Site icon Vistara News

ಮಾಧ್ಯಮ ವಲಯದಲ್ಲಿ ಡಿಜಿಟಲ್‌ ಕ್ರಾಂತಿ ಆರಂಭ: ಓಪನ್‌ ಮನಿ ಸಹ ಸಂಸ್ಥಾಪಕ ಅನೀಶ್‌ ಅಚ್ಯುತನ್

Anish Achuthan

ಬೆಂಗಳೂರು: ಕಳೆದ ಒಂದೂವರೆ ದಶಕಗಳಿಂದ ಮಾಧ್ಯಮ ವಲಯದಲ್ಲಿ ಉಂಟಾಗಿರುವ ಡಿಜಿಟಲ್‌ ಕ್ರಾಂತಿ ವಿಶಿಷ್ಟವಾಗಿದೆ. ಇದರಿಂದಾಗಿ ಮಾಧ್ಯಮಗಳಲ್ಲಿ ಡಿಜಿಟಲ್‌ ತಂತ್ರಜ್ಞಾನದ ಪ್ರಭಾವ ಹೆಚ್ಚುತ್ತಿದೆ. ಇದು ಪತ್ರಿಕೆ, ಟಿ.ವಿ ವಾರ್ತಾ ವಾಹಿನಿಗಳಿಗೆ ದೊಡ್ಡ ಸವಾಲೂ ಹೌದು. ಆದರೆ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಬಿಸಿನೆಸ್‌ ಮಾದರಿಗೆ ಡಿಜಿಟಲ್‌ ಮಾಧ್ಯಮ ಕಾರಣವಾಗಿದೆ ಎಂದು ಓಪನ್‌ ಡಾಟ್‌ ಮನಿಯ ಸಹ ಸಂಸ್ಥಾಪಕ ಅನೀಶ್‌ ಅಚ್ಯುತನ್‌ ಹೇಳಿದರು.

ಡಿಜಿಟಲ್‌ ಮಾಧ್ಯಮ ಅನೂಹ್ಯ ಅವಕಾಶಗಳನ್ನು ಸೃಷ್ಟಿಸುತ್ತಿರುವುದೂ ಹೌದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವಿಗಳು ಉತ್ಪನ್ನಗಳ ಮಾರಾಟಕ್ಕೂ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಪ್ರಸ್ತುತ ನಿಯಂತ್ರಕ ಮಾರ್ಗದರ್ಶಿ ಮತ್ತು ವ್ಯವಸ್ಥೆಯ ಕೊರತೆ ಇದ್ದರೂ, ವಿಫುಲ ಅವಕಾಶವಾಗಿಯೂ ಪರಿಣಮಿಸಿದೆ ಎಂದು ಓಪನ್‌ ಡಾಟ್‌ ಮನಿಯ ಸಹ ಸಂಸ್ಥಾಪಕ ಅನೀಶ್‌ ಅಚ್ಯುತನ್‌ ಅವರು ತಿಳಿಸಿದರು.

ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಾದೇಶಿಕ ಭಾಷೆಯ ಪ್ರಾಬಲ್ಯ

ಇವತ್ತು ಭಾರತದ ಸಣ್ಣ ಪುಟ್ಟ ನಗರ ಮತ್ತು ಪಟ್ಟಣಗಳಲ್ಲೂ ಡಿಜಿಟಲ್‌ ಮಾಧ್ಯಮ ವಿಸ್ತರಿಸುತ್ತಿದೆ. ಜನರನ್ನು ತಲುಪುವುದು ಮತ್ತು ಪ್ರಭಾವ ಬೀರುವುದು ಈಗ ಸುಲಭವಾಗಿದೆ. ಸ್ವಾರಸ್ಯವೆಂದರೆ ಡಿಜಿಟಲ್‌ ಮಾಧ್ಯಮಗಳಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆ ಹೆಚ್ಚುತ್ತಿದೆ. ಅನೇಕ ಮಂದಿ ಸ್ವ ಉದ್ಯೋಗಿಗಳಾಗಲು, ಉದ್ಯಮಿಯಾಗಿ ಹೊರಹೊಮ್ಮಲು ಡಿಜಿಟಲ್‌ ತಂತ್ರಜ್ಞಾನ ನೆರವಾಗುತ್ತದೆ ಎಂದು ವಿವರಿಸಿದರು.

ಈ ಹಿಂದೆ ಟಿವಿ ಚಾನೆಲ್‌ಗಳು ಸೀಮಿತವಾಗಿತ್ತು. ಈಗ ಡಿಜಿಟಲ್‌ ಮಾಧ್ಯಮಗಳ ಪ್ರವೇಶದಿಂದ ಇಡೀ ಮಾಧ್ಯಮ ಕ್ಷೇತ್ರ ವಿಸ್ತಾರವಾಗಿದೆ. ಇದು ಅವಕಾಶವೂ ಹೌದು. ಭಾರತದಲ್ಲಿ ಮಾಧ್ಯಮಗಳ ನಿಯಂತ್ರಕ ವ್ಯವಸ್ಥೆಯೂ ಸುಧಾರಣೆಯಾಗುತ್ತಿದೆ ಎಂದರು.

Exit mobile version