ಬೆಂಗಳೂರು: 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ (ಐಎಎಸ್) ಫಲಿತಾಂಶ ಪ್ರಕಟಗೊಂಡಿದ್ದು, (UPSC result 2021) ರಾಜ್ಯದಿಂದ ಒಟ್ಟು 24 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ ಬಾರಿ 100 ರ‍್ಯಾಂಕ್‌ನೊಳಗೆ ರಾಜ್ಯದ ಇಬ್ಬರು ಅಭ್ಯರ್ಥಿಗಳಿದ್ದಾರೆ. ಆದರೆ ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ಬಾರಿ ರಾಜ್ಯದ ಟಾಪರ್ ಗಳ ಸಂಖ್ಯೆ ಕುಸಿದಿದೆ.
ದಾವಣಗೆರೆಯ ಅವಿನಾಶ್ 31ನೇ ರ‍್ಯಾಂಕ್ ಪಡೆಯುವುದರೊಂದಿಗೆ ರಾಜ್ಯಕ್ಕೆ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ರಾಜ್ಯದ ಮತ್ತೋಬ್ಬ ಅಭ್ಯರ್ಥಿ ಬೆನಕ ಪ್ರಸಾದ್ ಎನ್.ಜೆ. 92ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಆಯ್ಕೆಯಾದ ರಾಜ್ಯದ ಇತರ ಅಭ್ಯರ್ಥಿಗಳ ಪಟ್ಟಿ ಹೀಗಿದೆ…
ಮೆಲ್ವಿನ್ ವರ್ಗೀಸ್ (118), ನಿಖಿಲ್ ಬಸವರಾಜ್ ಪಾಟೀಲ್ (139), ವಿನಯ್ ಕುಮಾರ್ ಗಾಡ್ಗೆ (151), ಚಿತ್ತರಂಜನ್ ಎಸ್. (155), ಅಪೂರ್ವ ಬಸೂರು (191), ಮನೋಜ್ ಹೆಗ್ಡೆ (213), ಮಂಜುನಾಥ್ ಆರ್. (219), ರಾಜೇಶ್ ಪೊನ್ನಪ್ಪ ಎಂ.ಪಿ. (222), ಕಲ್ಪಶ್ರೀ ಕೆ. ಆರ್. (291), ಹರ್ಷವರ್ಧನ್ ಬಿ ಜೆ (318), ಗಜಾನನ ಬಾಲೆ (319), ವಿನಯ್ ಕುಮಾರ್ ಡಿ ಎಚ್ (352), ಎಂಡಿ ಖಮರುದ್ದೀನ್ ಖಾನ್ (414), ಮೇಘನಾ ಕೆ ಟಿ (425), ರವಿನಂದನ್ ಬಿ ಎಂ (455), ಸವಿತಾ ಗೋಟ್ಯಾಳ್ (479), ಮೊಹಮ್ಮದ್ ಸಿದ್ದೀಕಿ ಷರೀಫ್ (516), ಚೇತನ್ ಕೆ (532), ನಾಗರ್‌ಗೊಜೆ ಶುಭಂ ಭಾವುಸಾಹೇಬ್ (568), ಪ್ರಶಾಂತ್ ಕುಮೃ ಬಿ ಒ (641), ರಾಘವೇಂದ್ರ ಎನ್ (649), ಸುಚಿನ್ ಕೆ ವಿ (682).
ರಾಜ್ಯದ ಅಭ್ಯರ್ಥಿಗಳ ನೀರಸ ಸಾಧನೆ
ಎಂದಿನಂತೆ ರಾಜ್ಯದ ಅಭ್ಯರ್ಥಿಗಳು ನೀರಸ ಸಾಧನೆ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಅಂದರೆ 2019ರಲ್ಲಿ ರಾಜ್ಯದ 40 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. 2020ರಲ್ಲಿ ಕೇವಲ 26 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. 2021ನೇ ಸಾಲಿನಲ್ಲಿ ಕೂಡ ನಿರೀಕ್ಷೆಯಷ್ಟು ಅಭ್ಯರ್ಥಿಗಳು ಆಯ್ಕೆಯಾಗಿಲ್ಲ.
ಇದನ್ನೂ ಓದಿ | UPSC Result | 2021ನೇ ಸಾಲಿನ ಯುಪಿಎಸ್ಸಿ ಫಲಿತಾಂಶ ಪ್ರಕಟ; ಹೆಣ್ಣುಮಕ್ಕಳೇ ಟಾಪ್ 4