ಬೆಂಗಳೂರು ಮೂಲದ ಪ್ರಮುಖ ಐಟಿ ಕಂಪನಿ ವಿಪ್ರೋ ತನ್ನ ಉದ್ಯೋಗಿಗಳಿಗೆ ಒಂದು ಸಿಹಿ ಸುದ್ದಿ ಕೊಟ್ಟಿದೆ. ದಸರಾ ಪ್ರಾರಂಭವಾಗುತ್ತಿರುವ ಹೊತ್ತಿನಲ್ಲಿಯೇ 2022ನೇ ಆರ್ಥಿಕ ಹಣಕಾಸು ವರ್ಷದ ವೇತನ ಹೆಚ್ಚಳ ಮಾಡುವುದಾಗಿ ಕಂಪನಿ (Wipro announces salary hike) ತಿಳಿಸಿದೆ. ಅದರ ಅನ್ವಯ ಈ ಸೆಪ್ಟೆಂಬರ್ ತಿಂಗಳಿಂದ ಕಂಪನಿಯ ಶೇ.96ರಷ್ಟು ಉದ್ಯೋಗಿಗಳ ವಾರ್ಷಿಕ ವೇತನ ಏರಿಕೆಯಾಗಲಿದೆ.
ಹಣಕಾಸು ವರ್ಷದ ಕಳೆದ ತ್ರೈಮಾಸಿಕದಲ್ಲಿ ಆರ್ಥಿಕ ಪರಿಸ್ಥಿತಿ ಒತ್ತಡದಲ್ಲಿತ್ತು. ಹಾಗಿದ್ದಾಗ್ಯೂ ನಾವು ನಿಯಮಬದ್ಧವಾಗಿ ಉದ್ಯೋಗಿಗಳ ಸ್ಯಾಲರಿ ಹೆಚ್ಚಿಸಿದ್ದೇವೆ ಎಂದು ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ (ಎಚ್ಆರ್-ಹ್ಯೂಮನ್ ರಿಸೋರ್ಸ್ ಆಫೀಸರ್) ಸೌರಭ್ ಗೊವಿಲ್ ಅವರು ಉದ್ಯೋಗಿಗಳಿಗೆ ಮೇಲ್ ಮಾಡಿದ್ದಾರೆ. ಹಾಗೇ, ‘ನೀವು ನಿಮ್ಮ ವೇತನ ಹೆಚ್ಚಳ ಲೆಟರ್ಗಳನ್ನು ಮುಂದಿನ ದಿನಗಳಲ್ಲಿ, ನಿಮ್ಮ ಮ್ಯಾನೇಜರ್ರಿಂದ ಪಡೆಯುತ್ತೀರಿ’ ಎಂಬುದನ್ನೂ ಅವರು ಉದ್ಯೋಗಿಗಳಿಗೆ ತಿಳಿಸಿದ್ದಾರೆ. ಅಂದಹಾಗೇ, ಉದ್ಯೋಗಿಗಳ ಕಾರ್ಯಕ್ಷಮತೆ ಮತ್ತು ಅರ್ಹತೆಯ ಮಾನದಂಡದ ಮೇಲೆ ವೇತನ ಹೆಚ್ಚಳ ಮಾಡಲಾಗಿದ್ದು, ಅದರ ಪ್ರಕಾರ ಪ್ರಸಕ್ತ ಬಾರಿಯಲ್ಲಿ ಶೇ.96ರಷ್ಟು ಕೆಲಸಗಾರರ ಸಂಬಳ ಮಾತ್ರ ಹೆಚ್ಚಲಿದೆ.
ಸಿ 1 ಬ್ಯಾಂಡ್ ಅಂದರೆ, ಮ್ಯಾನೇಜರ್ ಮತ್ತು ಅದಕ್ಕಿಂತ ಮೇಲಿನ ಹುದ್ದೆಯವರಿಗೆ ಜೂನ್ ತಿಂಗಳಿಂದಲೇ ಸಂಬಳ ಹೆಚ್ಚಳವಾಗಿತ್ತು. ಈಗ ಅವರನ್ನು ಹೊರತು ಪಡಿಸಿ, ಅವರಿಗಿಂತ ಕೆಳಗಿನ ಹುದ್ದೆಗಳಲ್ಲಿರುವ ಉದ್ಯೋಗಿಗಳನ್ನು ಮಾತ್ರ ವೇತನ ಏರಿಕೆಗೆ ಪರಿಗಣಿಸಲಾಗಿದೆ. ಸಾಮಾನ್ಯವಾಗಿ ಪ್ರತಿವರ್ಷವೂ ಜೂನ್ ತಿಂಗಳಲ್ಲೇ ಸ್ಯಾಲರಿ ಹೆಚ್ಚಿಸುವ ವಿಪ್ರೋ, ಈ ಸಲ ಮೂರು ತಿಂಗಳು ತಡವಾಗಿ ಏರಿಕೆ ಕೊಟ್ಟಿದೆ.
ಇದನ್ನೂ ಓದಿ: Encroachment | ವಿಪ್ರೊ ಕಟ್ಟಡದ ಮುಂದೆ ತಲೆ ಬಾಗಿ ನಿಂತ ಬುಲ್ಡೋಜರ್, ಕೆಲವು ಕಲ್ಲು ಕಿತ್ತು ಹಾಕಿ ಸ್ಟಾಪ್!