ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ತುಮಕೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬಿ.ಸಿ. ನಾಗೇಶ್ ಮನೆ ಬಳಿ ಪ್ರತಿಭಟನೆ ಹಿನ್ನೆಲೆ ಬಂಧಿತರಾಗಿದ್ದ 24 NSUI ಕಾರ್ಯಕರ್ತರಿಗೆ ಜಾಮೀನು ಸಿಕ್ಕಿದೆ.
ನಾಗೇಶ್ ಮನೆ ಬಳಿ ಪ್ರತಿಭಟನೆ ನಡೆಸುವ ವೇಳೆ ಆರ್‌ಎಸ್‌ಎಸ್ ಸಮವಸ್ತ್ರ ನಿಕ್ಕರ್ ಸುಟ್ಟಿದ್ದರು. ಇದೇ ವೇಳೆ ನಾಗೇಶ್ ಮನೆ ಮೇಲೆ ದಾಳಿಗೆ ಮುಂದಾಇದ್ದರು ಎನ್ನಲಾಗಿದ್ದು, ಕೀರ್ತಿ ಗಣೇಶ್ ಸೇರಿ 24 ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
ಈ ಕುರಿತು ಗುರುವಾರ ವಿಚಾರಣೆ ನಡೆಸಿದ ತಿಪಟೂರು ಜೆಎಂಎಫ್‌ಸಿ ನ್ಯಾಯಾಲಯ, ಎಲ್ಲ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿದೆ. ಸದ್ಯ ಆರೋಪಿಗಳೆಲ್ಲರೂ ತುಮಕೂರು ಕಾರಾಗೃಹದಲ್ಲಿದ್ದಾರೆ. ಶುಕ್ರವಾರ ಆರೋಪಿಗಳು ಬಿಡುಗಡೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ | ತುಮಕೂರು ಜೈಲಿನಲ್ಲಿ NSUI ಕಾರ್ಯಕರ್ತನ ಭೇಟಿ ಮಾಡಿದ ಡಿ.ಕೆ. ಶಿವಕುಮಾರ್