ಎಂಎಸ್ ಹುದ್ದೆಗೆ ನೇಮಕ ಹೇಗೆ?
ಇನ್ನು ಯುಪಿಎಸ್‌ಸಿಯು ಐಎಎಸ್ ಅಧಿಕಾರಿಗಳ ನೇಮಕಕ್ಕೆ ಹೊರಡಿಸುವ ಅಧಿಸೂಚನೆಯಲ್ಲಿಯೇ ಐಆರ್‌ಎಂಎಸ್ ಹುದ್ದೆಗಳಿಗೂ ಸೇರಿಸಿಯೇ ಅಧಿಸೂಚನೆ ಹೊರಡಿಸುತ್ತದೆ. ಒಂದೇ ಪೂರ್ವಭಾವಿ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಮುಖ್ಯ ಪರೀಕ್ಷೆಯನ್ನು ಮಾತ್ರ ಐಆರ್‌ಎಂಎಸ್ ಹುದ್ದೆಗಳಿಗೆ ಪ್ರತ್ಯೇಕವಾಗಿ ನಡೆಸಲಾಗುತ್ತದೆ. ಇದುವರೆಗೆ ಭಾರತೀಯ ಅರಣ್ಯ ಸೇವಾ (ಐಎಫ್‌ಎಸ್) ಹುದ್ದೆಗಳಿಗೂ ಹೀಗೆಯೇ ಒಂದೇ ಪೂರ್ವಭಾವಿ ಪರೀಕ್ಷೆ ನಡೆಸಿ, ಮುಖ್ಯ ಪರೀಕ್ಷೆಯನ್ನು ಪ್ರತ್ಯೇಕವಾಗಿ ನಡೆಸಲಾಗುತ್ತಿತ್ತು. ಇದೇ ಪದ್ಧತಿ ಐಆರ್‌ಎಂಎಸ್ ಹುದ್ದೆಗಳಿಗೂ ಅನ್ವಯವಾಗಲಿದೆ.
ಇತ್ತ ಗಮನಿಸಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-02-2023
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 21-02-2023 (6:00 PM)
ಅರ್ಜಿಯಲ್ಲಿ ಬದಲಾವಣೆ ಮಾಡಲು ಅವಕಾಶ : 22.02.2023 ರಿಂದ 28.02.2023
ಪೂರ್ವಭಾವಿ ಪರೀಕ್ಷೆ ದಿನಾಂಕ: 28-05-2023
ಸಹಾಯವಾಣಿ ಸಂಖ್ಯೆ: 011-23385271 / 011-23381125 / 011-23098543
ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ ವಿಳಾಸ : https://www.upsc.gov.in/
ಪೂರ್ವಭಾವಿ ಪರೀಕ್ಷೆಯು (ಪ್ರಿಲಿಮ್ಸ್) ಅರ್ಹತಾ ಪರೀಕ್ಷೆಯಾಗಿದ್ದು, ಇದರಲ್ಲಿ ಅರ್ಹತೆ ಪಡೆದವರು ಮುಖ್ಯ ಪರೀಕ್ಷೆ ಬರೆಯಬಹುದಾಗಿದೆ. ಮುಖ್ಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ನೇಮಕ ನಡೆಯಲಿದೆ.
ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ನಾಗರಿಕ ಸೇವಾ ಹುದ್ದೆಗಳಿಗಾಗಿನ ಮುಖ್ಯ ಪರೀಕ್ಷೆ (CSE-Main) ಅಥವಾ ಭಾರತೀಯ ರೈಲ್ವೆ ಮ್ಯಾನೇಜ್‌ಮೆಂಟ್ ಸರ್ವೀಸ್(IRMS) ಪರೀಕ್ಷೆ ಇದರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆಯಬಹುದಾಗಿರುತ್ತದೆ. ಐಆರ್‌ಎಂಎಸ್ ಮುಖ್ಯ ಪರೀಕ್ಷೆಗೂ ಐಎಎಸ್ ಮುಖ್ಯ ಪರೀಕ್ಷೆಯ ನಿಯಮಗಳೇ ಅನ್ವಯವಾಗಲಿದೆ. ಅರ್ಹತಾ ಪರೀಕ್ಷೆ ಮತ್ತು ಐಚ್ಛಿಕ ವಿಷಯಗಳ ಪರೀಕ್ಷೆಯ ಭಾಷೆ ಮತ್ತು ಶೈಲಿಯು ಐಎಎಸ್ ಮುಖ್ಯ ಪರೀಕ್ಷೆಯಂತೆಯೇ ಇರಲಿದೆ.
ಹೇಗಿರಲಿದೆ ಮುಖ್ಯ ಪರೀಕ್ಷೆ?
- Qualifying Papers
Paper A– One of the Indian Languages to be selected by the candidate from the Languages included in the Eighth Schedule to the Constitution. 300 marks
Paper B – English 300 marks
- Papers to be counted for merit
Optional Subject ‐ Paper 1 250 marks
Optional Subject ‐ Paper 2 250 marks
- Personality Test 100 marks
List of optional subjects from which a candidate is to choose only one optional subject
- Civil Engineering,
- Mechanical Engineering,
- Electrical Engineering
- Commerce and Accountancy.
ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here ) ಮಾಡಿ.
IRMS ಪರೀಕ್ಷೆಗೆ ವಿದ್ಯಾರ್ಹತೆ ಏನು?
ಎಂಜಿನಿಯರಿಂಗ್ ಪದವೀಧರರು, ವಾಣಿಜ್ಯ ವಿಷಯದಲ್ಲಿ ಪದವಿ ಪಡೆದವರು ಅಥವಾ ಸಿಎ ಮಾಡಿದವರು ಈ ಪರೀಕ್ಷೆ ಬರೆಯಬಹುದಾಗಿರುತ್ತದೆ. ಒಂದು ವೇಳೆ 150 ಐಆರ್‌ಎಂಎಸ್ ಹುದ್ದೆಗಳಿಗೆ ನೇಮಕ ನಡೆಯುತ್ತಿದೆ ಎಂದಾದರೆ ಇದರಲ್ಲಿ ಸಿವಿಲ್ 30 ಹುದ್ದೆ, ಮೆಕಾನಿಕಲ್ 30 ಹುದ್ದೆ, ಎಲೆಕ್ಟ್ರಿಕಲ್ 60 ಮತ್ತು ಸಿಎ 30 ಹುದ್ದೆಗಳಾಗಿರಲಿವೆ.
ವಯೋಮಿತಿ ಎಷ್ಟು?
21 ರಿಂದ 32 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ವಯಸ್ಸನ್ನು ಆಗಸ್ಟ್ 1, 2023 ಕ್ಕೆ ಲೆಕ್ಕ ಹಾಕಲಾಗುತ್ತದೆ. ಗರಿಷ್ಠ ವಯೋಮಿತಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿಗೆ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ಸಡಿಲಿಕೆ ನೀಡಲಾಗಿದೆ. ಸಾಮಾನ್ಯ ಅಭ್ಯರ್ಥಿಗಳು ಆರು ಬಾರಿ ಮಾತ್ರ ಈ ಪರೀಕ್ಷೆ ಬರೆಯಬಹುದು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು. ಒಬಿಸಿ ಅಭ್ಯರ್ಥಿಗಳು 9 ಬಾರಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ : KMF SHIMUL Recruitment 2023 : ಹಾಲು ಒಕ್ಕೂಟದಲ್ಲಿ 194 ಹುದ್ದೆ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ