Site icon Vistara News

ಇಂದು ಸುಚೇಂದ್ರ ಪ್ರಸಾದ್‌ ಮಾತು ಕೇಳಲು ಕ್ಲಬ್‌ಹೌಸ್‌ಗೆ ಬನ್ನಿ; ನೋಂದಣಿಯಾದವರಿಗೆ ಮಾತ್ರ ಅವಕಾಶ

suchendra

ಬೆಂಗಳೂರು: ಮೈತ್ರೀ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನಮ್‌ ವತಿಯಿಂದ ಆಗಸ್ಟ್‌ 17ರಂದು ಬುಧವಾರ ಸಂಜೆ ಕ್ಲಬ್‌ಹೌಸ್‌ನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ. ರಂಗಭೂಮಿ ಕಲಾವಿದ, ಖ್ಯಾತ ನಟ ಸುಚೇಂದ್ರ ಪ್ರಸಾದ್‌ ವಿಷಯ ಮಂಡನೆ ಮಾಡಲಿದ್ದಾರೆ.

ಬುಧವಾರ (ಆ.17) ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ವಿಶೇಷ ಕಾರ್ಯಕ್ರಮವು ಪ್ರಸಾರಗೊಳ್ಳಲಿದೆ. “ಸಂಸ್ಕೃತ ಕಲಿಕೆ ಜೀವನದ ಅನಿವಾರ್ಯತೆಗಳಲ್ಲಿ ಒಂದು” ಎಂಬ ವಿಷಯ ಕುರಿತು ಉಪನ್ಯಾಸ ಹಾಗೂ ಚರ್ಚೆ ನಡೆಯಲಿದೆ. ಸಂಸ್ಕೃತಸಂಚಲನಮ್‌-02 ನಲ್ಲಿ ಕಾರ್ಯಕ್ರಮ ಪ್ರಸ್ತುತಿಯಾಗಲಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರು ಧನ್ಯಶ್ರೀ ಅವರ 7483586269ಗೆ ವಾಟ್ಸ್‌ಆ್ಯಪ್‌ ಮೂಲಕ ನೋಂದಾಯಿಸಿಕೊಳ್ಳಲು ಪ್ರತಿಷ್ಠಾನಮ್‌ ಪ್ರಕಟಣೆ ಮೂಲಕ ತಿಳಿಸಿದೆ.

Exit mobile version