Site icon Vistara News

ಅಗ್ನಿಪಥ್‌ ಯೋಜನೆ ಬಗ್ಗೆ ವಾಯುಪಡೆ ಬಿಡುಗಡೆಗೊಳಿಸಿದ ವಿವರದಲ್ಲಿ ಏನೇನಿದೆ?

iaf

ನವದೆಹಲಿ: ಸಶಸ್ತ್ರ ಸೇನಾಪಡೆಯ ಹೊಸ ನೇಮಕಾತಿ ಯೋಜನೆ ಅಗ್ನಿಪಥ್‌ ಬಗ್ಗೆ ವಾಯುಪಡೆ ಬಿಡುಗಡೆಗೊಳಿಸಿರುವ ಸಮಗ್ರ ವಿವರ ಹೀಗಿದೆ. ಅಗ್ನಿವೀರರಾಗಲು ಅರ್ಹತೆ, ವೈದ್ಯಕೀಯ ನಿಯಮ, ಸಮವಸ್ತ್ರ, ತರಬೇತಿ, ರಜೆ, ವೇತನ, ನಿವೃತ್ತಿಯ ಬಳಿಕ ನೀಡುವ ಸೌಲಭ್ಯಗಳ ಸಂಪೂರ್ಣ ವಿವರ ಕೊಟ್ಟಿದ್ದು, ಇಂತಿದೆ.

೧. ಅಗ್ನಿಪಥ್‌ ಸಶಸ್ತ್ರ ಸೇನಾಪಡೆಯ ಹೊಸ ನೇಮಕಾತಿ ಯೋಜನೆಯಾಗಿದೆ. ಈ ಯೋಜನೆಯಡಿ ಸೇನೆಗೆ ನೇಮಕವಾಗುವವರನ್ನು ಅಗ್ನಿವೀರರು ಎಂದು ಕರೆಯಲಾಗುವುದು. ಈ ಯೋಜನೆಯಡಿಯಲ್ಲಿ ವಾಯುಪಡೆಗೆ ನೇಮಕವಾಗುವವರಿಗೆ 4 ವರ್ಷಗಳ ಅವಧಿಗೆ ವಾಯುಪಡೆ ಕಾಯಿದೆ-1950 ಅನ್ವಯವಾಗುತ್ತದೆ. ದೇಶದ ಎಲ್ಲ ಭಾಗಗಳಿಂದಲೂ ನೇಮಕಾತಿ ನಡೆಯಲಿದೆ. ಇದಕ್ಕಾಗಿ ಆನ್‌ಲೈನ್‌ STAR ಪರೀಕ್ಷೆ, ವಿಶೇಷ ರ್‍ಯಾಲಿಗಳು ನಡೆಯಲಿವೆ. ಮಾನ್ಯತೆ ಪಡೆದ ಪ್ರತಿಷ್ಠಿತ ಇಂಡಸ್ಟ್ರಿಯಲ್‌ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ಗಳಲ್ಲಿ ನೇಮಕಾತಿ ಶಿಬಿರಗಳನ್ನು ಆಯೋಜಿಸಲಾಗುವುದು. (ಉದಾಹರಣೆಗೆ NSQF)

2. ನೇಮಕಾತಿಯ ಭಾಗವಾಗಿ ಎಲ್ಲ ಷರತ್ತು ಮತ್ತು ನಿಬಂಧನೆಗಳಿಗೆ ಅಗ್ನಿವೀರರು ಔಪಚಾರಿಕವಾಗಿ ಅನುಮೋದನೆ ನೀಡಬೇಕು. 18 ವರ್ಷಕ್ಕಿಂತ ಕೆಳಗಿನ ಆಕಾಂಕ್ಷಿಗಳು ಪೋಷಕರ/ಪಾಲಕರ ಲಿಖಿತ ಒಪ್ಪಿಗೆ ಪಡೆದಿರಬೇಕು.

೩. ನಾಲ್ಕು ವರ್ಷಗಳ ಬಳಿಕ ಅಗ್ನಿವೀರರು ಸಮಾಜಕ್ಕೆ ಮರಳುತ್ತಾರೆ. ಹೀಗಿದ್ದರೂ ವಾಯು ಸೇನೆಯ ಅಗತ್ಯಾನುಸಾರ ರೆಗ್ಯುಲರ್‌ ಕೇಡರ್‌ನಲ್ಲೂ ಅರ್ಹ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳಲಾಗುವುದು. ಅಗ್ನಿವೀರರು ಗಳಿಸಿದ ಕೌಶಲಗಳಿಗೆ ಸರ್ಟಿಫಿಕೇಟ್‌ ಪ್ರದಾನ ಮಾಡಲಾಗುವುದು. ಇದಕ್ಕೆ ಕೇಂದ್ರೀಯ ಮಂಡಳಿಯ ಮಾನ್ಯತೆಯೂ ಇರುತ್ತದೆ. ಶೇ.25ಕ್ಕಿಂತ ಹೆಚ್ಚಿನ ಅಗ್ನಿವೀರರನ್ನು ವಾಯುಪಡೆಗೆ ನೇಮಕ ಮಾಡಿಕೊಳ್ಳಲಾಗುವುದಿಲ್ಲ.

೪. ಅಗ್ನಿವೀರರಿಗೆ ನಾಲ್ಕು ವರ್ಷಗಳ ಸೇವೆಯ ಬಳಿಕ ಸಶಸ್ತ್ರ ಸೇನಾಪಡೆಯಲ್ಲಿ ಆಯ್ಕೆಯಾಗಲೇಬೇಕು ಎಂಬ ಯಾವುದೇ ಹಕ್ಕು ಇರುವುದಿಲ್ಲ. ಸರ್ಕಾರದ ನಿಯಮಾನುಸಾರ ನೇಮಕಾತಿ ನಡೆಯುತ್ತದೆ.

೫. ಅರ್ಹತೆ: ಅಖಿಲ ಭಾರತ ಮಟ್ಟ. ಎಲ್ಲ ವರ್ಗಗಳಿಂದ ಬಂದವರೂ ಅರ್ಜಿ ಸಲ್ಲಿಸಬಹುದು.

೬. ವಯೋಮಿತಿ, ಶೈಕ್ಷಣಿಕ ಅರ್ಹತೆ, ದೈಹಿಕ ಸಾಮರ್ಥ್ಯ: ಅರ್ಹ ವಯಸ್ಸು 17.5ಯಿಂದ ೨೧ ವರ್ಷಗಳು. ಇತರ ಶೈಕ್ಷಣಿಕ ಅರ್ಹತೆಗಳನ್ನು ಮತ್ತು ದೈಹಿಕ ಸಾಮರ್ಥ್ಯಗಳ ವಿವರಗಳನ್ನು ವಾಯುಪಡೆ ಬಿಡಗಡೆಗೊಳಿಸಲಿದೆ.

೭.ವೈದ್ಯಕೀಯ ಅರ್ಹತೆ: ಅಗ್ನಿವೀರರು ನಿಗದಿತ ವರ್ಗಕ್ಕೆ ಅಗತ್ಯ ಇರುವ ದೈಹಿಕ ಸಾಮರ್ಥ್ಯವನ್ನು ಹೊಂದಿರಬೇಕು.

೮. ಉದ್ಯೋಗದ ಬದ್ಧತೆ: ಅಗ್ನಿವೀರರು ವಾಯುಪಡೆ ನಿಯೋಜಿಸಿದ ಕರ್ತವ್ಯಗಳನ್ನು ಮಾಡಬೇಕಾಗುತ್ತದೆ.

೯. ಸಮವಸ್ತ್ರ: ಅಗ್ನಿವೀರರಿಗೆ ವಿಶಿಷ್ಟವಾದ ಸಮವಸ್ತ್ರವನ್ನು ನೀಡಲಾಗುತ್ತದೆ.

೧೦. ಗೌರವ ಮತ್ತು ಪರಸ್ಕಾರ: ಅಗ್ನಿವೀರರಿಗೆ ವಾಯುಪಡೆಯ ನಿಯಮಗಳ ಅನುಸಾರ ಗೌರವ, ಪುರಸ್ಕಾರಗಳು ದೊರೆಯುತ್ತವೆ.

೧೧. ತರಬೇತಿ: ವಾಯುಪಡೆಯ ಅಗತ್ಯಾನುಸಾರ ಮಿಲಿಟರಿ ತರಬೇತಿ ನೀಡಲಾಗುತ್ತದೆ.

೧೨. ಮೌಲ್ಯಮಾಪನ: ಅಗ್ನಿವೀರರ ಕಾರ್ಯನಿರ್ವಹಣೆಯ ದಕ್ಷತೆ ಬಗ್ಗೆ ನಿಷ್ಪಕ್ಷಪಾತ, ಪಾರದರ್ಶಕ ರೀತಿಯಲ್ಲಿ ಐಎಎಫ್‌ ಮೌಲ್ಯಮಾಪನ ನಡೆಸಲಿದೆ. ಅಗ್ನಿವೀರರು ಗಳಿಸುವ ಕೌಶಲಗಳನ್ನು ದಾಖಲಿಸಿಕೊಳ್ಳಲಾಗುವುದು. ಇದಕ್ಕಾಗಿ ಕೇಂದ್ರೀಕೃತ ವ್ಯವಸ್ಥೆ ಇರುತ್ತದೆ. ಮೊದಲ ಬ್ಯಾಚ್‌ನ ಅಗ್ನಿವೀರರ ನೇಮಕಕ್ಕೆ ಮುನ್ನ ವಿವರವಾದ ಮಾರ್ಗದರ್ಶಿಯನ್ನು ನೀಡಲಾಗುವುದು.

೧೩. ರಜೆ: ವಾಯಪಡೆಯ ನಿಯಮಾನುಸಾರ ರಜಾ ಸೌಲಭ್ಯ ಸಿಗಲಿದೆ. ವಾರ್ಷಿಕ ರಜೆ: ವರ್ಷಕ್ಕೆ 30 ದಿನಗಳು. ವೈದ್ಯಕೀಯ ರಜೆ ವೈದ್ಯಕೀಯ ಸಲಹೆಯನ್ನು ಆಧರಿಸಿ ಲಭಿಸಲಿದೆ.

೧೪. ವೈದ್ಯಕೀಯ ಸೌಲಭ್ಯಗಳು: ಕೆಲಸದ ಅವಧಿಯಲ್ಲಿ ಸರ್ವೀಸ್‌ ಆಸ್ಪತ್ರೆಗಳು ಮತ್ತಿ ಸಿಎಸ್‌ಡಿ ಪ್ರಾವಿಶನ್‌ ಅಡಿಯಲ್ಲಿ ವೈದ್ಯಕೀಯ ಸೌಲಭ್ಯ ಸಿಗಲಿದೆ.

೧೫. ಸ್ವ ಇಚ್ಛೆಯಿಂದ ಬಿಡುಗಡೆ: ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ, ಇತರ ಅವಧಿಯಲ್ಲಿ ಅಗ್ನಿವೀರರು ಸ್ವ ಇಚ್ಛೆಯಿಂದ ಅವಧಿಗೆ ಮುನ್ನ ಸೇವೆಯಿಂದ ಬಿಡುಗಡೆ ಹೊಂದಲು ಅವಕಾಶ ಇದೆ.

೧೬. ವೇತನ ಮತ್ತು ಇತರ ಭತ್ಯೆ: ಅಗ್ನಿವೀರರಿಗೆ ಮಾಸಿಕ ೩೦,೦೦೦ ರೂ. ವೇತನ ದೊರೆಯಲಿದೆ. ವಾರ್ಷಿಕ ವೇತನ ಹೆಚ್ಚಳ ಇರಲಿದೆ.

೧೭. ಅಗ್ನಿವೀರ್‌ ಕಾರ್ಪಸ್‌ ಫಂಡ್:‌ ಅಗ್ನಿವೀರರಿಗೆ ಅಗ್ನಿವೀರ್‌ ಕಾರ್ಪಸ್‌ ಫಂಡ್‌ ಎಂಬ ನಿಧಿ ದೊರೆಯಲಿದೆ. ಮಾಸಿಕ ವೇತನದ ೩೦% ಇದಕ್ಕೆ ವಿನಿಯೋಗವಾಗಲಿದೆ. ಇದಕ್ಕೆ ಪಿಪಿಎಫ್‌ಗೆ ಸಮನಾದ ಬಡ್ಡಿ ದರವನ್ನು ಸರ್ಕಾರ ನೀಡಲಿದೆ.

೧೮. ನಾಲ್ಕು ವರ್ಷಗಳ ಅವಧಿಯ ಬಳಿಕ ಅಗ್ನಿವೀರರಿಗೆ “ಸೇವಾ ನಿಧಿʼ ಪ್ಯಾಕೇಜ್ ದೊರೆಯಲಿದೆ. ಅಗ್ನಿವೀರ್‌ ಕಾರ್ಪಸ್‌ ಫಂಡ್‌ಗೆ ಜಮೆಯಾಗುವ ಹಣ ಮತ್ತು ಬಡ್ಡಿಯನ್ನು ಇದು ಒಳಗೊಂಡಿರಲಿದೆ.‌ ಸರ್ಕಾರ ಕೂಡ ಅಷ್ಟೇ ಮೊತ್ತವನ್ನು ನೀಡಲಿದೆ. ಸೇವಾನಿಧಿಗೆ ಆದಾಯ ತೆರಿಗೆ ಇರುವುದಿಲ್ಲ.

೧೯. ಒಂದು ವೇಳೆ ಅವಧಿಗೆ ಮುನ್ನ ಸ್ವ ಇಚ್ಛೆಯಿಂದ ಬಿಡುಗಡೆ ಆಗುವವರಿಗೆ ಅವರ ಪಾಲಿನ ಹಣ ಮಾತ್ರ ಬಡ್ಡಿ ಸಹಿತ ಸಿಗಲಿದೆ.

೨೦. ವೇತನ ಮತ್ತು ಸೇವಾನಿಧಿ ಪ್ಯಾಕೇಜ್ ವಿವರ

ವರ್ಷಮಾಸಿಕ ಪ್ಯಾಕೇಜ್
(ರೂ.ಗಳಲ್ಲಿ)
ಕೈಗೆ (70%)ಕಾರ್ಪಸ್‌ ಫಂಡ್‌ಗೆ ಅಗ್ನಿವೀರರ ಮಾಸಿಕ ಕೊಡುಗೆಕಾರ್ಪಸ್‌ ಫಂಡ್‌ಗೆ ಸರ್ಕಾರದ ಮಾಸಿಕ ಕೊಡುಗೆ
1 ನೇ ವರ್ಷ300002100090009000
2ನೇ ವರ್ಷ330002310099009900
3ನೇ ವರ್ಷ36500255501095010950
4ನೇ ವರ್ಷ40000280001200012000
4 ವರ್ಷಗಳಲ್ಲಿ ಕಾರ್ಪಸ್‌ ಫಂಡ್‌ಗೆ ಅಗ್ನಿವೀರರ ಕೊಡುಗೆ5.02 ಲಕ್ಷ
4 ವರ್ಷಗಳ ಬಳಿಕ ಸಿಗುವ ಸೇವಾನಿಧಿ 10.4 ಲಕ್ಷ

೨೧. ಸೇವಾನಿಧಿಯ ಮಾದರಿ: ಸೇವಾನಿಧಿಯ ಪ್ಯಾಕೇಜ್‌ ಅನ್ನು ಅಗ್ನಿವೀರರ ಸ್ವ ಉದ್ಯೋಗಕ್ಕೆ , ಸ್ವಂತ ಉದ್ದಿಮೆಗೆ ಬಳಸಲು ಸಹಕಾರಿಯಾಗುವಂತೆ ರೂಪಿಸಲಾಗಿದೆ. ಇದರ ಆಧಾರದಲ್ಲಿ ಬ್ಯಾಂಕ್‌ ಸಾಲ ಪಡೆಯಬಹುದು.

೨೨. ಸೇವೆಯ ಅವಧಿಯಲ್ಲಿ ೪೮ ಲಕ್ಷ ರೂ.ಗಳ ಜಿವ ವಿಮೆಯನ್ನು ಒದಗಿಸಲಾಗುವುದು.

೨೩. ಸೇವಾವಧಿಯಲ್ಲಿ ಮೃತಪಟ್ಟರೆ ೪೮ ಲಕ್ಷ ರೂ.ಗಳ ಜೀವ ವಿಮೆ ದೊರೆಯಲಿದೆ. ಇದರ ಜತೆಗೆ ಇತರ ನಿಧಿಯೂ ದೊರೆಯಲಿದೆ. ವಿಕಲಚೇತನರಾದರೂ ಪರಿಹಾರ ಸಿಗಲಿದೆ.

೨೪. ಕೌಶಲಕ್ಕೆ ಸರ್ಟಿಫಿಕೇಟ್:‌ ಅಗ್ನಿವೀರ್‌ ಸ್ಕಿಲ್‌ ಸರ್ಟಿಫಿಕೇಟ್‌ ಅನ್ನು ಸೇವಾವಧಿಯ ಮುಕ್ತಾಯದ ವೇಳೆ ನೀಡಲಾಗುವುದು.

೨೫. ನಿವೃತ್ತ ಅಗ್ನಿವೀರರ ನೇಮಕ: ನಾಲ್ಕು ವರ್ಷಗಳ ಬಳಿಕ ಸೇವೆಯಿಂದ ನಿವೃತ್ತರಾಗುವ ಅಗ್ನಿವೀರರು ವಾಯಪಡೆಯ ರೆಗ್ಯುಲರ್‌ ಕೇಡರ್‌ಗೆ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.

Exit mobile version